ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಇಷ್ಟೊಂದು ಸೌಲಭ್ಯಗಳಿವೆಯಾ? ಟಿಕೆಟ್ ಬುಕ್ ಮಾಡುವ ಮುನ್ನ ಈ 12 ಫೀಚರ್‌ಗಳನ್ನು ನೋಡಿ!

ಭಾರತೀಯ ರೈಲ್ವೆಯ ಅತ್ಯಾಧುನಿಕ ಸೆಮಿ-ಹೈಸ್ಪೀಡ್ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದಲ್ಲಿ ರೈಲು ಪ್ರಯಾಣದ ಅನುಭವವನ್ನೇ ಬದಲಿಸಿದೆ. ವೇಗದ ಜೊತೆಗೆ ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡಿರುವ ಈ ರೈಲು, ಪ್ರಯಾಣಿಕರಿಗೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದೆ. ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಲಿ, ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡುವುದು ಇಂದಿನ ದಿನಗಳಲ್ಲಿ ಜನರ ಆಯ್ಕೆ ಕೊಡ ಒಂದಾಗಿದೆ. ಈ ರೈಲಿನಲ್ಲಿರುವ 12 ಪ್ರಮುಖ ಸೌಲಭ್ಯಗಳು ಈ ಕೆಳಗಿನಂತಿವೆ.

1. ವಂದೇ ಭಾರತ್ ರೈಲಿನ ವಿಶೇಷತೆ: ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್

ವಂದೇ ಭಾರತ್ ರೈಲಿನಲ್ಲಿ ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳಿವೆ. ರೈಲು ಚಲಿಸುತ್ತಿರುವಾಗ ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತವೆ. ಇದರಿಂದಾಗಿ ಪ್ರಯಾಣ ಮಾಡುವ ವೇಳೆ ಬಾಗಿಲ ಬಳಿ ನಿಲ್ಲುವ ಮತ್ತು ಸುರಕ್ಷತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಬಾಗಿಲು ಸಂಪೂರ್ಣವಾಗಿ ಮುಚ್ಚಿರುವುದರಿಂದ ಕೋಚ್‌ ಒಳಗಿನ ಎಸಿ ತಂಪು ಹೊರಹೋಗುವುದಿಲ್ಲ.

Vande Bharat Express

2. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ತಿರುಗುವ ಸೀಟುಗಳು

ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ ಪ್ರಯಾಣಿಕರಿಗೆ 180 ಡಿಗ್ರಿ ತಿರುಗುವ ವಿಶಿಷ್ಟವಾದ ಸೀಟುಗಳಿದ್ದು, ರೈಲು ಚಲಿಸುವ ದಿಕ್ಕಿನ ಅನುಗುಣವಾಗಿ ಪ್ರಯಾಣಿಕರು ಸೀಟುಗಳನ್ನು ತಿರುಗಿಸಿಕೊಳ್ಳಬಹುದಾಗಿದ್ದು ಇದು ಪ್ರಯಾಣಿಕರಿಕೆ ಗರಿಷ್ಟ ಆರಾಮಾದಾಯಕ ಮತ್ತು ಹೊಸ ಮಾದರಿಯ ಅನುಭವವನ್ನು ನೀಡುತ್ತದೆ.

3. ರಿಕ್ಲೈನಿಂಗ್ ಸೀಟುಗಳು ಮತ್ತು ವಿಶಾಲ ಲೆಗ್‌ರೂಮ್

ಚೇರ್ ಕಾರ್ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ಎರಡರಲ್ಲೂ ದೇಹಕ್ಕೆ ಆರಾಮ ನೀಡುವ ಅತ್ಯುತ್ತಮ ರಿಕ್ಲೈನಿಂಗ್ ಸೀಟುಗಳಿವೆ. ನಿಮ್ಮ ಜರ್ನಿಯನ್ನು ಇನ್ನು ಹಾಯಾಗಿಸಲು ಸೀಟುಗಳ ಮಧ್ಯೆ ಕಾಲು ಚಾಚಿಕೊಳ್ಳಲು ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, ಇದು ಸುದೀರ್ಘ ಪ್ರಯಾಣವನ್ನು ಅತ್ಯಂತ ಸುಲಭವಾಗಿಸುತ್ತದೆ.

