ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಳುನಾಡು ಪ್ರತ್ಯೇಕ ರಾಜ್ಯವಾದರೆ ತಪ್ಪೇನು: 10 ಪ್ರಶ್ನೆಗೆ 10 ಉತ್ತರ

By ರವೀಂದ್ರ ಶೆಟ್ಟಿ, ಕುತ್ಯತ್ತೂರು
|
Google Oneindia Kannada News

ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಕೂಗು ಮೊನ್ನೆ ರಾಜ್ಯೋತ್ಸವದ ದಿನದಂದು ಮಗುದೊಮ್ಮೆ ಪ್ರತಿಧ್ವನಿಸಿತ್ತು. ಹಾಗಂತ, ಈ ಕೂಗು ಈವರೆಗೆ ವಿಧಾನಸೌಧದ ತನಕ ಮಾರ್ಧನಿಸದ ಉದಾಹರಣೆಗಳು ಕಮ್ಮಿ.

ಕರ್ನಾಟಕದಿಂದ ಬೇರ್ಪಟ್ಟು ತುಳುನಾಡು ಪ್ರತ್ಯೇಕ ರಾಜ್ಯವಾದಲ್ಲಿ ಅದರಿಂದಾಗುವ ಬಾಧಕವನ್ನು ಮತ್ತು ಈ ಹೋರಾಟ ಹುಟ್ಟುಹಾಕುತ್ತಿರುವವರಿಗೆ ನಮ್ಮ ಅಂಕಣಗಾರ ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಹತ್ತು ಪ್ರಶ್ನೆಯನ್ನು ಕೇಳಿದ್ದರು. (ತುಳುನಾಡು ಬೇಡಿಕೆ ಇಟ್ಟವರಿಗೆ 10 ಪ್ರಶ್ನೆಗಳು)

ದೀಕ್ಷಿತ್ ಅವರ ಹತ್ತು ಪ್ರಶ್ನೆಗೆ "ತುಳುನಾಡು ಪ್ರತ್ಯೇಕ ರಾಜ್ಯವಾದರೆ ತಪ್ಪೇನು, 10 ಪ್ರಶ್ನೆಗೆ 10 ಉತ್ತರಗಳು" ಎನ್ನುವ ಕಾಮೆಂಟ್ ಮೂಲಕ ನಮ್ಮ ಒನ್ ಇಂಡಿಯಾ ಕನ್ನಡದ ಓದುಗ ರವೀಂದ್ರ ಶೆಟ್ಟಿ, ಕುತ್ಯತ್ತೂರು ಪ್ರತ್ಯುತ್ತರ ನೀಡಿದ್ದಾರೆ.

ರವೀಂದ್ರ ಶೆಟ್ಟಿಯವರ ಹತ್ತು ಪ್ರಶ್ನೆಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ (ಸಂ)

ತುಳುವನ್ನು ಕನ್ನಡದಲ್ಲಿ ಬರೆದರೆ ಅಪರಾಧವಾಗುತ್ತದೆಯೇ?
1. ಲಿಪಿಯೇ ಇಲ್ಲದೆ ದೇವನಾಗರಿ ಲಿಪಿಯನ್ನು ಹಿಂದಿ ಎಂದು ರಾಷ್ಟ್ರ ಭಾಷೆಯಾಗಿ ನಾವು ಬಳಸುತ್ತಿಲ್ಲವೇ? ತುಳು ಹಿಂದಿಗಿಂತ ಶ್ರೇಷ್ಠವಾಗಿದ್ದು, ಸ್ವಂತ ಲಿಪಿ ಹೊಂದಿದೆ. ಅನ್ಯರ ಆಕ್ರಮಣದಿಂದ ಜೀರ್ಣವಾಗಿರುವ ತುಳು ಲಿಪಿಯ ಬಳಕೆ ವ್ಯಾಪಕವಾಗುವವರೆಗೆ ತುಳುವನ್ನು ಕನ್ನಡದಲ್ಲಿ ಬರೆದರೆ ಅಪರಾಧವಾಗುತ್ತದೆಯೇ? ಭಾರತ ದೇಶದಲ್ಲಿ ಲಿಪಿಯೇ ಇಲ್ಲದ ಇತರ ಲಿಪಿಗಳಿಂದ ಎರವಲು ಪಡೆದುಕೊಂಡಿರುವ ಇಂಗ್ಲಿಷ್‌ ಭಾಷೆಯನ್ನು ನಾವು ಸಂಪರ್ಕ ಭಾಷೆಯಾಗಿ ಬಳಸುತ್ತಿದ್ದೇವೆ. ತುಳುನಾಡಿನಲ್ಲಿ ಇಂಗ್ಲಿಷ್‌ ನಲ್ಲೂ ತುಳುವನ್ನು ಬರೆಯಬಹುದು. ಲಿಪಿಯ ಬಗ್ಗೆ ಅಪಸ್ವರ ಯಾಕೆ?

