ಉಡುಪಿಯಲ್ಲಿ ನಾಪತ್ತೆಯಾಗಿದ್ದ ಇಶಿಕಾ ಮುಂಬೈನಲ್ಲಿ ಪತ್ತೆ
ಉಡುಪಿ, ಡಿ.6 : ಕು೦ಜಿಬೆಟ್ಟುವಿನ ಶಾರದಾ ಇ೦ಗ್ಲೀಷ್ ಮೀಡಿಯ೦ ವಸತಿ ನಿಲಯ ಶಾಲೆಯಿ೦ದ ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿನಿ ಇಶಿಕಾ ಎಸ್.ಶೆಟ್ಟಿ ಮುಂಬೈನಲ್ಲಿ ಪತ್ತೆಯಾಗಿದ್ದಾಳೆ. ಇಶಿಕಾ ತಾಯಿ ಮುಂಬೈಗೆ ತೆರಳುತ್ತಿದ್ದು, ಆಕೆಯನ್ನು ಕರೆತಂದ ನಂತರ ಉಳಿದ ಮಾಹಿತಿಗಳು ಲಭ್ಯವಾಗಬೇಕಿದೆ.
ಮುಂಬೈನಲ್ಲಿ ಇಶಿಕಾ ಪತ್ತೆಯಾಗಿದ್ದಾಳೆ ಎಂದು ಮುಂಬೈ ಪೊಲೀಸರು ಉಡುಪಿ ಪೊಲೀಸರಿಗೆ ಮತ್ತು ಇಶಿಕಾ ಪೋಷಕರಿಗೆ ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದಾರೆ. ಇಶಿಕಾ ತಾಯಿ ಮುಂಬೈಗೆ ತೆರಳುತ್ತಿದ್ದು ಇನ್ನೆರಡು ದಿನದಲ್ಲಿ ಆಕೆಯನ್ನು ಉಡುಪಿಗೆ ಕರೆತರುವ ಸಾಧ್ಯತೆ ಇದೆ. [ಉಡುಪಿ : 8ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ]

ಉಡುಪಿಯ ಕು೦ಜಿಬೆಟ್ಟುವಿನ ಶಾರದಾ ಇ೦ಗ್ಲೀಷ್ ಮೀಡಿಯ೦ ವಸತಿ ನಿಲಯ ಶಾಲೆಯಿ೦ದ 8ನೇ ವಿದ್ಯಾರ್ಥಿನಿ ಇಶಿಕಾ ಎಸ್.ಶೆಟ್ಟಿ ನ.15ರಂದು ನಾಪತ್ತೆಯಾಗಿದ್ದಳು. ಘಟನೆ ತಡವಾಗಿ ಬೆಳಕಿಗೆ ಬಂದಿತ್ತು, ಆಕೆಯ ಪೋಷಕರು ಈ ಬಗ್ಗೆ ತಮಗೆ ಶಾಲೆಯ ಆಡಳಿತ ಮಂಡಳಿ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. [ಫೈಜಲ್ ನನಗಿಷ್ಟ : ಉಡುಪಿಯ ಇಶಿಕಾ ಪತ್ರ]
ನವೆಂಬರ್ 15ರಂದು ಶಾಲೆಯಲ್ಲಿ ಕ್ರೀಡಾಕೂಟವಿತ್ತು, ಅದರಲ್ಲಿ ಪಾಲ್ಗೊಂಡಿದ್ದ ಇಶಿಕಾ ಸಂಜೆಯ ನಂತರ ತಲೆ ನೋಯುತ್ತಿದೆ ಎಂದು ಹಾಸ್ಟೆಲ್‌ಗೆ ಬೇಗ ತೆರಳಿದ್ದಳು. ಅಲ್ಲಿಂದ ಆಕೆ ನಾಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದರು.
ನಟ ಫೈಜಲ್ ಖಾನ್ ನನಗಿಷ್ಟ : ಇಶಿಕಾ ಶೆಟ್ಟಿ ತನ್ನ ರೂಮ್‌ನಲ್ಲಿ ಬರೆದಿಟ್ಟಿರುವ ಪತ್ರದಲ್ಲಿ "ನನಗೆ ಹೆತ್ತವರ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ. ನಾನು ಏಕಾಂಗಿಯಾಗಿರುವೆ. ಮಹಾರಾಣಾ ಪ್ರತಾಪ್ ಎನ್ನುವ ಹಿಂದಿ ಧಾರಾವಾಹಿಯ ನಟ ಫೈಜಲ್ ಖಾನ್‌ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ" ಎಂದು ಬರೆದಿದ್ದಳು.
'ನನಗೆ ಡಾನ್ಸರ್ ಆಗುವ ಆಸೆ ಇದೆ. ಫೈಜಲ್ ಖಾನ್ ಜೊತೆ ಡಾನ್ಸ್ ಮಾಡುವ ಆಸೆ ಇದೆ. ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವನು ಸಿಗದಿದ್ದರೆ ನಾನು ಸಾಯುತ್ತೇನೆ, ನಾನು ಸತ್ತರೆ ಫೈಜಲ್‌ಗೆ ವಿಷಯ ತಿಳಿಸಿ ಎಂದು ಇಶಿಕಾ ಬರೆದಿದ್ದಳು. ಆದ್ದರಿಂದ ಆಕೆ ಮುಂಬೈಗೆ ಹೋಗಿರಬಹುದು ಎಂದು ಉಡುಪಿ ಪೊಲೀಸರು ಮುಂಬೈನ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು.












Click it and Unblock the Notifications