ವಾಹನಗಳ ನಂಬರ್ ಪ್ಲೇಟ್ ಹೆಸರಿನಲ್ಲಿ ಮಹಾನ್ ವಂಚನೆ?
ವಾಹನ ಮಾಲೀಕರಿಗೆ ಈಗ ಟೆನ್ಷನ್.. ಟೆನ್ಷನ್.. ಯಾಕಂದ್ರೆ ಇನ್ನು 5 ದಿನದ ಒಳಗೆ ತಮ್ಮ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಂದ್ರೆ, ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಕೆ ಮಾಡಿಕೊಳ್ಳದೆ ಇದ್ದರೆ ಸಮಸ್ಯೆ ಗ್ಯಾರಂಟಿ. ಹೀಗಿದ್ದಾಗ ಹೊಸ, ಹೊಸ ಸಮಸ್ಯೆ ಶುರುವಾಗಿದೆ. ಅದರಲ್ಲೂ ವಾಹನ ಮಾಲೀಕರ ಇದೇ ಸಮಯ ಬಳಸಿಕೊಂಡು ವಂಚಕರು ಹೊಸ ಆಟ ಶುರು ಮಾಡಿದ್ದಾರೆ! ಯಾಮಾರಿದರೆ ವಾಹನಗಳ ಮಾಲೀಕರಿಂದ ಲಕ್ಷ, ಲಕ್ಷ ಹಣ ಗುಳುಂ ಮಾಡ್ತಿದ್ದಾರೆ.
ಹೌದು, ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅರ್ಥಾತ್ ಎಚ್‌ಎಸ್‌ಆರ್‌ಪಿ ಅವಳಡಿಸಿಕೊಳ್ಳಲು ಫೆಬ್ರವರಿ 17ರ ಶನಿವಾರ ಕೊನೆಯ ದಿನ. ಆ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮಾಲೀಕರಿಗೆ ಭಾರಿ ದಂಡ ಗ್ಯಾರಂಟಿ. ಹೀಗಾಗಿ ವಾಹನ ಸವಾರರು ಎದ್ದೂ, ಬಿದ್ದು ತಮ್ಮ, ತಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಆನ್‌ಲೈನ್ ನೋಂದಣಿಗೆ ಮುಂದಾಗುತ್ತಿದ್ದಾರೆ. ಆದರೆ ವಾಹನಗಳ ಮಾಲೀಕರ ಈ ಪರಿಸ್ಥಿಯೇ ವಂಚಕರಿಗೆ ಬಂಡವಾಳ ಆಗಿದೆ!

ನಂಬರ್ ಪ್ಲೇಟ್ ಹೆಸರಲ್ಲಿ ವಂಚನೆ?
ಅಂದಹಾಗೆ ಇದೀಗ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರವನ್ನೇ, ತಮ್ಮ ಬಂಡವಾಳ ಮಾಡಿಕೊಳ್ಳುತ್ತಿರುವ ವಂಚಕರು. ಹಿರಿಯ ನಾಗಕರನ್ನು ಆನ್‌ಲೈನ್‌ನಲ್ಲಿ ವಂಚಿಸುತ್ತಿರುವ ಕೇಸ್ ಹೆಚ್ಚಾಗುತ್ತಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅವಳಡಿ ವಿಚಾರಕ್ಕೇ ತಮ್ಮನ್ನು ಆನ್‌ಲೈನ್ ವಂಚಿಸಲಾಗಿದೆ ಎಂದು ಹಿರಿಯ ನಾಗರಿಕರು ದೂರು ಹೇಳುತ್ತಿದ್ದಾರಂತೆ. ಇದು ಹಿರಿಯ ನಾಗರಿಕರಿಗೆ ಮಾತ್ರವಲ್ಲ, ಯುವಕರಿಗೂ ಅನುಭವ ಆಗಿದೆಯಂತೆ. ಹೀಗಾಗಿ ಟೆನ್ಷನ್ ಕೂಡ ಹೆಚ್ಚಾಗಿದೆ. ಹಾಗಾದರೆ ವಂಚಕರು ನಿಮ್ಮನ್ನು ಮೋಸ ಮಾಡದೆ ಇರಲು, ನೀವು ಏನು ಮಾಡಬೇಕು ಗೊತ್ತೆ? ಮುಂದೆ ಓದಿ.
ದಯಮಾಡಿ ಓಟಿಪಿ ಕೊಡಬೇಡಿ!
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ನಿಮಗೆ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದು. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲವೇ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಕೊಡಬೇಡಿ. ಹಾಗೇ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ.

ಈ ನಿಯಮ ಪಾಲಿಸಿದ್ರೆ ನಿಮಗೆ ಸಮಸ್ಯೆ ಆಗುವುದಿಲ್ಲ. ಇಲ್ಲವಾದರೆ ನಿಮ್ಮ ಬ್ಯಾಂಕ್ ಅಕೌಂಟ್ ಮೂಲಕ ವಂಚಕರು ಹಣ ಎಗರಿಸೋದು ಪಕ್ಕಾ. ಹೀಗಾಗಿ ಫುಲ್ ಅಲರ್ಟ್ ಆಗಿರಿ, ಇಲ್ಲ ಅಂದ್ರೆ ನಿಮಗೆ ಮೋಸ ಮಾಡ್ತಾರೆ ವಂಚಕರು. ಅಕಸ್ಮಾತ್ ನಿಮಗೆ ಇದರ ಅನುಭವ ಇದ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಇಂತಹ ವಂಚಕರಿಗೆ ಸರಿಯಾಗಿಯೇ ಬುದ್ಧಿ ಕಲಿಸುತ್ತಾರೆ.
ನಂಬರ್ ಪ್ಲೇಟ್ ವೆಬ್‌ಸೈಟ್ ಇಲ್ಲಿದೆ
ಸರ್ಕಾರದ ಅಧಿಸೂಚನೆ ಪ್ರಕಾರ ಎಲ್ಲಾ ವಾಹನ ಸವಾರರು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಆದರೂ ವಾಹನ ಸವಾರರು ಮಧ್ಯವರ್ತಿ ಮೊರೆ ಹೋಗುತ್ತಿದ್ದಾರೆ. ಹೀಗೆ, ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ವಿಚಾರ, ಈಗ ದೊಡ್ಡ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ.
ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ಟಿಡಿ 193 ಟಿಡಿಒ 2021 ದಿನಾಂಕ: 17-08-2023 & ಆಯುಕ್ತರು, ಸಾರಿಗೆ & ರಸ್ತೆ ಸುರಕ್ಷತೆ, ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಸಾಆ/ನೋಂ- 1/30-434/2022-23, ದಿನಾಂಕ : 18-08-2023 ಪ್ರಕಾರ, ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications