ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018
ಬೆಂಗಳೂರು, ಸೆಪ್ಟೆಂಬರ್ 03 : 105 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಬಿಜೆಪಿ 2013ರ ಚುನಾವಣೆಗಿಂತ ಹೆಚ್ಚಿನ ಸ್ಥಾನ ಪಡೆದಿದ್ದೇವೆ ಎಂದು ಹೇಳಿದೆ.
ಕರ್ನಾಟಕ ಬಿಜೆಪಿ ಸೋಮವಾರ ತನ್ನ ಟ್ವಿಟರ್ ಖಾತೆಯಲ್ಲಿ infographics ವೊಂದನ್ನು ಶೇರ್ ಮಾಡಿದೆ. ಇದರಲ್ಲಿ 2013ರ ಚುನಾವಣೆ ಮತ್ತು 2018ರ ಚುನಾವಣೆ ಫಲಿತಾಂಶವನ್ನು ಹೋಲಿಕೆ ಮಾಡಲಾಗಿದೆ. ಪಕ್ಷ ಹೆಚ್ಚು ಸ್ಥಾನ ಪಡೆದಿದೆ ಎಂದು ಟ್ವೀಟ್ ಮಾಡಿದೆ.
2013ರ ಚುನಾವಣೆಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿ 683 ಸೀಟು ಗೆದ್ದಿದ್ದೆವು. ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ 875 ವಾರ್ಡ್ ಗೆದ್ದಿದ್ದೇವೆ ಕಾಂಗ್ರೆಸ್ ಗೆದ್ದ ವಾರ್ಡ್‌ಗಳ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂಬುದು ಬಿಜೆಪಿ ವಾದ.
105 ಸ್ಥಳೀಯ ಸಂಸ್ಥೆಗಳ ಜೊತೆ ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗೂ ಚುನಾವಣೆ ನಡೆದಿತ್ತು. ಮೂರು ಮಹಾನಗರ ಪಾಲಿಕೆ ಸೇರಿ 135 ವಾರ್ಡ್‌ಗಳಲ್ಲಿ ಬಿಜೆಪಿ 54, ಕಾಂಗ್ರೆಸ್ 36 ಜೆಡಿಎಸ್ 30 ಸ್ಥಾನಗಳಲ್ಲಿ ಜಯಗಳಿಸಿದೆ.... 2013 ಮತ್ತು 2018ರ ಚುನಾವಣೆಯ ಚಿತ್ರಣ ಇಲ್ಲಿದೆ...

ಮಹಾನಗರ ಪಾಲಿಕೆ ಫಲಿತಾಂಶ
ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗೂ ಆಗಸ್ಟ್ 31ರಂದು ಚುನಾವಣೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನುಗಳಿಸಿದೆ ಎಂದು ಹೇಳಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿಯೂ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ ಎಂದು 2013 ಮತ್ತು 2018ರ ಫಲಿತಾಂಶವನ್ನು ಬಿಜೆಪಿ ಟ್ವೀಟ್ ಮಾಡಿದೆ.

2018ರ ಚುನಾವಣೆ ಫಲಿತಾಂಶ
ತುಮಕೂರು, ಶಿವಮೊಗ್ಗ ಮತ್ತು ಮೈಸೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಒಟ್ಟು 135 ವಾರ್ಡ್‌ಗಳ ಪೈಕಿ
* ಬಿಜೆಪಿ 54
* ಕಾಂಗ್ರೆಸ್ 36
* ಜೆಡಿಎಸ್ 30
* ಪಕ್ಷೇತರರು 14
* ಬಿಎಸ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು?
2018ರಲ್ಲಿ 926 ನಗರಸಭೆ, 1246 ಪುರಸಭೆ ಮತ್ತು 355 ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬಲಾಬಲ
* ನಗರ ಸಭೆ : ಬಿಜೆಪಿ 370, ಕಾಂಗ್ರೆಸ್ 294, ಜೆಡಿಎಸ್ 106
* ಪುರಸಭೆ : ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210
* ಪಟ್ಟಣ ಪಂಚಾಯಿತಿ : ಕಾಂಗ್ರೆಸ್ 138, ಬಿಜೆಪಿ 130, ಜೆಡಿಎಸ್ 29












Click it and Unblock the Notifications