ಹುಡ್ ಹುಡ್ ಎಫೆಕ್ಟ್ : ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ 'ಭಾಗ್ಯ'
ಬೆಂಗಳೂರು, ಅ.12: ಹುಡ್ ಹುಡ್ ಚಂಡಮಾರುತದ ನೆಪ ಹೇಳುತ್ತಾ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮತ್ತೊಮ್ಮೆ ರಾಜ್ಯದ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಮೇಲೆ ಲೋಡ್ ಶೆಡ್ಡಿಂಗ್ ಹೊರೆ ಹಾಕುತ್ತಿದೆ. ಈಗಿನಿಂದಲೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗುತ್ತದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಪ್ರತಿ ದಿನದಲ್ಲಿ 5 ಗಂಟೆಗಳ 3 ಫೇಸ್ ಕರೆಂಟ್ ಪಡೆಯುವ 'ಭಾಗ್ಯ' ಒದಗಿಸಿದ್ದಾರೆ. ಸುಮಾರು 15 ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರಲಿದೆ.4 ರಿಂದ 6 ಗಂಟೆಗಳ ಕಾಲ ಸಿಂಗಲ್ ಫೇಸ್ ನಲ್ಲಿ ಮೋಟರುಗಳನ್ನು ಓಡಿಸಬಹುದು. ಯಾವ ಯಾವ ಸಮಯದಲ್ಲಿ ಯಾವ ಯಾವ ಫೇಸಿನ ವಿದ್ಯುತ್ ಪೂರೈಕೆಯಾಗಲಿದೆ ಎಂಬ ವಿವರ ಇನ್ನೂ ಇಂಧನ ಇಲಾಖೆಯಿಂದ ಪ್ರಕಟಗೊಂಡಿಲ್ಲ. ರಾಜ್ಯದ ಬೆಂಗಳೂರು ಸೇರಿದಂತೆ ನಗರ ಭಾಗಗಳಲ್ಲಿ 2 ಗಂಟೆ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರಲಿದೆ. [ಹುಡ್ ಹುಡ್ ಅಬ್ಬರವಾಯ್ತು ಜೋರು ಮಳೆ]

ವಿದ್ಯುತ್ ಕೊರತೆ: ಕರ್ನಾಟಕ ರಾಜ್ಯ ಶೇ 25ರಷ್ಟು ವಿದ್ಯುತ್ ಕೊರತೆ ಎದುರಿಸುತ್ತಿದೆ. ಹುಡ್ ಹುಡ್ ಚಂಡ ಮಾರುತದ ಪರಿಣಾಮ ಆಂಧ್ರಪ್ರದೇಶದಿಂದ ಸಿಗುತ್ತಿದ್ದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಸಮರ್ಧನೆ ನೀಡಿದ್ದಾರೆ.
ರಾಯಚೂರು ಥರ್ಮಲ್ ವಿದ್ಯುತ್ ಘಟಕ ನಿರಂತವಾಗಿ ಕಲ್ಲಿದ್ದಲು ಪೂರೈಕೆ ಸಮಸ್ಯೆ ಎದುರಿಸುತ್ತಿದೆ.ರಾಯಚೂರು ಹಾಗೂ ಉಡುಪಿ ವಿದ್ಯುತ್ ಘಟಕಗಳು 1000 ಮೆ.ವ್ಯಾ ವಿದ್ಯುತ್ ಕೊರತೆ ಅನುಭವಿಸುತ್ತಿದೆ. ಸಕ್ಕರೆ ಕಾರ್ಖಾನೆಗಳ ಸಮಸ್ಯೆಯಿಂದ 650 ಮೆ.ವ್ಯಾ ಕೊರತೆ ಉಂಟಾಗಿದೆ ಎಂದು ಸಚಿವ ಡಿಕೆ ಶಿವಕುಮಾರ್ ವಿವರಿಸಿದರು.












Click it and Unblock the Notifications