TV9 C-Voter Opinion Poll Survey: ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲಿರುವ ಕಾಂಗ್ರೆಸ್‌ಗೆ ಸಿಂಹಪಾಲು.
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಟಿವಿ 9 ಕನ್ನಡ ಸಿ-ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ಅಂತಿಮ ಫಲಿತಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಈ ಸಿ-ವೋಟರ್ ಸಮೀಕ್ಷೆ ಪ್ರಕಾರ ನೋಡುವುದಾದರೆ, ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಸದರಿ 2023ರ ಚುನಾವಣೆಯಲ್ಲಿ ಪ್ರಬಲ ವಿರೋಧ ಪಕ್ಷ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸುಮಾರು ಮೂರು ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಬಿಜೆಪಿಗೆ ಹಿನ್ನಡೆ ಆಗಿದೆ.

ಕರಾವಳಿ ಭಾಗ, ಮಧ್ಯ ಕರ್ನಾಟಕ, ಸಮಗ್ರ ಬೆಂಗಳೂರು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕ್ಷೇತ್ರಗಳೆಲ್ಲವನ್ನು ಒಳಗೊಂಡು ಕಾಂಗ್ರೆಸ್ ಒಟ್ಟು 106 ರಿಂದ 116 ಸೀಟುಗಳನ್ನು ಗಳಿಸಲಿದೆ ಎಂದು ಸಮೀಕ್ಷೆಯ ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಬಿಜೆಪಿಗೆ 79-89 ಸ್ಥಾನ
ಆಡಳಿತ ವಿರೋಧಿ ಅಲೆ ಇದೆ ಎನ್ನುವ ಕಾಂಗ್ರೆಸ್ ಮಾತುಗಳು ಸಮೀಕ್ಷೆಯಲ್ಲಿ ಸತ್ಯವಾದಂತಿದೆ. ಏಕೆಂದರೆ ಒಂದೇ ಅವಧಿಯಲ್ಲಿ ಎರಡು ಮುಖ್ಯಮಂತ್ರಿಗಳನ್ನು ಕಂಡ ಕೇಸರಿ ಪಡೆ ಬಿಜೆಪಿಯು ಈ ಸಲ ಶೇಕಡಾ 40ರಷ್ಟು ಸ್ಥಾನ ಪಡೆಯುವಲ್ಲಿ ವಿಫಲವಾಗಲಿದೆ. ಕೇವಲ 79-89 ಸ್ಥಾನ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಕಳೆದ ಬಾರಿ ಸರ್ಕಾರ ರಚನೆಯಲ್ಲಿ ನೀರ್ಣಾಯಕ ಪಾತ್ರ ವಹಿಸಿದ್ದ ಜೆಡಿಎಸ್ ಪಕ್ಷಕ್ಕೆ ಈ ಬಾರಿ 24-34 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಇನ್ನು ಆಮ್ ಆದ್ಮಿ ಪಕ್ಷ (AAP) ಸೇರಿದಂತೆ ಇತರೆ ಪಕ್ಷಗಳು ಒಟ್ಟು ಸ್ಥಾನಗಳ ಪೈಕಿ 5 ಸೀಟು ಗೆಲ್ಲಲಿವೆ ಎಂದು ಸಿ ವೋಟರ್ ಸಮೀಕ್ಷಾ ವರದಿ ಖಚಿತ ಪಡಿಸಿದೆ.












Click it and Unblock the Notifications