TV9 Bharatvarsh Exit Poll Survey 2023: ರಾಜ್ಯದಲ್ಲಿ ಅತಂತ್ರ ಫಲಿತಾಂಶ!?
ಬೆಂಗಳೂರು, ಮೇ.10: ಬಹು ನಿರೀಕ್ಷಿತ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ರಾಜ್ಯಾದ್ಯಂತ ಶಾಂತಿಯುತವಾಗಿ ಬುಧವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮತದಾನ ಅಂತ್ಯವಾದ ಬೆನ್ನಲ್ಲೇ ಹಲವು ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶಗಳನ್ನು ಬಿಡುಗಡೆ ಮಾಡಿವೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಬಿಡುಗಡೆ ಮಾಡಿರುವ TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಆದರೆ, ಅಂಕಿ ಅಂಶಗಳನ್ನು ನೋಡಿದರೇ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ನಿರೀಕ್ಷೆಯಿದೆ. ಈ ಸಮೀಕ್ಷೆಯ ಪ್ರಕಾರ ಜಾತ್ಯಾತೀತ ಜನತಾದಳದ ಪಾತ್ರ ಬಹು ಮುಖ್ಯವಾಗಲಿದೆ.

TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 99 ರಿಂದ 109 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ. ಆಡಳಿತರೂಢ ಬಿಜೆಪಿ 88 ರಿಂದ 98 ಸ್ಥಾನಗಳಲ್ಲಿ ಗೆಲ್ಲಲಿದೆ. ಜಾತ್ಯಾತೀತ ಜನತಾದಳ 21ರಿಂದ 26 ಸ್ಥಾನಗಳನ್ನು ಪಡೆಯಲಿದೆ. ಇನ್ನು, ಇತರರು ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್ ಫಲಿತಾಂಶ ನೀಡಿದೆ.
ರಾಜ್ಯದಲ್ಲಿ ಸುಮಾರು ಶೇ 70ರಷ್ಟು ಮತದಾನವಾಗಿದ್ದು, ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ. ಅದಕ್ಉ ಮುನ್ನ ಹಲವು ಸಂಸ್ಥೆಗಳು ಎಕ್ಸಿಟ್ ಪೋಲ್ ಫಲಿತಾಂಶವನ್ನು ಬಿಡುಗಡೆ ಮಾಡಿವೆ. TV 9 ಭಾರತ್‌ವರ್ಷ- ಪೋಲ್‌ಸ್ಟ್ರಾಟ್ ಎಕ್ಸಿಟ್ ಪೋಲ್ ಪ್ರಕಾರ ಎಚ್‌ಡಿ ಕುಮಾರಸ್ವಾಮಿ ಅವರ ಜಾತ್ಯಾತೀತ ಜನತಾ ದಳ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ.













Click it and Unblock the Notifications