ರವೀಂದ್ರನಾಥ ಟ್ಯಾಗೋರ್ ಬರೆದದ್ದು ‘ವಂದೇ ಮಾತರಂ’ ಅಂತೆ! ಶ್ರೀರಾಮುಲು ಹೇಳಿಕೆ ಸಖತ್ ವೈರಲ್
ಬೆಂಗಳೂರು: 'ವಂದೇ ಮಾತರಂ' ಗಾಯನಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಡ್ಡಿಪಡಿಸಿದರು ಎಂಬ ಆರೋಪ ಇತ್ತೀಚೆಗೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರು ಸೋನಿಯಾ ಗಾಂಧಿ ಅವರ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಇತ್ತ ಬಿಜೆಪಿ ಶಾಸಕರಾದ ಶ್ರೀರಾಮುಲು ಅವರು, ಪ್ರಶ್ನಿಸುವ ಬರದಲ್ಲಿ 'ವಂದೇ ಮಾತರಂ' ರಚನೆಕಾರರ ಕುರಿತು ಎಡವಟ್ಟು ಮಾಡಿಕೊಂಡಿದ್ದಾರೆ.
ರಾಷ್ಟ್ರಗೀತೆ ಕುರಿತ ಚರ್ಚೆಯ ನಡುವೆ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರವೀಂದ್ರನಾಥ ಟ್ಯಾಗೋರ್ ಅವರು 'ವಂದೇ ಮಾತರಂ' ಬರೆದಿದ್ದಾರೆ ಎಂದು ಶ್ರೀರಾಮುಲು ಹೇಳಿರುವುದು ವೈರಲ್ ಆಗಿದ್ದು, ನೆಟ್ಟಿಗರು ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಶ್ರೀರಾಮುಲು ಮಾತನಾಡುವ ವೇಳೆ, "ನಾವೆಲ್ಲರೂ ಬಾಲ್ಯದಿಂದಲೂ ರವೀಂದ್ರನಾಥ ಟ್ಯಾಗೋರ್ ಬರೆದ ವಂದೇ ಮಾತರಂ ಹಾಡನ್ನು ಹಾಡಿಕೊಂಡು ಬಂದಿದ್ದೇವೆ"ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಾಸ್ತವವಾಗಿ 'ವಂದೇ ಮಾತರಂ' ಕೃತಿಯನ್ನು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಅವರು ಭಾರತದ ರಾಷ್ಟ್ರಗೀತೆ 'ಜನ ಗಣ ಮನ' ರಚಿಸಿದವರು. ಟ್ಯಾಗೋರ್ ಅವರು 1896ರ ಕಾಂಗ್ರೆಸ್ ಅಧಿವೇಶನದಲ್ಲಿ 'ವಂದೇ ಮಾತರಂ' ಹಾಡಿದ್ದರು ಎಂಬುದು ಐತಿಹಾಸಿಕ ದಾಖಲೆ. ಆದರೆ ಅವರು ಆ ಗೀತೆಯ ರಚನೆಕಾರರಲ್ಲ. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ "ಟ್ಯಾಗೋರ್ ಬರೆದದ್ದು ವಂದೇ ಮಾತರಂ ಅಂತೆ!" ಎಂಬ ರೀತಿಯ ಪೋಸ್ಟ್‌ಗಳು ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.
ನೆಹರು ಭ್ರಷ್ಟಾಚಾರದ ಪಿತಾಮಹ
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ, ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾದಾಗಿನಿಂದ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಲೇ ಬಂದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆರೋಪಿಸಿದ್ದಾರೆ. ನೆಹರು ಅವರು ಪ್ರಧಾನಿಯಾದಾಗ 1948 ರಲ್ಲಿ ಜೀಪ್ ಹಗರಣ ಆಗಿತ್ತು. ಅದೇ ಕಾಂಗ್ರೆಸ್‍ನ ಭ್ರಷ್ಟಾಚಾರದ ಉಗಮ. ನೆಹರು ಅವರೇ ಭ್ರಷ್ಟಾಚಾರದ ಪಿತಾಮಹ. ಅಂದಿನಿಂದ ಇಂದಿನ ವಾಲ್ಮೀಕಿ ನಿಗಮದ ಹಗರಣದವರೆಗೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲೇ ತೊಡಗಿದೆ ಎಂದು ದೂರಿದರು.
ಮಾನ ಮರ್ಯಾದೆ ಯಾವುದೂ ಇಲ್ಲದ ಕಾಂಗ್ರೆಸ್ ನದಿ ಉಗಮವಾಗಿ ಹರಿಯುವಂತೆ ಭ್ರಷ್ಟಾಚಾರ ವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ನೆಹರು ಕುಟುಂಬದ ರಾಹುಲ್ ಗಾಂಧಿವರೆಗೆ ಭ್ರಷ್ಟಾಚಾರ ನಡೆಸುತ್ತಲೇ ಇದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದ್ದು, ಆಗ ಸಚಿವರಾಗಿದ್ದ ನಾಗೇಂದ್ರ ಅವರು ಜೈಲಿಗೆ ಹೋಗಿದ್ದರು. ನಂತರ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಭ್ರಷ್ಟಾಚಾರ ಆಗಿದ್ದನ್ನು ಒಪ್ಪಿಕೊಂಡಿದ್ದರು. ಆದರೆ ಈಗಿನ ಸಿಎಂ ಭ್ರಷ್ಟಾಚಾರ ಆಗೇ ಇಲ್ಲ ಎಂದು ಹೇಳುತ್ತಿದ್ದಾರೆ. ಪಾಪದ ಕೆಲಸ ಮಾಡುವ ಕಾಂಗ್ರೆಸ್ ಯಾವಾಗಲೂ ದಲಿತರನ್ನೇ ಮುಂದಿಡುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗಲೂ ದಲಿತ ಮುಖಂಡ ಜಗಜೀವನ್ ರಾಮ್ ಅವರನ್ನೇ ಬಳಸಿಕೊಂಡಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸೋಲಿಸಿದ್ದು ಸಹ ಕಾಂಗ್ರೆಸ್. ವಾಲ್ಮೀಕಿ ನಿಗಮದಲ್ಲೂ ದಲಿತರ ಮೂಲಕವೇ ಭ್ರಷ್ಟಾಚಾರ ಮಾಡಿತು ಎಂದು ದೂರಿದರು.
ಭ್ರಷ್ಟಾಚಾರ ಕ್ಕೆ ಜಾತಿ ಇಲ್ಲ. ಚರಿತ್ರೆ ಹಾಗೂ ಮುಖ ಇಲ್ಲ. ದಲಿತನಾದ ಕಾರಣಕ್ಕೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ಸಚಿವ ನಾಗೇಂದ್ರ ಹೇಳುತ್ತಾರೆ. ನಿಗಮದ ಮೂಲಕ ಹಲವಾರು ಕಾರ್ಯಕ್ರಮ ಜಾರಿ ಮಾಡಲು ಹಣ ಬಳಸಬೇಕಿತ್ತು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನಿಗಮದ ಹಣ ಬಳಸುವ ಬದಲು ಅವರ ಭವಿಷ್ಯವನ್ನೇ ಬಾಡುವಂತೆ ಮಾಡಿದರು. ಹಣ ಸಂಪೂರ್ಣ ಲೂಟಿ ಮಾಡಿದ್ದಿರಿ ಎಂದು ದೂರಿದರು.


Click it and Unblock the Notifications
