ನನ್ನ ಸ್ಥಾನ ವಾಸ್ತು ಪ್ರಕಾರ ಸರಿಯಾಗಿದೆ ಅಲ್ವಾ ಎಂದ ಖಾದರ್! ಗೊಂದಲ ಇದ್ರೆ ರೇವಣ್ಣ ಬಳಿ ಕೇಳಿ ಎಂದ ಆರಗ ಜ್ಞಾನೇಂದ್ರ!
ಬೆಂಗಳೂರು, ಜುಲೈ 11: ವಿಧಾನಸಭೆಯ ಸದನ ಇಂದು ಆರಂಭವಾಗುತ್ತಿದ್ದಂತೆ ನನ್ನ ಸ್ಥಾನ ವಾಸ್ತು ಪ್ರಕಾರ ಸರಿಯಾಗಿದೆ ಅಲ್ವಾ ಎಂದು ಸ್ಪೀಕರ್ ಯು ಟಿ ಖಾದರ್ ತಮಾಷೆಯಾಗಿ ಪ್ರಶ್ನಿಸಿದರು. ಈ ವೇಳೆ ಗೊಂದಲ ಇದ್ದರೆ ಎಚ್ ಡಿ ರೇವಣ್ಣ ಅವರ ಬಳಿ ಕೇಳಿ ಎಂದು ಮಾಜಿ ಸಚಿರ ಆರಗ ಜ್ಞಾನೇಂದ್ರ ನೀಡಿದ ಉತ್ತರಕ್ಕೆ ಸದನದಲ್ಲಿ ನಗುವಿನ ವಾತಾವರಣ ಉಂಟಾಯಿತು.
ಇನ್ನೂ ಸದನ ಆರಂಭ ಆಗುತ್ತಿದ್ದಂತೆ, ಎದ್ದು ನಿಂತ ಸಚಿವ ಕೆಜೆ ಜಾರ್ಜ್, ವಿಧಾನಸೌಧದಕ್ಕೆ ಬರಲು ಒಂದು ಗೇಟ್ ಮಾತ್ರ ತೆರೆಯಲಾಗಿದೆ. ಮೆಟ್ರೋ ಕಾಮಗಾರಿ ಕಾರಣಕ್ಕಾಗಿ ಈಸ್ಟ್ ಗೇಟ್ ಬಂದ್ ಮಾಡಲಾಗಿದೆ. ಅಲ್ಲಿ ಎಲ್ಲ ವ್ಯವಸ್ಥೆ ಇದೆ, ಅದನ್ನು ತೆರೆದುಕೊಟ್ಟರೆ ನಮಗೆ ಬರಲು ಅನುಕೂಲ ಆಗಲಿದೆ ಎಂದು ಸಲಹೆ ಕೊಟ್ಟರು.

ಈ ವೇಳೆ ವಾಸ್ತು ಪ್ರಕಾರವಾಗಿ ಮುಚ್ಚಿರಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು. ಅದಕ್ಕೆ ನನ್ನ ಸ್ಥಾನ ವಾಸ್ತು ಪ್ರಕಾರ ಸರಿಯಾಗಿದೆ ಅಲ್ವಾ ಎಂದು ಸ್ಪೀಕರ್ ತಮಾಷೆಯಾಗಿ ಪ್ರಶ್ನಿಸಿದರು. ಅದಕ್ಕೆ ನಿಮಗೆ ಗೊಂದಲ ಇದ್ರೆ ರೇವಣ್ಣ ಅವರನ್ನು ಕೇಳಿ ಎಂದು ಆರಗ ಜ್ಞಾನೇಂದ್ರ ಉತ್ತರಿಸಿದರು. ನಾನು ಖುಷಿಯಾಗಿದ್ರೆ ನೀವು ಖುಷಿ ಆಗಿರುತ್ತೀರಿ. ನಾನು ಖುಷಿಯಾಗಿದ್ದರೆ ನೀವು ಖುಷಿ ಆಗಿರುತ್ತೀರಿ ಎಂದು ಸ್ಪೀಕರ್ ಖಾದರ್ ಹೇಳಿದರು. ಸದನಕ್ಕೆ ನಗು ಮುಖದಲ್ಲೇ ಬಂದ ಖಾದರ್ ಅವರನ್ನು ಏನು ಖುಷಿ ಆಗಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದರು.
