ಸಿ.ಎಂ ಮಾತಿಗೆ ಸಚಿವರು ಡೋಂಟ್ ಕೇರ್ ಎಂದಿದ್ಯಾಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನ್ನು ಸಚಿವರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಸಿ.ಎಂ ಸಿದ್ದರಾಮಯ್ಯ ಹೇಳುವ ಮಾತನ್ನು ಮೂರು ದಿನವಾದರೂ ಸಚಿವರು ಕೇಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಕರ್ನಾಟಕದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ. ಆದರೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ನಾಚಿಕೆಗೇಡಿನ ಸಂಗತಿ. ಸೈನ್ಸ್ ಮುಂದುವರಿದ ಕಾಲದಲ್ಲೂ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೋಶಿ ಅವರು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪುತ್ತಿದ್ದರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ ಮೂರು ದಿನದ ನಂತರವೂ ಯಾವುದೇ ಸಚಿವರೂ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ಮಾಡಿಲ್ಲ.

ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ ಪ್ರವೃತ್ತಿ ಸರ್ಕಾರಕ್ಕೆ ಶೋಭೆ ತರಲ್ಲ. ಅಲ್ಲದೇ ಸ್ಥಳೀಯವಾಗಿ ಮೆಡಿಸನ್ ಸ್ಟಾಕ್ಸ್ ಇಲ್ಲ. ಯಾವ ಕಂಪನಿ ಕೊಟ್ಟರೂ ತಗೋತಾರೆ. ಸರ್ಕಾರ ದಿವಾಳಿ ಆಗಿದ್ದು, ದುಡ್ಡಿಲ್ಲ, ಬೊಕ್ಕಸ ಖಾಲಿ ಆಗಿದೆ. ಇದನ್ನು ಹೆಚ್ಚು ರಾಜಕೀಯವಾಗಿ ನಾನು ತಗೋಳಲ್ಲ ಎಂದರು.
ಇನ್ನು ನಬಾರ್ಡ್ ಯೋಜನೆಯಿಂದ ಅನುದಾನ ಕಡಿತ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ನಬಾರ್ಡ್‌ನಿಂದ ಕೋ ಆಪರೇಟಿವ್ ವಲಯಕ್ಕೆ ನೀಡುವ ಸಾಲದಲ್ಲಿ ಕೊರತೆ ಆಗಿಲ್ಲ. ಮುಖ್ಯಮಂತ್ರಿಗಳು ಮನಸಿಗೆ ಬಂದಂಗೆ ಅಟ್ಟರ್ ನಾನ್‌ಸೆನ್ಸ್ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರ ಜಿರೋ ಪರ್ಸೆಂಟ್ ಬಡ್ಡಿಗೆ ಸಾಲ ನೀಡುವ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರವನ್ನು ಸಿದ್ದರಾಮಯ್ಯ ಅವರು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಮುಡಾ, ಅಬಕಾರಿ ಹಾಗೂ ವಾಲ್ಮೀಕಿ ಹಗರಣದಲ್ಲಿ ರಾಜ್ಯ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ. ಈ ವಿಷಯಗಳು ಚರ್ಚೆಯಾಗಬಾರದು ಎನ್ನುವ ಕಾರಣಕ್ಕಾಗಿ ವಿಷಯಾಂತರ ಮಾಡುತ್ತಿದ್ದಾರೆ. ಇನ್ನು ಮುಡಾ ಹಗರಣದಲ್ಲಿ ಇಡಿ ಯಾಕೆ ಬಂತು ಅಂತ ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಮನಿ ಲ್ಯಾಂಡ್ರಿಂಗ್ ಆಗಿದೆ. ಅದಕ್ಕೆ ಇಡಿ ಮಧ್ಯಪ್ರವೇಶ ಮಾಡಿದೆ. ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನುವುದು ಸುಳ್ಳು.
ಯುಪಿಎ ಅವಧಿಯಲ್ಲಿ ಯಾರ ಮೇಲೆ ಪ್ರಭಾವ ಬೀರಿದ್ದರು ಎನ್ನುವ ಬಗ್ಗೆ ಟ್ರ್ಯಾಕ್ ರೆಕಾರ್ಡ್ ಇದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಮೊದಲು ನಿಮ್ಮ ನಾಯಕರು ಏನ್ ಮಾಡಿದ್ದಾರೆ ನೋಡಿ. ಪೆಗಾಸಸ್ ವಿಚಾರ ಇಟ್ಕೊಂಡು 15 ದಿನ ಸದನ ನಡೆಯಂತೆ ಮಾಡಿದ್ದರು. ಈಗ ಪೆಗಾಸಸ್ ಏನಾಗಿದೆ, ಯಾವುದೇ ಸಾಕ್ಷಿ ಇಲ್ಲ ಎಂದು ಬಂದಿದೆ. ಕಾಂಗ್ರೆಸ್ ರಾಹುಲ್ ಗಾಂಧಿ ಅವರು ಜಾರ್ಜ್ ಸಿರೋಸಿಸ್ ಹೇಳುವಂತೆ ಕೆಲಸ ಮಾಡ್ತಾರೆ. ಒಬ್ಬ ಬುದ್ಧಿಹೀನ ನಾಯಕನಿಂದ ಕಾಂಗ್ರೆಸ್ ಅವನತಿ ಹೊಂದುತ್ತಿದೆ. ಕಾಂಗ್ರೆಸ್ ನಾಯಕರು ಒಳ್ಳೆಯ ಲೀಡರ್ ಹುಡುಕಿಕೊಳ್ಳೋದು ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯ ವಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಇದೀಗ ಭಾರೀ ಚರ್ಚೆ ಕಾರಣವಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ. ಆದರೆ, ಬಾಣಂತಿಯರ ಸಾವು ಮುಂದುವರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications