ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ
Recommended Video
ಬೆಂಗಳೂರು, ಸೆ 10: ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಹಾಲು ಹಂಚಿಕೆ ವಿಚಾರದಲ್ಲಿ, ಮಂಡಳಿಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಅಧ್ಯಕ್ಷ ಎಚ್ ಡಿ ರೇವಣ್ಣಗೆ ಬಲವಾದ ಪೆಟ್ಟು ನೀಡಿದ್ದಾರೆ.
ಬಿಜೆಪಿ ಶಾಸಕರೂ ಆಗಿರುವ ಜಾರಕಿಹೊಳಿ, ಯುಎಚ್ಟಿ (Ultra High Temparature) ಹಾಲು ಹಂಚಿಕೆ ಪೂರೈಕೆ ಪ್ರಮಾಣವನ್ನು ಮರುಹಂಚಿಕೆ ಮಾಡಿದ್ದು, ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಸಹಕಾರ ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್) ಸಿಂಹಪಾಲನ್ನು ನೀಡಿದ್ದಾರೆ.
ಕೆಎಂಎಫ್, ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಅದರಂತೇ, ಸೇನೆಗೆ ವರ್ಷಕ್ಕೆ ಸುಮಾರು ಒಂದು ಕೋಟಿ ಲೀಟರ್ ಯುಎಚ್ಟಿ ಹಾಲನ್ನು ಪೂರೈಸಬೇಕಿದೆ.

ಸುಮಾರು ಹತ್ತು ವರ್ಷಗಳಿಂದ, ಸಂಪೂರ್ಣವಾಗಿ ಈ ಹಾಲನ್ನು ಕೋಚಿಮುಲ್, ಸೇನೆಗೆ ಒದಗಿಸುತ್ತಿತ್ತು. ಆದರೆ, 2018ರಲ್ಲಿ, ಒಟ್ಟು ಪೂರೈಕೆಯ ಅರ್ಧ ಭಾಗವನ್ನು (ಸುಮಾರು ಐವತ್ತು ಲಕ್ಷ ಲೀಟರ್) ಹಾಸನ ಜಿಲ್ಲಾ ಒಕ್ಕೂಟಕ್ಕೆ ಮರುಹಂಚಿಕೆ ಮಾಡಲಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೋಚಿಮುಲ್ ಸದಸ್ಯರು, ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಬಳಿ ಮನವಿಯನ್ನು ಸಲ್ಲಿಸಿ, ಯುಎಚ್ಟಿ ಹಾಲು ಪೂರೈಕೆಯನ್ನು ಸಂಪೂರ್ಣವಾಗಿ ತಮಗೇ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ರೇವಣ್ಣ ಅನುಮತಿಯನ್ನು ನೀಡಿರಲಿಲ್ಲ.
ಈಗ, ಮಾಲೂರು ಶಾಸಕರಾಗಿರುವ ನಂಜೇಗೌಡರ ನೇತೃತ್ವದಲ್ಲಿ ಮತ್ತೆ ಮನವಿಯನ್ನು ಸಲ್ಲಿಸಲಾಗಿ, ಇದಕ್ಕೆ, ಕೆಎಂಎಫ್ ಅಧ್ಯಕ್ಷರು ಒಪ್ಪಿಗೆಯನ್ನು ನೀಡಿದ್ದಾರೆ. ಹೀಗಾಗಿ, ಮುಂದಿನ ಅವಧಿಯವರೆಗೆ, ಸೇನೆಗೆ 90.50 ಲಕ್ಷ ಲೀಟರ್ ಯುಎಚ್ಟಿ ಹಾಲನ್ನು ಕೋಚಿಮುಲ್ ಪೂರೈಸಲಿದೆ. ಇದರಿಂದ, ರೇವಣ್ಣ ಮುಖಭಂಗ ಎದುರಿಸುವಂತಾಗಿದೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications