ಬೆಂಗಳೂರುಗಿಂತ ಒಂದು ಹೆಜ್ಜೆ ಮುಂದಿದೆ ಚೆನ್ನೈ: ಬಸ್, ಮೆಟ್ರೋ ಟಿಕೆಟ್‌ನಲ್ಲಿ ಡಿಜಿಟಲ್ ಕ್ರಾಂತಿ, ಏನಿದು?

ಚೆನ್ನೈ: ಕರ್ನಾಟಕ ರಾಜಧಾನಿ ಬೆಂಗಳೂರು ಮೆಟ್ರೋ, ನಗರ ಸಾರಿಗೆ, ದೈನಂದಿನ ಪ್ರಯಾಣಿಕರ ಹೆಚ್ಚಳ, ಸಂಚಾರ ಸಮಸ್ಯೆಗಳಿಗೆ ಸುದ್ದಿಯಾಗುತ್ತಲೇ ಇದೆ. ಇಂಥದ್ದೆ ಸಮಸ್ಯೆಗಳು ತಮಿಳುನಾಡು ರಾಜಧಾನಿ ಚೆನ್ನೈನಲ್ಲೂ ಇವೆ. ಆದರೆ ಚೆನ್ನೈ ಡಿಜಿಟಲ್ ವ್ಯವಸ್ಥೆ ಅಳವಡಿಕೆಯಲ್ಲಿ ಬೆಂಗಳೂರಿಗಿಂತಲೂ ಮುಂದಿದೆ.
ಚೆನ್ನೈನ ಮಹಾನಗರ ಸಾರಿಗೆ ಸಂಸ್ಥೆ (MTC) ಬಸ್‌ಗಳಲ್ಲಿ, ಇಲ್ಲಿನ ಸಾರಿಗೆ ವ್ಯವಸ್ಥೆಯಲ್ಲಿ ಸದ್ದಿಲ್ಲದೆ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಪ್ರಯಾಣಿಕರ ಸಹಿ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ.

ಹೌದು, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಗೆ ಬಂದ ಶಕ್ತಿ ಯೋಜನೆ ಬೆನ್ನಲ್ಲೆ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಯಿತು. ಹತ್ತುವ ಇಳಿಯುವ ಸ್ಥಳ ಆಯ್ಕೆ ಮಾಡಿದರೆ ತಗುಲುವ ಟಿಕೆಟ್ ಹಣದ ಕ್ಯೂಆರ್ ಕೋಡ್ ಪ್ರದರ್ಶನವಾಗುತ್ತಿದ್ದಂತೆ ಹಣ ಪಾವತಿಸಬಹುದು. ಆದರೆ ಈ ಪ್ರಕ್ರಿಯೆ ಕೊಂಚ ವಿಳಂಬವಾಗುತ್ತಿದೆ. ಆದರೆ ಚೆನ್ನೈ ಡಿಜಿಟಲ್ ವ್ಯವಸ್ಥೆ ಮುಂದಿದ್ದು, ಇಲ್ಲಿ ನಗರಾದ್ಯಂತ 'ಒನ್ ಸಿಟಿ, ಒನ್ ಕಾರ್ಡ್' ಅನ್ನು ಸುಲಲಿತವಾಗಿ ಬಳಕೆ ಆಗುತ್ತಿದೆ.

