ಅಂಗವಿಕಲರ ಕಲ್ಯಾಣ ಆಯುಕ್ತರಾಗಿ ವಿ.ಎಸ್‌ ಬಸವರಾಜ್‌ ನೇಮಕ

ಬೆಂಗಳೂರು, ಜೂನ್‌ 28: ರಾಜ್ಯ ಅಂಗವಿಕಲ ಕಚೇರಿಗೆ ನೂತನ ಆಯುಕ್ತರಾಗಿ ವಿ.ಎಸ್‌. ಬಸವರಾಜ್‌ ಅಧಿಕಾರವಹಿಸಿಕೊಂಡಿದ್ದಾರೆ.

ಅಂಗವಿಕಲರ ಹಕ್ಕುಗಳ ಅಧಿನಿಯಮದಡಿ ಸ್ಥಾಪನೆಗೊಂಡಿರುವ ರಾಜ್ಯ ಅಂಗವಿಕಲರ ಆಯುಕ್ತರ ಕಚೇರಿಗೆ ಮೂರು ವರ್ಷಗಳಿಗೊಮ್ಮೆ ಆಯುಕ್ತರನ್ನು ನೇಮಿಸಲಾಗುತ್ತಿದ್ದು ಈ ಬಾರಿ ಅಂಗವಿಕಲರ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದ್ದ ವಿ.ಎಸ್.ಬಸವರಾಜ್‌ ಅಧಿಕಾರ ಸ್ವೀಕರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿವಮೊಗ್ಗದ ಸಾಮಾಜಿಕ ಹಾಗೂ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಶ್ರೀಕೊಡಕ್ಕಲ್ ಶಿವಪ್ರಸಾದರು ಸೌಹಾರ್ದ ಬೇಟಿ ನಡೆಸಿ ಅಂಗವಿಕಲರ ವಿವಿಧ ಸಮಸ್ಯೆಗಳ ಮೇಲೆ ಕ್ಷಕಿರಣ ಬೀರಿದರು.

V.S Basavaraj new commissionaire for disabled welfare

ಇದಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಉಚಿತ ಮತ್ತು ಅನಿಯಮಿತ ಪ್ರಯಾಣದ ಪಾಸನ್ನು ಪುನರಾರಂಬಿಸಲು ಸಹಕರಿಸುವುದಲ್ಲದೆ ಸರ್ಕಾರಕ್ಕೆ ಈ ಬಗ್ಗೆ ಯೋಗ್ಯ ಮನವರಿಕೆ ಮಾಡಿಕೊಡಬೇಕೆಂದು ಕೊಡಕ್ಕಲ್ ರವರು ಒತ್ತಾಯಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲವಲ್ಲದೆ ಸರಕಾರವು ಅಂಗವಿಕಲರಿಗೆ ಉಚಿತ ಮತ್ತು ಅನಿಯಮಿತ ಪ್ರಯಾಣದ ಪಾಸಿಗೆ ಒಪ್ಪಿಗೆ ಸೂಚಿಸಿದ್ದರೂ ಸ್ಥಾಯಿ ಸಮಿತಿಯ ಪದಾಧಿಕಾರಿಗಳು ಸಾರಿಗೆ ಸಂಸ್ಥೆಯು ನಷ್ಟದಲ್ಲಿದೆಯೆಂಬ ಸಬೂಬಿನ ಮೇಲೆ ಈ ವ್ಯವಸ್ಥೆಯನ್ನು ರದ್ದುಗೊಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಅವರು ದೂರಿದರು.

ಅಂಗವಿಕಲರ ಅಧಿನಿಯಮದಡಿ ನಷ್ಟ ಎಂಬ ಪದವನ್ನು ಯಾವ ಕಾರಣದಿಂದಲೂ ಉಪಯೋಗಿಸುವಂತಿಲ್ಲ ಅಲ್ಲದೆ ಒಮ್ಮೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯುವಂತಿಲ್ಲವೆಂಬ ನಿಯಮವಿದ್ದರೂ ಕಾಯ್ದೆ ಅರಿವಿಲ್ಲದೆ ಸ್ಥಾಯಿ ಸಮಿತಿ ಪದಾದಿಕಾರಿಗಳು ಕಾನೂನು ಬಾಹಿರವಾಗಿ ನಡೆದುಕೊಂಡಿರುವದನ್ನು ಸರಿ ಪಡಿಸಬೇಕೆಂದು ಅವರು ಅಂಗವಿಕಲರ ಆಯುಕ್ತರಿಗೆ ಮನವರಿಕೆ ಮಾಡಿದರು.

ಖಾಸಗಿ ಸಾರಿಗೆ ಸಂಸ್ಥೆಯೊಂದಿಗೆ ಶಾಮೀಲಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕನರ್ಾಟಕದಲ್ಲಿ ನಷ್ಠದಿಂದ ಓಡಲು ಪ್ರೋತ್ಸಾಯಿಸುತ್ತಿರುವುದನ್ನು ಅವರು ಎಳೆ ಎಳೆಯಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಮಾನ್ಯ ಆಯುಕ್ತರು ತಾವು ವಿವಿಧ ನೇತಾರರೊಂದಿಗೆ ಸಂಪಾದಸಿದ ಕನ್ನಡ ಅನುವಾದಿತ "ಅಂಗವಿಕಲರ ಹಕ್ಕುಗಳ ಕಾಯಿದೆ 2016" ಎಂಬ ಸವಿವರ ಪುಸ್ತಕವನ್ನು ಕೊಡಕ್ಕಲ್ ರವರಿಗೆ ಕೊಡುಗೆಯಾಗಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+