ಬೆಳಗಾವಿಯಲ್ಲಿ ಮರಾಠಿಗರ ಚಳಿ ಬಿಡಿಸಿದ ಕನ್ನಡತಿ ಕಂಡಕ್ಟರ್, ವಿಡಿಯೋ ವೈರಲ್!
ಬೆಳಗಾವಿಯಲ್ಲಿ ಭಾಷಾ ವಿವಾದ ಇದೀಗ ತಣ್ಣಗಾಗಿದೆ. ಬೆಳಗಾವಿಯಲ್ಲಿ ಕರ್ನಾಟಕದ ಸರ್ಕಾರಿ ಬಸ್‌ನ ಕಂಡಕ್ಟರ್‌ನ ಮೇಲೆ ಹಲ್ಲೆ ನಡೆದ ಮೇಲೆ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಎರಡೂ ರಾಜ್ಯಗಳ ನಡುವೆ ಪರಿಸ್ಥಿತಿ ತಿಳಿಯಾಗುತ್ತಿದೆ. ಈ ರೀತಿ ಇರುವಾಗಲೇ ಬೆಳಗಾವಿಯಲ್ಲಿ ಕನ್ನಡತಿ ಕಂಡಕ್ಟರ್‌ವೊಬ್ಬರ ವಿಡಿಯೋ ವೈರಲ್ ಆಗುತ್ತಿದ್ದು. ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಈಚೆಗೆ ಬೆಳಗಾವಿಯಲ್ಲಿ ಕನ್ನಡ ಕಂಡಕ್ಟರ್ ಮೇಲೆ ಹಲ್ಲೆಯಾಗಿರುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಲೇಡಿ ಕಂಡಕ್ಟರ್ ಖಡಕ್ ಕನ್ನಡ ಮಾತಿಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಲೇಡಿ ಕಂಡಕ್ಟರ್ ವಿಡಿಯೋ ವೈರಲ್ ಆಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ದಶಕಗಳಿಂದ ಗಡಿ ಹಾಗೂ ಭಾಷಾ ವಿವಾದ ಇದೆ. ಬೆಳಗಾವಿಯಲ್ಲಿ ಕನ್ನಡ ಭಾಷೆ ಮಾತನಾಡುವವರು ಹಾಗೂ ಮರಾಠಿ ಭಾಷೆ ಮಾತನಾಡುವವರು ಚೆನ್ನಾಗಿಯೇ ಇದ್ದಾರೆ. ಆದರೆ, ಕೆಲವು ಮರಾಠಿ ಪುಂಡರು ಉದ್ದೇಶಪೂರ್ವಕವಾಗಿ ಮರಾಠಿ ಹಾಗೂ ಕನ್ನಡಿಗರ ನಡುವೆ ಜಗಳ ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಎಂಇಎಸ್ ಹಾಗೂ ಕೆಲವು ಮರಾಠಿ ಪುಂಡರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಗಂಭೀರ ಅಥವಾ ಕಠಿಣ ಕಾನೂನು ಕ್ರಮದ ಗಂಭೀರವಾದ ಎಚ್ಚರಿಕೆಯನ್ನು ನೀಡದೆ ಇರುವುದು ಇಲ್ಲಿ ಇವರು ಬಾಲ ಬಿಚ್ಚುವುದಕ್ಕೆ ಕಾರಣವಾಗಿದೆ ಎನ್ನುವ ಆರೋಪವೂ ಇದೆ.

ಕರ್ನಾಟಕದಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ ನಡೆದ ಹಲ್ಲೆಗೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ಸಿಡಿದ್ದೆದ್ದಿವೆ. ಅಲ್ಲದೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೆಳಗಾವಿ ಚಲೋಗೆ ಕರೆ ಸಹ ನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕನ್ನಡತಿ ಕಂಡಕ್ಟರ್ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡತಿ ಕೊಟ್ಟ ಟಾಂಗ್‌ಗೆ ಮೆಚ್ಚುಗೆ: ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಕೆಲವು ಮರಾಠಿಗರ ನಡುವೆ ಕಿರಿಕ್ ನಡೆಯುವುದು ಹೊಸದೇನು ಅಲ್ಲ. ಇದೀಗ ಬೆಳಗಾವಿಯ ಮಜಗಾವಿ ಬಸ್‌ನಲ್ಲಿ ಕನ್ನಡ ಪ್ರೇಮ ಮೆರೆದ ವೀರ ಕನ್ನಡತಿ ಕಂಡಕ್ಟರ್ ವಿಡಿಯೋ ವೈರಲ್ ಆಗಿದೆ. ಮಜಗಾವಿ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಚಿಲ್ಲರೆ ವಿಚಾರವಾಗಿ ವಾಗ್ವಾದ ನಡೆದಿರುವುದು ವಿಡಿಯೋದಲ್ಲಿ ಇದೆ.
