ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿದ ಸಿಹಿ ಸುದ್ದಿ

ಬೆಂಗಳೂರು, ಆಗಸ್ಟ್ 9: ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಓಯು) ಕೊನೆಗೂ ಯುಜಿಸಿ ಮಾನ್ಯತೆ ದೊರಕಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರುಬಿಡುವಂತಾಗಿದೆ.

ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಕ್ತ ವಿವಿಗೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಲಾಯಿತು.

ಮುಕ್ತ ವಿವಿಯ ಮಾನ್ಯತೆಯನ್ನು 2012-13ನೇ ಸಾಲಿನ ಬಳಿಕ ಯುಜಿಸಿ ನವೀಕರಿಸಿರಲಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪದವಿಗಳು ಅಮಾನ್ಯಗೊಂಡಿದ್ದವು. ಇದರಿಂದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ಸಿಲುಕಿತ್ತು. ನೂರಾರು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿತ್ತು. ಇನ್ನು ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೆ ಕಂಗಾಲಾಗುವಂತಾಗಿತ್ತು.

ugc granted recognition to ksou

ಈಗ ಯುಜಿಸಿ 2018-19ನೇ ಸಾಲಿನಿಂದಲೇ ಅನ್ವಯವಾಗುವಂತೆ ಆಯ್ದ 17 ಕೋರ್ಸ್‌ಗಳ ಪ್ರವೇಶಕ್ಕೆ ಅನುಮತಿ ನೀಡಿದೆ. 2022-23ನೇ ಇಸವಿವರೆಗೂ ಈ ಮಾನ್ಯತೆ ಇರಲಿದೆ.

ಇದರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2017-18ನೇ ಸಾಲಿನಿಂದಲೇ ಮಾನ್ಯತೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು. ಆದರೆ, ಅದರ ವಿರುದ್ಧ ಯುಜಿಸಿ ಮೇಲ್ಮನವಿ ಸಲ್ಲಿಸಿತ್ತು.

ಈ ಸಂಬಂಧ ಶಾಸಕ ಎ. ರಾಮದಾಸ್, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರ ಮೇಲೆ ಒತ್ತಡ ಹೇರಿದ್ದರು.

ಈ ನಡುವೆ 2018-19ನೇ ಸಾಲಿಗೆ ಮಾನ್ಯತೆ ನೀಡಲು ಸಿದ್ಧರಿದ್ದು, ಅಗತ್ಯ ದಾಖಲೆಗಳೊಂದಿಗೆ ದೆಹಲಿಗೆ ಬರುವಂತೆ ಮುಕ್ತ ವಿವಿಗೆ ಜೂನ್ 6ರಂದು ಯುಜಿಸಿಯಿಂದ ಪತ್ರ ಬಂದಿತ್ತು.

ಕೆಎಸ್‌ಓಯು ಮಾನ್ಯತೆ ಪಡೆಯಲು ಎಲ್ಲ ರೀತಿಯಲ್ಲಿಯೂ ಅರ್ಹವಾಗಿದೆ ಎಂದು ದಾಖಲಾತಿಗಳನ್ನು ನೀಡಿತ್ತು. ಇದನ್ನು ಪರಿಗಣಿಸಿದ ಯುಜಿಸಿ ಅದಕ್ಕೆ ಮಾನ್ಯತೆ ನೀಡಿದೆ.

ugc granted recognition to ksou

ಕರಾಮುವಿಯು ಯುಜಿಸಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕದ ಹೊರಗೆ ನೂರಾರು ಅಧ್ಯಯನ ಕೇಂದಗಳನ್ನು ತೆರೆದಿದ್ದೇ ಅಲ್ಲದೆ, ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ(ಎಂಒಯು) ಮಾಡಿಕೊಂಡು ತಾಂತ್ರಿಕ, ಅರೆ ವೈದ್ಯಕೀಯ ಮತ್ತು ವಿಜ್ಞಾನ ಆಧಾರಿತ ಕೋರ್ಸ್‌ಗಳನ್ನು ಸಂಬಂಧಪಟ್ಟ ಸಂಸ್ಥೆಗಳ ಒಪ್ಪಿಗೆ ಇಲ್ಲದೆ ತೆರೆದಿದ್ದ ಕಾರಣ 2013ರಿಂದ ಸಂಸ್ಥೆಯ ಮಾನ್ಯತೆ ರದ್ದಾಗಿತ್ತು.

ಆದರೆ, 2012-13ನೇ ಸಾಲಿನ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರಗಳನ್ನು ಮಾನ್ಯ ಮಾಡುವ ವಿಚಾರ ರಾಜ್ಯಪಾಲರ ಅಧಿಕಾರದಲ್ಲಿದೆ. ಶೀಘ್ರದಲ್ಲಿಯೇ ರಾಜ್ಯಪಾಲರನ್ನು ಭೇಟಿ ಮಾಡಿ ಅವರಿಗೆ ಮನವಿ ಸಲ್ಲಿಸುವುದಾಗಿ ರಾಮದಾಸ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+