Chennai

ವರ್ಷಗಳ ಹಿಂದೆ ಬಸ್ ಪ್ರಯಾಣ ಎಂದರೆ ಚಿಲ್ಲರೆ ಹಣದ ಸಮಸ್ಯೆ, ಬಸ್ ನಿರ್ವಾಹಕ ಪ್ರಯಾಣಿಕರ ಮಧ್ಯೆ ಜಗಳ, ಅಸಮಾಧಾನದ ವಾತಾವರಣ ನೆನಪಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಂತ್ರಜ್ಞಾನ ಸಾರಿಗೆ ವಲಯ ಪ್ರವೇಶಿಸಿದ ಬಳಿಕ ಪ್ರಯಾಣಿಕರ ಸಂಚಾರ ಸುಲಭವಾಗಿದೆ. ಡಿಜಿಟಲ್/ಕ್ಯೂಆರ್ ಕೋಡ್ ವ್ಯವಸ್ಥೆ ಬಸ್‌ನಲ್ಲಿ ಜಾರಿಯಾದ ಬಳಿಕ ಜನರು ಯುಪಿಐ ಮೂಲಕ ಪಾವತಿಸಿ ಓಡಾಡುತ್ತಿದ್ದಾರೆ. ಇದು ಬೆಂಗಳೂರು, ಕರ್ನಾಟಕದಲ್ಲೂ ಇದೆ. ಅದರಲ್ಲೇನು ಬದಲಾವಣೆ ಅಂತೀರಾ?..ಚೆನ್ನೈನಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿನ ತಂತ್ರಜ್ಞಾನ ವ್ಯವಸ್ಥೆ ಒಂದು ಹೆಜ್ಜೆ ಮುಂದಿದೆ. ಅತ್ಯಾಧುನಿಕ ಸ್ಪರ್ಶದೊಂದಿಗೆ ನವ ರೂಪ ಪಡೆದುಕೊಂಡಿವೆ.

BMTC ಸಂಸ್ಥೆ 4,500 ಹೊಸ ಇ-ಬಸ್; ಕರ್ನಾಟಕ ಸಚಿವ ಸಂಪುಟದ ಅನುಮೋದನೆ ವಿಳಂಬ: ವ್ಯಾಪಕ ಆಕ್ರೋಶ
BMTC ಸಂಸ್ಥೆ 4,500 ಹೊಸ ಇ-ಬಸ್; ಕರ್ನಾಟಕ ಸಚಿವ ಸಂಪುಟದ ಅನುಮೋದನೆ ವಿಳಂಬ: ವ್ಯಾಪಕ ಆಕ್ರೋಶ

'ಒನ್ ಸಿಟಿ, ಒನ್ ಕಾರ್ಡ್' ಸುಲಭ ಬಳಕೆ

ಚೆನ್ನೈನಲ್ಲಿ ನೀವು ಮೆಟ್ರೋಗಾಗಿ ಬಳಸಲಾಗುವ 'ಒನ್ ಸಿಟಿ, ಒನ್ ಕಾರ್ಡ್' ರಾಷ್ಟ್ರೀಯ ಸಾಮಾನ್ಯ ಚಲನಶೀಲತಾ ಕಾರ್ಡ್ ಅಲ್ಲಿನ ಸ್ಥಳೀಯ ಬಸ್‌ಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದೆ. ಬಸ್ ನಿರ್ವಾಹಕರು ಗೊಂದಲವಿಲ್ಲದೆ ಈ ನಿರ್ಧಾರವನ್ನು ಸ್ವೀಕರಿಸಿ ಟಿಕೆಟ್ ನೀಡುತ್ತಿದ್ದಾರೆ. ಜೊತೆಗೆ ಬಸ್ಸುಗಳ ಒಳಗೆ ಕ್ಯೂಆರ್ ಕೋಡ್ ಸಹ ಇವೆ. ಪ್ರಯಾಣಿಕರು 'ಚೆನ್ನೈ ಒನ್' ಆಪ್ ಅಥವಾ ಯುಪಿಐ ಮೂಲಕ ತತ್‌ಕ್ಷಣ ಹಣ ಪಾವತಿಸಿ ಡಿಜಿಟಲ್ ಟಿಕೆಟ್ ಪಡೆಯುತ್ತಿದ್ದಾರೆ. ಜನದಟ್ಟಣೆಯ ಬಸ್ಸಿನಲ್ಲಿಯೂ ಸುರಕ್ಷಿತವಾಗಿ ಮೊಬೈಲ್ ಪಾಸ್ ಮಾಡಿ ಸ್ಕ್ಯಾನ್ ಮಾಡಿಸಿಕೊಳ್ಳುವ ಪ್ರವೃತ್ತಿ ಚೆನ್ನೈ ಜನರಲ್ಲಿ ಹೆಚ್ಚಾಗುತ್ತಿದೆ.