ವಂದೇ ಭಾರತ್‌ನಲ್ಲಿ ಸಾಕು ನಾಯಿ, ಬೆಕ್ಕಿನೊಂದಿಗೆ ಪ್ರಯಾಣಿಸಬೇಕೇ? ಈ ಹೊಸ ಪೆಟ್ ಬಾಕ್ಸ್ ನಿಯಮ ತಿಳಿಯಿರಿ
ವಂದೇ ಭಾರತ್‌ನಲ್ಲಿ ಸಾಕು ನಾಯಿ, ಬೆಕ್ಕಿನೊಂದಿಗೆ ಪ್ರಯಾಣಿಸಬೇಕೇ? ಈ ಹೊಸ ಪೆಟ್ ಬಾಕ್ಸ್ ನಿಯಮ ತಿಳಿಯಿರಿ

4. ಬೃಹತ್ ಪನೋರಮಿಕ್ ಕಿಟಕಿಗಳು: ಪ್ರಕೃತಿ ದರ್ಶನ

ವಂದೇ ಭಾರತ್ ರೈಲಿನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದರ ಬೃಹತ್ ಪನೋರಮಿಕ್ ಕಿಟಕಿಗಳು. ಪ್ರಯಾಣಿಕರು ಪ್ರಯಾಣದ ವೇಳೆ ಬೇಸರಗೊಳ್ಳದಂತೆ ಹೊರಗಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಈ ಕಿಟಕಿಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ ಹೊರಗಿನ ನದಿ, ಕಾಡು ಹಾಗೂ ಸುಂದರ ಪರಿಸರವು ಅತ್ಯಂತ ಸ್ಪಷ್ಟವಾಗಿ ಕಾಣಿಸುವುದರಿಂದ ಪ್ರಯಾಣದ ಆನಂದ ಹೆಚ್ಚುತ್ತದೆ.

5. ಸ್ಮಾರ್ಟ್ ಪ್ರಯಾಣಕ್ಕೆ ಸ್ಮಾರ್ಟ್ ಸೌಲಭ್ಯ: ವೈ-ಫೈ ಮತ್ತು ಮೊಬೈಲ್ ಚಾರ್ಜಿಂಗ್

ಇನ್ಮುಂದೆ ರೈಲು ಪ್ರಯಾಣದ ವೇಳೆ ಇಂಟರ್ನೆಟ್ ಮತ್ತು ಚಾರ್ಜಿಂಗ್ ಸಮಸ್ಯೆ ಎದುರಾಗುವುದಿಲ್ಲ. ಪ್ರತಿ ಸೀಟಿನ ಬಳಿ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಪಾಯಿಂಟ್‌ಗಳಿವೆ. ಕೆಲವು ಮಾರ್ಗಗಳಲ್ಲಿ ಆನ್‌ಬೋರ್ಡ್ ವೈ-ಫೈ ಸೇವೆಯನ್ನೂ ಒದಗಿಸಲಾಗಿದೆ.

6. ವಂದೇ ಭಾರತ್‌ನಲ್ಲಿ ಬಯೋ-ವ್ಯಾಕ್ಯೂಮ್ ಶೌಚಾಲಯ!

ವಂದೇ ಭಾರತ್ ರೈಲಿನಲ್ಲಿ ಕೇವಲ ವೇಗ ಮಾತ್ರವಲ್ಲ, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಇದರಲ್ಲಿರುವ ಆಧುನಿಕ ಬಯೋ-ವ್ಯಾಕ್ಯೂಮ್ ಶೌಚಾಲಯಗಳು ನೀರನ್ನು ಉಳಿಸುವುದಲ್ಲದೆ, ಸಂಪೂರ್ಣ ನೈರ್ಮಲ್ಯವನ್ನು ಖಚಿತಪಡಿಸುತ್ತವೆ. ವಿಶೇಷವೆಂದರೆ, ಸೋಂಕು ಹರಡುವುದನ್ನು ತಡೆಯಲು ಇಲ್ಲಿ 'ಟಚ್-ಫ್ರೀ ಫಿಟ್ಟಿಂಗ್ಸ್' ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪ್ರಯಾಣ ಮಾತ್ರವಲ್ಲ, ಪ್ರವಾಸವೂ ಹೌದು! ವಂದೇ ಭಾರತ್ ಸ್ಲೀಪರ್ ಮಾರ್ಗದ 5 ಬೆಸ್ಟ್ ಸ್ಪಾಟ್‌ಗಳು
ಪ್ರಯಾಣ ಮಾತ್ರವಲ್ಲ, ಪ್ರವಾಸವೂ ಹೌದು! ವಂದೇ ಭಾರತ್ ಸ್ಲೀಪರ್ ಮಾರ್ಗದ 5 ಬೆಸ್ಟ್ ಸ್ಪಾಟ್‌ಗಳು

7. ಎಲ್‌ಇಡಿ ಲೈಟಿಂಗ್ ಸೌಲಭ್ಯ

ರೈಲಿನಲ್ಲಿ ಪ್ರಯಾಣ ಮಾಡುವವರ ಅನುಕೂಲಕ್ಕಾಗಿ ಒಳಗಡೆ ಮೃದುವಾದ ಎಲ್‌ಇಡಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಕತ್ತಲೆಯಲ್ಲೂ ಕಣ್ಣಿಗೆ ತಂಪು ನೀಡುವಂತಿದ್ದು, ನಿಮ್ಮ ಒಟ್ಟಾರೆ ರೈಲು ಪ್ರಯಾಣದ ಅನುಭವವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ.

