Get Updates
Get notified of breaking news, exclusive insights, and must-see stories!

ಕನ್ನಡ ಸ್ವಾಭಿಮಾನ ಮರೆತರೇ ಖರ್ಗೆ?: ಹಿಂದಿ ಭಾಷಣಕ್ಕೆ ಟೀಕೆ

ಬೀದರ್, ಮೇ 3: ತಮ್ಮ 'ನಾಮಧಾರ್' ನಾಯಕನ್ನು ಮೆಚ್ಚಿಸಲು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕನ್ನಡ ಸ್ವಾಭಿಮಾನವನ್ನೂ ಮರೆತಿದ್ದಾರೆ ಎಂಬ ಕಟು ಟೀಕೆ ವ್ಯಕ್ತವಾಗಿದೆ.

ಬೀದರ್‌ನ ಔರಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆ ಅವರು ಹಿಂದಿಯಲ್ಲಿಯೇ ಭಾಷಣ ಮಾಡಿದ್ದರು. ಬಳಿಕ ರಾಹುಲ್ ಗಾಂಧಿ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಪ್ರಯತ್ನವೂ ನಡೆದಿರಲಿಲ್ಲ.

ಕರ್ನಾಟಕದ ಚುನಾವಣೆ ವೇಳೆ, ಕನ್ನಡದ ನೆಲದಲ್ಲಿ ಹಿಂದಿಯಲ್ಲಿ ಭಾಷಣ ಮಾಡುವ ಅಗತ್ಯ ಖರ್ಗೆಯವರಿಗೆ ಏನಿತ್ತು ಎಂಬ ಪ್ರಶ್ನೆ ಉದ್ಭವವಾಗಿದೆ. ಖರ್ಗೆ ಅವರ ಹಿಂದಿ ಭಾಷಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆ ವ್ಯಕ್ತವಾಗಿದೆ.

twitterians slams mallikarjun kharge for his hindi speech

ಕನ್ನಡ ಭಾಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳು ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿದ್ದವು. ಆಗ ಸರ್ಕಾರ ಕನ್ನಡಾಭಿಮಾನವನ್ನು ಮುಂದಿಟ್ಟು ಸಮರ್ಥನೆ ಮಾಡಿಕೊಂಡಿತ್ತು. ಈಗ ಭಾಷಣದ ವೇಳೆ ಕನ್ನಡವನ್ನೇ ಮರೆತು ಹಿಂದಿಯಲ್ಲಿ ಭಾಷಣ ಮಾಡಿರುವುದನ್ನು ಬಿಜೆಪಿ ವ್ಯಂಗ್ಯವಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಲಾಗುತ್ತದೆ. ಆದರೆ, ಉಡುಪಿಯಲ್ಲಿ ನಡೆದ ಪ್ರಚಾರ ಸಭೆ ವೇಳೆ ಕೆಲವರು ಅನುವಾದ ಬೇಡ ಎಂದು ಹೇಳಿದ್ದ ಕಾರಣಕ್ಕೆ ಮೋದಿ ಅವರ ಮಾತನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.

ಇದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹಿಂದಿ ಬರುವ ಕೆಲವೇ ಜನರಿಗಾಗಿ ಕನ್ನಡ ಅನುವಾದ ನಿಲ್ಲಿಸಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಯ ಹಿಂದಿ ಹೇರಿಕೆಯ ಮತ್ತೊಂದು ಮಜಲು ಇದು ಎಂದು ವಿರೋಧಿಗಳು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಅದೇ ಹೊಂಡಕ್ಕೆ ಕಾಂಗ್ರೆಸ್ ಕೂಡ ಬಿದ್ದಿದೆ. ಕನ್ನಡ ಚೆನ್ನಾಗಿ ಬಲ್ಲ ಮಲ್ಲಿಕಾರ್ಜುನ ಖರ್ಗೆ, ಕನ್ನಡಿಗರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿರುವುದು ಅವಮಾನಕರ ಎಂದು ಭಾಷಾಭಿಮಾನಿಗಳು ಸಿಟ್ಟು ವ್ಯಕ್ತಪಡಿಸಿದ್ದಾರೆ.

ಸ್ವಾಭಿಮಾನ ಕರಗಿ ಹೋಯಿತೇ?

ವಂಶಾಡಳಿತದ ತಮ್ಮ ಬಾಸ್‌ಗಳನ್ನು ಮೆಚ್ಚಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದವರು ಕನ್ನಡ ಸ್ವಾಭಿಮಾನ ಮಾಯವಾಗುತ್ತದೆ. ಅದು ಕರಗಿ ಹೋಗುತ್ತದೆ.

ಖರ್ಗೆ ಅವರನ್ನೇ ನೋಡಿ. ಕರ್ನಾಟಕದಲ್ಲಿ ನಿಂತು ಕನ್ನಡದ ಜನರನ್ನು ಉದ್ದೇಶಿಸಿ ಮಾತನಾಡುವಾಗ ಕನ್ನಡ ಸ್ವಾಭಿಮಾನ ಮರೆತುಬಿಡುತ್ತಾರೆ. ತಮ್ಮ 'ನಾಮಧಾರ್‌' ಬಾಸ್‌ಅನ್ನು ಮೆಚ್ಚಿಸಲೆಂದೇ ಹಿಂದಿಯಲ್ಲಿ ಮಾತನಾಡುತ್ತಾರೆ ಎಂದು ಪಕ್ಷ ಟೀಕಿಸಿದೆ.

ಬಿಜೆಪಿಯ ಹಿಂದಿ ಹೇರಿಕೆ!

ಕಾಂಗ್ರೆಸ್‌ನ ನಾಯಕರು ಉತ್ತರ ಭಾರತದಿಂದ ಬಂದಿದ್ದಾರೆ. ಆದರೆ, ಬೀದರ್‌ನ ಔರಾದ್‌ ನಲ್ಲಿ ಖರ್ಗೆ ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ಇದು ಬಿಜೆಪಿಯ ಹಿಂದಿ ಹೇರಿಕೆ ಎಂದು ಗುರುಪ್ರಸಾದ್ ಬಿ. ಗುಡಿ ಲೇವಡಿ ಮಾಡಿದ್ದಾರೆ.

ನಾಚಿಕೆಗೇಡು ಎಂದು ಒಪ್ಪಿಕೊಂಡ ಬಿಜೆಪಿ

ಕರ್ನಾಟಕದ ಜನರಿಗೆ ಹಿಂದಿಯಲ್ಲಿ ಭಾಷಣ ಮಾಡುವುದು ನಾಚಿಕೆಗೇಡು ಎನ್ನುವುದನ್ನು ನೀವು ಕೊನೆಗೂ ಒಪ್ಪಿಕೊಂಡಿರಿ. ಈ ವಿಚಾರದಲ್ಲಿ ನಿಮ್ಮ ನಿಲುವು ಬದಲಾಗುವುದಿಲ್ಲ ಎಂದು ಆಶಿಸುತ್ತೇನೆ. ಖರ್ಗೆ ಸಾರ್ ಎಂತಹ ಅವಮಾನಕರ! ಎಂದು ರಕ್ಷಿತ್ ಪೊನ್ನತ್ಪುರ್ ಬಿಜೆಪಿ ಮತ್ತು ಖರ್ಗೆ ಇಬ್ಬರನ್ನೂ ಟೀಕಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+