ಮುಂದಿನ ಪ್ರಶ್ನೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಕರ್ನಾಟಕದ ಹೆಬ್ಬಾಗಿಲು ತುಳುನಾಡಿನ ಮಂಗಳೂರು

ಕರ್ನಾಟಕದ ಹೆಬ್ಬಾಗಿಲು ತುಳುನಾಡಿನ ಮಂಗಳೂರು

2. ಕರ್ನಾಟಕದ ಹೆಬ್ಬಾಗಿಲು ಸ್ವಾಮೀ ತುಳುನಾಡಿನ ಮಂಗಳೂರು, ಇಲ್ಲಿ ಸಮುದ್ರಮಾರ್ಗ, ರೈಲು ಮಾರ್ಗ, ರಸ್ತೆ ಮಾರ್ಗ, ವಿಮಾನ ಮಾರ್ಗ ಎಲ್ಲವೂ ಇದೆ. ಈ ಕಾರಣಕ್ಕಾಗಿಯೇ ಮಾರಕ ಕೈಗಾರಿಕೆಗಳಿಂದ ತುಳುನಾಡಿನ ಅಂತ್ಯಕ್ಕೆ ಹುನ್ನಾರ ಮಾಡಲಾಗುತ್ತಿದೆ. ಬೇಕಾದಷ್ಟು ನೈಸರ್ಗಿಕ ಸಂಪತ್ತು ತುಳುನಾಡಿನಲ್ಲಿದೆ. ಬೆಂಗಳೂರಿಗರು ಅಮೆರಿಕಾ ಮತ್ತಿತರ ದೇಶಗಳಲ್ಲಿ ದುಡಿದು ಬೆಂಗಳೂರಿನ ಆದಾಯವನ್ನು ಹೆಚ್ಚಿಸುತ್ತಿಲ್ಲವೇ? ತುಳುನಾಡು ಸಮೃದ್ಧಿಯಾದದ್ದು ಬೆಂಗಳೂರಿನಿಂದಲ್ಲ. ಮುಂಬೈ, ದುಬೈ, ಅಮೆರಿಕಾದಿಂದ ಇಲ್ಲಿನ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಏನೂ ಇಲ್ಲ.

ಸಾಫ್ಟ್‌ವೇರ್ ಪಾರ್ಕ್ ಯಾಕೆ ಕೊಡುತ್ತಿಲ್ಲ?

ಸಾಫ್ಟ್‌ವೇರ್ ಪಾರ್ಕ್ ಯಾಕೆ ಕೊಡುತ್ತಿಲ್ಲ?

3. ತುಳುನಾಡಿಗೆ ಹಾರು ಬೂದಿ ಸ್ಥಾವರವೇ ಯಾಕೆ? ಸಾಫ್ಟ್‌ವೇರ್ ಪಾರ್ಕ್ ಯಾಕೆ ಕೊಡುತ್ತಿಲ್ಲ? ಇಲ್ಲಿನ ಭೂಮಿಯನ್ನು ಹಾರುಬೂದಿಯಿಂದ ನಿಷ್ಪ್ರಯೋಜಕ ಮಾಡಿ ಬೆಂಗಳೂರು ಬೆಳಗಿಸುವುದು ಬೇಕೇ? ನಾವು ಅಭಿವೃದ್ಧಿಗಾಗಿ ಮನೆ ಮಠ, ಭೂಮಿ ಬಿಟ್ಟುಕೊಟ್ಟಿದ್ದೇವೆ ಸ್ವಲ್ಪ ಇಲ್ಲಿ ಬಂದು ನೋಡಿ. ಮಂಗಳೂರಿನ ಎಂಆರ್‌ಪಿಎಲ್‌ನ ಒಂದೂವರೆ ಸಾವಿರ ಉದ್ಯೋಗಿಗಳಲ್ಲಿ ಕೇವಲ ನಾಲ್ಕು ನೂರು ಜನ ಉದ್ಯೋಗಿಗಳು ದ.ಕ.ದವರು ಅದರಲ್ಲಿ ಹೆಚ್ಚಿನವರ ನಿರ್ವಸಿತರೆಂಬ ಹಕ್ಕಿನ ಉದ್ಯೋಗ ಪಡೆದವರು. ಉಳಿದವರೆಲ್ಲರೂ ಹೊರ ಭಾಗದವರು.

