ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ

ಬೆಂಗಳೂರು, ಜುಲೈ 23: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ನೇತೃತ್ವದ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಮತಯಾಚನೆ ನಿರ್ಣಯವನ್ನು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಅಂಗೀಕರಿಸಿ ಮತಕ್ಕೆ ಹಾಕಿದರು. ಸದಸ್ಯರ ತಲೆಎಣಿಕೆ ಮೂಲಕ ನಡೆದ ಬಲಾಬಲ ಪರೀಕ್ಷೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲುಂಟಾಗಿದೆ.

15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ನಿಲುವಳಿ ಬಗ್ಗೆ ಸುದೀರ್ಘ ಚರ್ಚೆ, ಸಾಂವಿಧಾನಿಕ ಹುದ್ದೆಗಳ ಅಧಿಕಾರ, ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಇಡೀ ಭಾರತದ ಜನತೆಗೆ ಸಾಕಾಗುವಷ್ಟು ಪಾಠವನ್ನು ಶಾಸಕರು ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಪೂರ್ವನಿಗದಿಯಂತೆ ವಿಶ್ವಾಸಮತ ವೋಟಿಂಗ್ 6 ಗಂಟೆಯೊಳಗೆ ನಡೆಯಬೇಕಾಗಿತ್ತು. ಆದರೆ, ಡಿವಿಷನ್ ಬೆಲ್ ಹೊಡೆಯುವ ಹೊತ್ತಿಗೆ 7.20 ಆಗಿತ್ತು. 2 ನಿಮಿಷಗಳ ಕಾಲ ಬೆಲ್ ಬಾರಿಸಿದ ಬಳಿಕ ಮತ ಪ್ರಕ್ರಿಯೆ ನಡೆಸಲಾಯಿತು. ಏಳು ಸಾಲುಗಳಲ್ಲಿದ್ದ ಆಡಳಿತ ಹಾಗೂ ವಿಪಕ್ಷ ಸದಸ್ಯರು ಎದ್ದು ನಿಂತ ಬಳಿಕ ಅಧಿಕಾರಿಗಳು ತಲೆ ಎಣಿಕೆ ಮಾಡಿ ಹಾಜರಿ ಎಂಟ್ರಿ ಬರೆದುಕೊಂಡರು. ಇದಕ್ಕೂ ಮುನ್ನ ನಿಲುವಳಿಯ ಮುಕ್ತಾಯದ ಭಾಷಣ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿದಾಯ ಭಾಷಣ ಮಾಡಿ, "ರಾಜೀನಾಮೆ ನೀಡಲು ಸಿದ್ಧ" ಎಂದು ಘೋಷಿಸಿದರು.

Trust Vote : CM HD Kumaraswamy couldnt prove majority: to step down

ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ ಅವರ ಮತ ಕೂಡಾ ಪರಿಗಣಿಸಲಾಗಿದ್ದು, ಸ್ಪೀಕರ್ ಅವರ ಮತ, ಟೈ ಆದರೆ ಮಾತ್ರ ಪರಿಗಣಿಸಲಾಗುತ್ತದೆ.

ಅಂತಿಮ ಫಲಿತಾಂಶ:
ಒಟ್ಟು ಸದಸ್ಯರು : 204
ಮ್ಯಾಜಿಕ್ ನಂಬರ್ : 103
ಬಿಜೆಪಿ: 105
ಕಾಂಗ್ರೆಸ್ -ಜೆಡಿಎಸ್ ಮೈತ್ರಿ : 99

ಗೈರಾದವರು: 20

Trust Vote : CM HD Kumaraswamy couldnt prove majority: to step down

ಫಲಿತಾಂಶ : ಪ್ರಸ್ತಾಪದ ಪರ -ವಿರೋಧ ಸದಸ್ಯರ ತಲೆ ಎಣಿಕೆಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಮಾಡಿದ್ದಾರೆ. ಫಲಿತಾಂಶ ಪಟ್ಟಿಯನ್ನು ಸ್ಪೀಕರ್ ರಮೇಶ್ ಕುಮಾರ್ ಕೈಗೆ ನೀಡಿದರು. ವಿಶ್ವಾಸಮತದ ವಿರುದ್ಧ ಹೆಚ್ಚು ಮತಗಳು ಬಂದಿದ್ದು, ಸರ್ಕಾರದ ಪರ 99, ಸರ್ಕಾರದ ನಿಲುವಿನ ವಿರೋಧ 105 ಮತಗಳು ಬಂದಿದ್ದರಿಂದ 14 ತಿಂಗಳ ಸರ್ಕಾರ ಬಹುಮತ ಕಳೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+