ಪಡುಬಿದ್ರೆ: ಲೈಂಗಿಕ ಕಿರುಕುಳ, ವಿಎಚ್ ಪಿ ಮುಖಂಡ ಸೆರೆ
ಪಡುಬಿದ್ರೆ, ಮೇ 6: ವಿಶ್ವಹಿಂದೂ ಪರಿಷತ್ ನ ಹೆಜಮಾಡಿಯ ಘಟಕದ ಅಧ್ಯಕ್ಷ ಕೇಶವ ಸುವರ್ಣ ಎಂಬಾತನನ್ನು ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಕೇಶವ ಅವರ ಮೇಲೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಫ್ಯಾನ್ಸಿ ಸ್ಟೋರ್ ಮಾಲಕರಾಗಿರುವ 50 ವರ್ಷ ವಯಸ್ಸಿನ ಕೇಶವ ಸುವರ್ಣ ಅವರು ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿ ನನ್ನು ವಯಸ್ಕರಿಗೆ ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿದ್ದರು, ಅವರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದೆ.
ಸುಮಾರು ಏಳು ಹಾಗೂ ಆರು ವರ್ಷದ ಇಬ್ಬರು ಬಾಲಕಿಯರು ಈತನ ಫ್ಯಾನ್ಸಿ ಸ್ಟೋರ್ ನಲ್ಲಿ ಗಿಫ್ಟ್ ಐಟಂ ಖರೀದಿಸಲು ಬಂದಿದ್ದರು. ಈ ಸಂದರ್ಭ ಆತ ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ವೀಡಿಯೊ ಚಿತ್ರಗಳನ್ನು ಅವರಿಗೆ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ಹೆದರಿದ ಬಾಲಕಿ ಯರು ಮನೆಗೆ ಓಡಿ ಬಂದು ಮನೆಯಲ್ಲಿ ಈ ವಿಷಯ ತಿಳಿಸಿದರು. ಸುದ್ದಿ ತಿಳಿದಾಕ್ಷಣ ಆತನ ಅಂಗಡಿಯ ಮುಂದೆ ಜನ ಜಮಾಯಿಸಿ ಆತನನ್ನು ತರಾಟೆಗೆ ತೆಗೆದುಕೊಂಡು. ಈ ವೇಳೆ ಅಂಗಡಿ ಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸ್ಥಳೀಯರೇ ಹಿಡಿದು ವಾಪಾಸು ಅಂಗಡಿಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಳಿಕ ಪಡುಬಿದ್ರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಡುಬಿದ್ರೆ ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

2012ರಲ್ಲಿ ವಿವಾಹಿತ ಮಹಿಳೆಯೊ ಬ್ಬರಿಗೆ ದೂರವಾಣಿ ಮೂಲಕ ಅಶ್ಲೀಲ ವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಪ್ರಕರಣ ಈತನ ಮೇಲಿದೆ. ಈತ 2012ರಲ್ಲಿ ಹೆಜಮಾಡಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಎಲ್ ಐಸಿ ಏಜೆಂಟ್ ಎಂದು ಪರಿಚಯಿಸಿ ಆಕೆಯ ಮೊಬೈಲ್ ನಂಬರನ್ನು ಪಡೆದು ಆ ಬಳಿಕ ಆಗಾಗ್ಗೆ ಅಶ್ಲೀಲವಾಗಿ ಮಾತ ನಾಡಿ ಲೈಂಗಿಕ ಕಿರುಕುಳ ನೀಡುತಿದ್ದ. ಇದರಿಂದ ಮನನೊಂದ ಆಕೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಈತ 30 ವರ್ಷಗಳಿಂದ ನಿರಂತರ ವಾಗಿ ಹಲವರಿಗೆ ಲೈಂಗಿಕ ಕಿರುಕುಳ ನಿಡುತ್ತಿದ್ದು, ತನ್ನ ಅಂಗಡಿಯ ಗ್ರಾಹಕರಿಗೆ ಈ ಬಗ್ಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತಿದ್ದ ಎನ್ನಲಾಗಿದೆ.
25 ವರ್ಷಗಳ ಹಿಂದೆ ದಲಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಆ ಬಳಿಕ ಒದೆ ತಿಂದು ದಲಿತ ದೌರ್ಜನ್ಯ ಕಾಯ್ದೆ ಯಡಿ ಪ್ರಕರಣ ದಾಖಲಾಗಿತ್ತು. ಈತ ವಿಎಚ್ ಪಿ ಅಧ್ಯಕ್ಷ ಮಾತ್ರ ವಲ್ಲದೆ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದ ಸ್ಯನೂ ಆಗಿದ್ದಾನೆ. ಕಳೆದ 2012ರಲ್ಲಿ ನಡೆದ ಘಟನೆ ಬಳಿಕ ವಿಹಿಂಪ ಜಿಲ್ಲಾ ಸಮಿತಿ ಆತನಿಗೆ ಮತ್ತು ವಿಎಚ್ ಪಿಗೆ ಸಂಬಂಧ ಇಲ್ಲ ಎಂದು ಪತ್ರಿಕಾ ವರದಿ ನೀಡಿತ್ತು. ಆದರೆ ಈಗಲೂ ಆತನೇ ಹೆಜಮಾಡಿ ಘಟಕದ ಅಧ್ಯಕ್ಷನಾಗಿದ್ದಾನೆ ಎನ್ನಲಾಗಿದೆ.












Click it and Unblock the Notifications