ಕೇಸ್‌ಗೆ ಹೆದರಲ್ಲ, ಕೋರ್ಟ್‌ನಲ್ಲೇ ಉತ್ತರ ಕೊಡ್ತೀನಿ: ಕುಮಾರಣ್ಣ ಕೌಂಟರ್ ಕೊಟ್ಟಿದ್ದು ಯಾರಿಗೆ?
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕುಮಾರಸ್ವಾಮಿ, ಆ ದೂರಿಗೆ ನಾನು ಕಾನೂನು ಪ್ರಕಾರವೇ ಉತ್ತರಿಸುತ್ತೇನೆ ಎಂದಿದ್ದಾರೆ.
ನಾನು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ದೂರು ನೀಡಿರುವ ಎಡಿಜಿಪಿಯವರು ನನಗೆ ಹೆದರಬೇಕಾದ ಅಗತ್ಯವಿಲ್ಲ. ನಾನು ಅವರಿಗೆ ಬೆದರಿಕೆ ಎಲ್ಲಿ ಹಾಕಿದ್ದೇನೆ? ಎಂದು ಪ್ರಶ್ನಿಸಿದ ಅವರು, ಎಡಿಜಿಪಿ ಅವರಿಗೆ ಸಂಬಂಧಿಸಿ ದಾಖಲೆಗಳ ಸಮೇತ ಹೇಳಿದ್ದೇನಷ್ಟೇ. ಅದನ್ನೇ ಬೆದರಿಕೆ ಅಂದರೆ ಹೇಗೆ? ಎಂದು ಕೇಳಿದ್ದಾರೆ.

ಆ ಅಧಿಕಾರಿ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತಾಡಿದ್ದು ಸತ್ಯ. ಆದರೆ ನಾನೇನು ಹೇಳಿದ್ದೇನೆ ಎನ್ನುವುದು ಮಾಧ್ಯಮಗಳಲ್ಲೇ ಸ್ಪಷ್ಟವಾಗಿದೆ. ಈಗ ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಅವರೂ ಕೂಡ ನನಗೆ ಹೆದರಬೇಕಾಗಿಲ್ಲ ಎಂದಿದ್ದಾರೆ.
ಈ ಕೇಸ್ ಕೋರ್ಟ್‌ಗೆ ಬರುತ್ತದೆ, ನಾನು ಅಲ್ಲಿಯೇ ಇದಕ್ಕೆ ಉತ್ತರ ಕೊಡುತ್ತೇನೆ. ನನ್ನ ವಿರುದ್ಧ ಕಳೆದ 12 ವರ್ಷಗಳಿಂದ ಗಣಿಗಾರಿಕೆ ಕೇಸ್ ತನಿಖೆ ನಡೀತಿದೆ. ವಿಚಾರಣೆಗೆ ಹೋಗುತ್ತಲೇ ಇದ್ದೇನೆ. ನಾನು ತನಿಖೆ ತಪ್ಪಿಸಿಕೊಳ್ಳಲ್ಲ, ಎಲ್ಲಿಗೂ ಓಡೋಗಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಏನಿದು ಪ್ರಕರಣ?: ನಿನ್ನೆ ಆಯುಧಪೂಜೆಯ ಸಂಭ್ರಮದಲ್ಲಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಹಿಸುದ್ದಿಯೊಂದು ಹೊರಬಿದ್ದಿತ್ತು. ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಎಚ್‌ಡಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಡಿಜಿಪಿ ಎಂ.ಚಂದ್ರಶೇಖರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಇತ್ತೀಚೆಗೆ ಟಾಕ್ ವಾರ್ ಜೋರಾಗಿಯೇ ನಡೆಯುತ್ತಿತ್ತು. ಇದೀಗ ಇದು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನನಗೆ ಹಾಗೂ ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಹಾಗೂ ಬೆದರಿಕೆಯೂ ಹಾಕಿದ್ದಾರೆ ಎಂದು ಎಡಿಜಿಪಿ ಎಂ.ಚಂದ್ರಶೇಖರ್ ದೂರಿನಲ್ಲಿ ತಿಳಿಸಿದ್ದರು.
ಈ ಸಂಬಂಧ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಗೆ ತೆರಳಿ, ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಎಂಬುವವರ ವಿರುದ್ಧ ದೂರು ಕೊಟ್ಟಿದ್ದರು.
ಕುಮಾರಸ್ವಾಮಿ ಅವರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನು ಮಾಡಿ, ಬೆದರಿಕೆಯೂ ಹಾಕಿದ್ದಾರೆ. ನನ್ನ ಹುದ್ದೆಯ ವಿಚಾರವಾಗಿ ಅವರ ಸುಳ್ಳು ಮೆಡಿಕಲ್ ದಾಖಲೆ ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರಿದ್ದೇನೆ ಹಾಗೂ ಲಂಚ ಪಡೆದಿದ್ದೇನೆ ಎಂದೆಲ್ಲ ಆರೋಪಗಳನ್ನು ಮಾಡಿದ್ದಾರೆ ಎಂದು ಎಡಿಜಿಪಿ ದೂರಿನಲ್ಲಿ ತಿಳಿಸಿದ್ದರು.
ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಆಪ್ತ ಎನ್ನಲಾದ ಸುರೇಶ್ ಬಾಬು ಕೂಡ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಈ ಮೂವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ಎಡಿಜಿಪಿ ಎಂ.ಚಂದ್ರಶೇಖರ್ ಅವರ ದೂರು ಆಧರಿಸಿ, ಸಂಜಯನಗರ ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದರು. ಈಗಾಗಲೇ ಒಂದು ಕೇಸ್‌ನಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಈಗ ಮತ್ತೊಂದು ಕೇಸ್‌ನಲ್ಲಿ ಎಚ್‌ಡಿಕೆ ಜೊತೆಗೆ ಪುತ್ರ ನಿಖಿಲ್‌ಗೂ ಕಂಟಕ ಎದುರಾಗಿದೆ.












Click it and Unblock the Notifications