UGCET 2026: ಎರಡನೇ ಸುತ್ತಿನ ಸೀಟು ಹಂಚಿಕೆ ಅಂತಿಮ; ವಿದ್ಯಾರ್ಥಿಗಳಿಗೆ ಆ.28ರೊಳಗೆ ಪ್ರವೇಶಕ್ಕೆ ಸೂಚನೆ

ಬೆಂಗಳೂರು: UGCET-2026ಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಸೇರಿದಂತೆ ಇತರ ಯುಜಿ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಈಗಾಗಲೇ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಪ್ರಕ್ರಿಯೆಗೆ ಆಗಸ್ಟ 28 ಕೊನೆಯ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಗೆ ಆಗಸ್ಟ್ 25ರಿಂದ 28ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಕಡ್ಡಾಯವಾಗಿ ವರದಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

UGCET 2026 KEA 1

ವಿವಿಧ ಕೋರ್ಸ್‌ಗಳಾದ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ. ಎಸ್ ಸಿ. (ನರ್ಸಿಂಗ್), ಬಿ-ಫಾರ್ಮ, ಫಾರ್ಮ್-ಡಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳ ಪ್ರವೇಶಕ್ಕೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಇಷ್ಟ ಇದ್ದರೆ ಚಾಯ್ಸ್- 1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಬೇಕು. ನಿಗದಿತ ದಿನಾಂಕದೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲ ಎನ್ನುವವರು ಚಾಯ್ಸ್- 4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

ಕೌನ್ಸೆಲಿಂಗ್ ನಿಂದ ಹೊರ ಹೋಗಲು ಅವಕಾಶ

ಯುಜಿ ನೀಟ್ ಅಭ್ಯರ್ಥಿಗಳು ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC) ಅಲ್ಲದೆ ಇತರ ರಾಜ್ಯಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಕೆಇಎ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಅಂತಹವರಿಂದ ತೆರವಾಗುವ ಸೀಟುಗಳನ್ನೂ ಸೇರಿಸಿಕೊಂಡು ಮತ್ತೊಮ್ಮೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ವೈದ್ಯಕೀಯ ಕೋರ್ಸ್ ಗಳ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಕೆಲವು ಅಭ್ಯರ್ಥಿಗಳು ಪ್ರಾಧಿಕಾರದಲ್ಲೂ ಹಾಗೂ ಎಂಸಿಸಿ ಸಮಿತಿ ನಡೆಸುವ ಕೌನ್ಸೆಲಿಂಗ್ ನಲ್ಲೂ ಸೀಟು ಪಡೆದಿದ್ದಾರೆ. ಅಂತಹವರು ಇಚ್ಛಿಸಿದಲ್ಲಿ ಚಾಯ್ಸ್-4 ಆಯ್ಕೆ ಮಾಡಿಕೊಂಡು ಕೆಇಎ ಕೌನ್ಸೆಲಿಂಗ್ ನಿಂದ ಉಚಿತವಾಗಿ ಹೊರ ಹೋಗುವುದಕ್ಕೆ ಅವಕಾಶ ಇದೆ.

ಕೌನ್ಸೆಲಿಂಗ್‌ನಿಂದ ಹೊರ ಹೋಗಲು ಆಗಸ್ಟ್ 25 ಮತ್ತು 26ರಂದು ಸಮಯ ನೀಡಲಾಗಿದೆ. ಇದರಿಂದ ಮೊದಲ ಸುತ್ತಿನಲ್ಲಿ ಮೆರಿಟ್ ಅಭ್ಯರ್ಥಿಗಳಿಗೂ ಇಚ್ಛೆಯನುಸಾರ ಸೀಟು ಲಭ್ಯವಾದಂತಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ರಜೆ, ದಿನಾಂಕ ವಿಸ್ತರಿಸಲು ಮನವಿ

ಕಿಇಎ ಎಕ್ಸ್ ಖಾತೆಯ ಪೋಸ್ಟ್‌ಗೆ ಕೆಲವು ಅಭ್ಯರ್ಥಿಗಳು ಕಾಮೆಂಟ್ ಮಾಡಿದ್ದು, 'ಸರ್ ದಯವಿಟ್ಟು ಪ್ರವೇಶ ದಿನಾಂಕವನ್ನು ವಿಸ್ತರಿಸಬೇಕು. ಏಕೆಂದರೆ ನಾಳೆ (ಈದ್ ಮಿಲಾದ್) ಬ್ಯಾಂಕ್ ರಜೆ ಇದೆ. ನಾಳೆಯ ನಂತರ ನಾವು ಅಲ್ಲಿ ಶುಲ್ಕವನ್ನು ಪಾವತಿಸಿದರೆ, ನಾವು 28 ರಂದು ಕಾಲೇಜಿಗೆ ಹೋಗಬೇಕಾಗುತ್ತದೆ, ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಂತೆ' ಅವರು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+