ಕರಾವಳಿಯ ವ್ಯಾಪಾರಿಗಳು ಬೆಂಗಳೂರನ್ನು ನೆಚ್ಚಿಕೊಂಡಿಲ್ಲ

ಕರಾವಳಿಯ ವ್ಯಾಪಾರಿಗಳು ಬೆಂಗಳೂರನ್ನು ನೆಚ್ಚಿಕೊಂಡಿಲ್ಲ

4. ಕರಾವಳಿಯ ವ್ಯಾಪಾರಿಗಳು ಬೆಂಗಳೂರನ್ನು ನೆಚ್ಚಿಕೊಂಡಿಲ್ಲ. ಮಲ್ಲಿಗೆ, ಮೀನು ವ್ಯವಹಾರ ಇಂದು ಗಡಿ ದಾಟಿದೆ.

5. ಎತ್ತಿನ ಹೊಳೆಯ ವಿಚಾರಕ್ಕಾಗಿಯೇ ತುಳುರಾಜ್ಯದ ಬೇಡಿಕೆ ಬಂದಿದೆ, ಇದನ್ನು ರೂಪಿಸಿದವರು ಮತದ ಆಸೆಗಾಗಿ. ಇತ್ತ ತುಳುನಾಡು ಅತ್ತ ಅದರ ನೀರು ಸಿಗುತ್ತದೆ ಎಂದು ಹೇಳಲಾಗುವ ಜನರನ್ನು ಯಾಮಾರಿಸುತ್ತಿದ್ದಾರೆ. ಈ ರಾಜಕಾರಣಿಗಳು ಈಗ ತುಳುನಾಡಿನ ರಾಜಕಾರಣಿಗಳಲ್ಲ. ಇವರು ಗೋಮುಖವ್ಯಾಘ್ರ ರಾಜಕಾರಣಿಗಳು.

ತುಳುನಾಡಿನ ಸರ್ವನಾಶವನ್ನು ಉಳಿಸುವುದಕ್ಕಾಗಿ

ತುಳುನಾಡಿನ ಸರ್ವನಾಶವನ್ನು ಉಳಿಸುವುದಕ್ಕಾಗಿ

6. ತುಳುರಾಜ್ಯದ ಬೇಡಿಕೆ ತುಳುವಿಗೆ ಸ್ಥಾನಮಾನ ಸಿಗುವ ಕಾರಣಕ್ಕಲ್ಲ ತುಳುನಾಡಿನ ಸರ್ವನಾಶವನ್ನು ಉಳಿಸುವುದಕ್ಕಾಗಿ.

7. ತುಳುನಾಡಿನಲ್ಲಿ ರಾಜಕೀಯ ಪ್ರೇರಿತ ಕೋಮು ಗಲಭೆ ನಡೆಯುತ್ತಿದ್ದರೆ ಇತರ ಕಡೆ ಜಾತಿಯಾಧಾರಿತ ಗಲಭೆ ನಡೆಯುತ್ತಿದೆ. ಗಲಭೆಯ ಕಾರಣಕ್ಕಾಗಿ ತುಳುನಾಡು ರಾಜ್ಯ ನಿರಾಕರಿಸುವುದು ಸರಿಯೇ?

ಕೊನೆಯ ಮೂರು ಪ್ರಶ್ನೆಗಳು

ಕೊನೆಯ ಮೂರು ಪ್ರಶ್ನೆಗಳು

8. ಪ್ರವಾಸೋದ್ಯಮಕ್ಕೆ ತೊಂದರೆ ಎಂಬ ಮಾತು ಬಾಲಿಶ. ಗೋವಾ, ಕೇರಳದಲ್ಲಿ ಪ್ರವಾಸೋದ್ಯಮ ಬೆಳೆದಿದೆ. ತುಳುನಾಡಿನಲ್ಲೂ ಇದು ಸಾಧ್ಯವಿದೆ. ಇಲ್ಲಿನ ಪ್ರಸಿದ್ಧ ದೇವಸ್ಥಾನಗಳ ದುಡ್ಡು ಈ ಜಿಲ್ಲೆಗೆ ಎಲ್ಲಿ ಸಿಗುತ್ತಿದೆ ಹೇಳಿ?

9. ತುಳು ಲಿಪಿ ಬಲ್ಲವರು ಹೆಚ್ಚಿಲ್ಲ ನಿಜ. ಆದರೆ ತುಳು ಲಿಪಿಯ ಮೇಲೆ ಸಮಾಧಿ ಕಟ್ಟಬೇಕು ಅನ್ನುತ್ತೀರಾ?

10. ಯಾರ್ರೀ ಅವರು ಯೋಗ್ಯ ರಾಜಕಾರಣಿ?

English summary
Tulunadu can separate from Karnataka become new state, ten justification from Ravindra Shetty in reply to article of Deekshith Shettigar Konaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X