Vande Bharath Express: ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲು ರಾತ್ರಿ ಸಂಚಾರ- ಯಾವಾಗ ಆರಂಭ? ಮಾಹಿತಿ, ವಿವರ
ಬೆಂಗಳೂರು, ನವೆಂಬರ್ 20: ಇದೇ ಮೊದಲ ಬಾರಿಗೆ ಬೆಂಗಳೂರು-ಚೆನ್ನೈ ನಡುವೆ ರಾತ್ರಿ ವೇಳೆ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ದೀಪಾವಳಿ ರಜೆ ಮುಗಿದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ದಕ್ಷಿಣ ರೈಲ್ವೆಯು ವಂದೇ ಭಾರತ್ ರೈಲಿನ ರಾತ್ರಿ ಸಂಚಾರಕ್ಕೆ ಮುಂದಾಗಿದೆ.
ಇಂದು ಹಾಗೂ ನಾಳೆ ನವೆಂಬರ್ 20 ಹಾಗೂ ನವೆಂಬರ್ 21ರಂದು ವಂದೇ ಭಾರತ್ ರೈಲು ರಾತ್ರಿ ವೇಳೆ ಸಂಚಾರ ನಡೆಸಲಿದೆ. ದೀಪಾವಳಿ ರಜೆ ಮುಗಿದಿದ್ದು ತಮ್ಮ ತಮ್ಮ ಊರುಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರ ದಟ್ಟಣೆ ನಿವಾರಸಲು ವಂದೇ ಭಾರತ್ ರೈಲುಗಳು ವಿಶೇಷ ಸಂಚಾರ ನಡೆಸುತ್ತಿವೆ.

ಇಂದು ನವೆಂಬರ್ 20ರಂದು ಯಶವಂತಪುರ, ಎಸ್‌ಎಂವಿಟಿ ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾತ್ರಿ ವೇಳೆ ವಿಶೇಷ ಸಂಚಾರ ನಡೆಸಲಿದೆ. ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಇಂದು ಸಂಜೆ 5.15ಕ್ಕೆ ಹೊರಡಲಿರುವ 8 ಬೋಗಿಗಳ ವಂದೇ ಭಾರತ್ ವಿಶೇಷ ರೈಲು ಅದೇ ದಿನ ರಾತ್ರಿ 10 ಗಂಟೆಗೆ ಚೆನ್ನೈ ಸೆಂಟ್ರಲ್ ತಲುಪಲಿದೆ.
ಇನ್ನು ಮಂಗಳವಾರ ರಾತ್ರಿ 11 ಗಂಟೆಗೆ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡಲಿರುವ ಈ ರೈಲು ಬುಧವಾರ ಬೆಳಿಗ್ಗೆ 4.30ಕ್ಕೆ ಬೆಂಗಳೂರು ಎಸ್‌ಎಂವಿಟಿ ತಲುಪಲಿದೆ. ಈ ವಿಶೇಷ ರೈಲು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್, ಕಟಪಾಡಿ, ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಇತ್ತೀಚಿಗೆ ವಂದೇ ಭಾರತ್ ರೈಲಿನ ಸಂಚಾರ ಹೆಚ್ಚಾಗುತ್ತಿದೆ. ವಂದೇ ಭಾರತ್ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಡಲೆಯಲ್ಲಿ ರೈಲುಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ವಿವಿಧ ನಗರಗಳಿಗೆ ವಂದೇ ಭಾರತ್ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ.
ಬೆಳಗಾವಿಗೆ ವಂದೇ ಭಾರತ್ ರೈಲು
ಪ್ರಯಾಣಿಕರ ಬೇಡಿಕೆಯಂತೆ ಭಾರತೀಯ ರೈಲ್ವೆ ಇಲಾಖೆ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಮುಂದಾಗಿದೆ. ಬೆಳಗಾವಿಗೆ ವಂದೇ ಭಾರತ್ ರೈಲು ಸಂಚಾರ ಆರಂಭಕ್ಕೂ ಮುನ್ನ ಪ್ರಾಯೋಗಿಕ ಸಂಚಾರ ನಡೆಸಲಿದೆ. ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ನವೆಂಬರ್ ಅಂತ್ಯಕ್ಕೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಆದರೆ ಬೆಳಗಾವಿಗೆ ರೈಲು ಸಂಚಾರ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.












Click it and Unblock the Notifications