ಅದಕ್ಕೆ, ನಾನು ಟೆನ್ಸನ್ ನಲ್ಲಿದ್ರೆ ನೀವು ಟೆನ್ಸನ್ ನಲ್ಲಿ ಇರ್ತೀರಾ. ನಾನು ಖುಷಿಯಾಗಿದ್ರೆ ನೀವು ಖುಷಿ ಆಗಿರ್ತೀರಿ. ಅದಕ್ಕಾಗಿ ನಾನು ಖುಷಿಯಿಂದ ಇದ್ದೇನೆ ಎಂದು ಖಾದರ್ ಕಲಾಪ ಶುರು ಮಾಡಿದರು.ಇನ್ನೂ ಸದನಕ್ಕೆ ನಿಗದಿತ ಸಮಯಕ್ಕೆ ಬಂದವರ ಹೆಸರನ್ನು ಯು ಟಿ ಖಾದರ್ ಓದಿದರು.
ಈ ವೇಳೆ ಮೊದಲು ಬಂದವರು ಯಾಕೆ, ಕೊನೆಯವರೆಗೂ ಇದ್ದವರು ಹೆಸರೇಳಿ. ನಾವು ಹಿಂದೆ ಕಾಲೇಜಿನಲ್ಲಿ ಹಾಜರಾತಿ ಹಾಕಿ, ಕ್ಲಾಸ್ ಗೆ ಚೆಕ್ಕರ್ ಹಾಕಿ ಹೋಗ್ತಿದ್ವಿ ಎಂದ ನಗೆ ಚಟಾಕಿಯನ್ನು ಶಾಸಕ ಸುರೇಶ್ ಕುಮಾರ್ ಹಾರಿಸಿದರು.
ನೀನು ಹೊಸ ಎಂಎಲ್ ಎ ಅನಿಸುತ್ತೆ ಪ್ರಶ್ನೆ ಹಾಕು ಉತ್ತರ ಕೊಡುತ್ತೇನೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗಾರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ ಸಲಹೆ ನೀಡಿದರು. ಇನ್ನು ಕೆರೆ ತುಂಬಿಸುವ ವಿಚಾರವಾಗಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಪ್ರಶ್ನೆ ಕೇಳಿದ್ದರು, ಈ ಕುರಿತು ಡಿ ಕೆ ಶಿವಕುಮಾರ್ ಉತ್ತರಿಸುವ ವೇಳೆ ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಶರಣು ಸಲಗಾರ್, ಬಸವಕಲ್ಯಾಣದಲ್ಲಿ 18 ಕೆರೆ ತುಂಬಿಸುವ ಯೋಜನೆ ಆಗಿದೆ. ಕಾಮಗಾರಿ ಮುಗಿದಿದ್ರು ಕೆರೆ ನೀರು ತುಂಬಿಸಿಲ್ಲ. ರೈತರಿಗೆ ಅನಕೂಲ ಆಗಲಿದೆ ನೀರು ತುಂಬಿಸಿ ಅಂತ ಮನವಿ ಮಾಡಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಪ್ರವೇಶ ಮಾಡಿ, ನೀನು ಹೊಸದಾಗಿ ಎಂಎಲ್ ಎ ಆಗಿದ್ದೀಯಾ ಅನಿಸುತ್ತೆ. ಸದನಕ್ಕೆ ಪ್ರಶ್ನೆ ಹಾಕು, ವಿವರವಾದ ಉತ್ತರ ನೀಡುತ್ತೇವೆ ಎಂದು ಹೇಳಿದರು.












Click it and Unblock the Notifications