8. ಜಿಪಿಎಸ್ ಆಧಾರಿತ ಮಾಹಿತಿ ತಂತ್ರಜ್ಞಾನ

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಜಿಪಿಎಸ್ ಆಧಾರಿತ ಅತ್ಯಾಧುನಿಕ ಮಾಹಿತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೈಲಿನ ಒಳಗಿರುವ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಧ್ವನಿ ಘೋಷಣೆಗಳ ಸಹಾಯದಿಂದ, ರೈಲು ಪ್ರಸ್ತುತ ಎಷ್ಟು ವೇಗದಲ್ಲಿ ಚಲಿಸುತ್ತಿದೆ, ಮುಂದಿನ ನಿಲ್ದಾಣ ಯಾವುದು ಮತ್ತು ಅದು ಎಷ್ಟು ಹೊತ್ತಿಗೆ ನಿಲ್ದಾಣವನ್ನು ತಲುಪುತ್ತದೆ ಎಂಬ ಸಂಪೂರ್ಣ ನೈಜ-ಸಮಯದ (Real-time) ಮಾಹಿತಿಯು ಪ್ರಯಾಣಿಕರಿಗೆ ಸುಲಭವಾಗಿ ಲಭ್ಯವಾಗುತ್ತದೆ.

9. ಸೆಂಟ್ರಲೈಜ್ಡ್ ಏರ್ ಕಂಡೀಷನಿಂಗ್

ಹೊರಗಿನ ಹವಾಮಾನ ಹೇಗೇ ಇದ್ದರೂ ರೈಲಿನೊಳಗೆ ಸಮತೋಲಿತ ತಾಪಮಾನವನ್ನು ಕಾಯ್ದುಕೊಳ್ಳುವ ಕೇಂದ್ರಿಯ ಎಸಿ ವ್ಯವಸ್ಥೆ ಅಳವಡಿಸಲಾಗಿದೆ.

10. ರೈಲಿನಲ್ಲೇ ಊಟದ ವ್ಯವಸ್ಥೆ

ಮಾರ್ಗ ಮತ್ತು ಟಿಕೆಟ್ ಪ್ರಕಾರ ಪ್ರಯಾಣಿಕರಿಗೆ ಉಪಾಹಾರ, ಊಟ, ತಿಂಡಿ ಹಾಗೂ ಪಾನೀಯಗಳನ್ನು ರೈಲಿನಲ್ಲೇ ನೀಡಲಾಗುತ್ತದೆ.

11. ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮತ್ತಷ್ಟು ನಿರಾಳ

ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾದ ವಂದೇ ಭಾರತ್ ರೈಲು ವೇಗ ಹೆಚ್ಚಿಸುವಾಗ ಕಿಂಚಿತ್ತು ತೊಂದರೆ ಆಗದಂತೆ ನಿರ್ಮಾಣ ಮಾಡಲಾಗಿದೆ. ಇದರ ಸುಧಾರಿತ ಅತ್ಯುತ್ತಮ ಸಸ್ಪೆನ್ಷನ್ ತಂತ್ರಜ್ಙಾನದಿಂದಾಗಿ ಇನ್ಮುಂದೆ ನಿಮ್ಮ ರೈಲು ಪ್ರಯಾಣ ಮತ್ತಷ್ಟು ಸುಗಮ ಹಾಗು ಆರಾಮದಾಯಕವಾಗಿದೆ.

12. ಸಾಕಷ್ಟು ಲಗೇಜ್ ಜಾಗ

ಪ್ರಯಾಣಿಕರ ಸಾಮಾನುಗಳನ್ನು ಸುರಕ್ಷಿತವಾಗಿ ಇಡಲು ಮೇಲ್ಭಾಗದಲ್ಲಿ ಲಗೇಜ್ ಸ್ಟ್ಯಾಂಡ್‌ ಹಾಗೂ ಹೆಚ್ಚುವರಿ ಸಂಗ್ರಹಣಾ ಸ್ಥಳವನ್ನು ಕಲ್ಪಿಸಲಾಗಿದೆ.

ವೇಗ, ಸುರಕ್ಷತೆ ಮತ್ತು ಆರಾಮದಾಯಕ ಸೌಲಭ್ಯಗಳ ಸಮನ್ವಯವೇ ವಂದೇ ಭಾರತ್ ರೈಲಿನ ಪ್ರಮುಖ ಆಕರ್ಷಣೆ. ಆಧುನಿಕ ತಂತ್ರಜ್ಞಾನ ಮತ್ತು ಪ್ರಯಾಣಿಕ ಸ್ನೇಹಿ ಸೌಲಭ್ಯಗಳಿಂದ ಈ ರೈಲು ಭಾರತದಲ್ಲಿ ರೈಲು ಪ್ರಯಾಣದ ಹೊಸ ಅನುಭವವನ್ನು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+