ಬೆಳಗಾವಿಯ ಮಜಗಾವಿ ಬಸ್ ನಲ್ಲಿ ಕನ್ನಡ ಪ್ರೇಮ ಮೆರೆದ ವೀರ ಕನ್ನಡತಿ, ನಿರ್ವಾಹಕಿ ಅಕ್ಕ 🙏🙏
— Belagavi - ಬೆಳಗಾವಿ (@BelagaviKA) January 3, 2025
ಬಸ್ ನಲ್ಲಿ ಮೊದಲು ಕನ್ನಡದಲ್ಲಿ ಮಾತನಾಡಿ,ಆಮೇಲೆ ಮರಾಠಿ ಭಾಷೆಯಲ್ಲಿ ಕಂಡಕ್ಟರ್ ಜೊತೆಗೆ ವಾದ ಮಾಡುತ್ತಿದ್ದ ಪುಂ*ಡನಿಗೆ ಚಳಿ ಬಿಡಿಸಿದ ಈ ಅಕ್ಕನ ಧೈರ್ಯಕ್ಕೆ Hats off 🙌🙌 #belagavika #belagavi pic.twitter.com/5CkvjEEJw6
ಅದರಲ್ಲಿ ಕಂಡಕ್ಟರ್ ನೀವು ಚಿಲ್ಲರೆ ಇರಿಸಿಕೊಂಡು ಬರಬೇಕು ಎನ್ನುತ್ತಿದ್ದಂತೆಯೇ ಪ್ರಯಾಣಿಕ ಮರಾಠಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿಕೊಂಡಿದ್ದು. ಕನ್ನಡತಿ ಕಂಡಕ್ಟರ್ ಗರಂ ಆಗುವುದಕ್ಕೆ ಕಾರಣವಾಗಿದೆ. ಆ ವ್ಯಕ್ತಿ ಮರಾಠಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡುತ್ತಿದ್ದಂತೆಯೇ ಮೊದಲು ನೀವು ಕನ್ನಡದಲ್ಲಿ ಮಾತನಾಡಿದ್ದೀರಲ್ಲ. ಈಗ ಯಾಕೆ ಮರಾಠಿಯಲ್ಲಿ ಮಾತನಾಡುತ್ತಿದ್ದೀರಿ. ಕನ್ನಡದಲ್ಲೇ ಮಾತನಾಡಿ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡ ಕಂಡಕ್ಟರ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳಗಾವಿ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಿಂದ ಕನ್ನಡ ಪ್ರೇಮ ಮೆರೆದ ವೀರ ಕನ್ನಡತಿ, ನಿರ್ವಾಹಕಿ ಅಕ್ಕ 🙏🙏 ಬಸ್‌ನಲ್ಲಿ ಮೊದಲು ಕನ್ನಡದಲ್ಲಿ ಮಾತನಾಡಿ,ಆಮೇಲೆ ಮರಾಠಿ ಭಾಷೆಯಲ್ಲಿ ಕಂಡಕ್ಟರ್ ಜೊತೆಗೆ ವಾದ ಮಾಡುತ್ತಿದ್ದ ಪುಂ*ಡನಿಗೆ ಚಳಿ ಬಿಡಿಸಿದ ಈ ಅಕ್ಕನ ಧೈರ್ಯಕ್ಕೆ Hats off 🙌🙌 ಎಂದು ಬರೆದುಕೊಳ್ಳಲಾಗಿದೆ.
ಕರೆದು ಸನ್ಮಾನ ಮಾಡಿ: ಇನ್ನು ಕನ್ನಡತಿ ಕಂಡಕ್ಟರ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ಕನ್ನಡತಿ ಕಂಡಕ್ಟರ್ ಅವರನ್ನು ಕರೆದು ಸನ್ಮಾನ ಮಾಡಿ ಅಂತ ಹೇಳಿದ್ದಾರೆ. ಈ ರೀತಿ ಮಾಡುವವರಿಗೆ ಕನ್ನಡತಿ ಸರಿಯಾಗಿ ಉತ್ತರ ಕೊಟ್ಟಿದ್ದಾರೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.












Click it and Unblock the Notifications