ಡಿಜಿಟಲ್ ಕ್ರಾಂತಿ, ಚಿಲ್ಲರೆ ತಲೆನೋವು ಮಾಯ

ಬಸ್ ಪ್ರಯಾಣದ ವೇಳೆ ಚಿಲ್ಲರೆ ಸಮಸ್ಯೆ ಹೆಚ್ಚಾಗುತ್ತಿತ್ತು. ಇದೇ ವಿಚಾರವಾಗಿ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಆಗಾಗ ಜಗಳ, ವಾಗ್ವಾದಗಳು ನಡೆಯುತ್ತಿದ್ದವು. ಆದರೆ ಹೊಸ ಡಿಜಿಟಲ್ ಕಾರ್ಡ್ ವ್ಯವಸ್ಥೆಯು ಚಿಲ್ಲರೆ ತಲೆನೋವನ್ನು ನಿವಾರಿಸಿದೆ. ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಯ ಒಟ್ಟು ಟಿಕೆಟ್ ಮಾರಾಟದಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ವಹಿವಾಟು ಡಿಜಿಟಲ್ ಮತ್ತು ಕ್ಯೂಆರ್ ಕೋಡ್ ರೂಪದಲ್ಲಿ ನಡೆಸುತ್ತಿದೆ.

ಈ ಕ್ರಾಂತಿ ಕೇವಲ ಹಣ ಪಾವತಿಯ ಸೌಲಭ್ಯಕ್ಕೆ ಸೀಮಿತವಾಗಿಲ್ಲ, ಇದು ಸಾರಿಗೆ ಸಿಬ್ಬಂದಿಯ ನಡವಳಿಕೆಯಲ್ಲೂ ಧನಾತ್ಮಕ ಬದಲಾವಣೆ ತಂದಿದೆ. ಸಾರಿಗೆ ಸಿಬ್ಬಂದಿ ಪ್ರತಿನಿತ್ಯದ ಚಿಲ್ಲರೆ ಹಣ ಹೊಂದಿಸುವ ಒತ್ತಡದಿಂದ ಮುಕ್ತರಾಗಿದ್ದಾರೆ. ಸಾರ್ವಜನಿಕ ಗೊಂದಲ ತಡೆಯುವ ಈ ಸ್ಮಾರ್ಟ್ ಪಾವತಿ ವಿಧಾನವು ಪ್ರಯಾಣಿಕರು ನಿರಾಳವಾಗಿ ಗಮ್ಯಸ್ಥಾನ ತಲುಪಲು ನೆರವಾಗುತ್ತಿದೆ. ಒಟ್ಟಾರೆ ಚೆನ್ನೈ ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಿದೆ.

ಕಬ್ಬನ್ ಪಾರ್ಕ್ ನಿಲ್ದಾಣ: ನಮ್ಮ ಮೆಟ್ರೋ ಕೆಟ್ಟು ನಿಲ್ತಿರೋದ್ಯಾಕೆ? ತನಿಖೆ ನಡೆಸಿದ BMRCLಗೆ ಗೊತ್ತಾದ ಸತ್ಯ
ಕಬ್ಬನ್ ಪಾರ್ಕ್ ನಿಲ್ದಾಣ: ನಮ್ಮ ಮೆಟ್ರೋ ಕೆಟ್ಟು ನಿಲ್ತಿರೋದ್ಯಾಕೆ? ತನಿಖೆ ನಡೆಸಿದ BMRCLಗೆ ಗೊತ್ತಾದ ಸತ್ಯ

ಚೆನ್ನೈ ಸಾರಿಗೆ ವಲಯದಲ್ಲಿ ಟಿಕೆಟಿಂಗ್ ವ್ಯವಸ್ಥೆಯಲ್ಲಿ ತಂದಿರುವ ಈ ಹೊಸ ಬದಲಾವಣೆ ನಿಜಕ್ಕೂ ಇತರ ನಗರಗಳಿಗೂ ಮಾದರಿ. ಭಾರತದಂತಹ ಪ್ರಗತಿಪರ ದೇಶದ ಮಹಾನಗರಗಳಲ್ಲಿ ಡಿಜಿಟಲ್ ವ್ಯವಸ್ಥೆಯು ಹೇಗೆಲ್ಲ ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿಸಬಹುದು, ಹೇಗೆ 'ಒನ್ ಸಿಟಿ, ಒನ್ ಕಾರ್ಡ್' ಬಳಕೆ ಮಾಡಬಹುದೆಂದು ಚೆನ್ನೈ ತೋರಿಸಿಕೊಟ್ಟಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+