ಸಚಿವ ನಾರಾಯಣಗೌಡ ಅವರಿಗೆ ತ್ರಿಪುರಾ ಡಿಸಿಎಂ ಜಿಶ್ನು ದೇವ ವರ್ಮ ಪತ್ರ!

ಬೆಂಗಳೂರು, ಮೇ 25: ಕೊರೊನಾ ವೈರಸ್‌ನಿಂದ ಸೃಷ್ಟಿಯಾಗಿರುವ ಲಾಕ್‌ಡೌನ್‌ನಿಂದಾಗಿ ಇಡೀ ದೇಶಾದ್ಯಂತ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಇದೇ ಸಂದರ್ಭದಲ್ಲಿ ತ್ರಿಪುರಾ ಉಪಮುಖ್ಯಮಂತ್ರಿ ಜಿಶ್ನು ದೇವ ಹಾಗೂ ಸಚಿವ ಮೇವರ್ ಕುಮಾರ್ ಜಮಾತಿಯಾ ಅವರು ತೋಟಗಾರಿಕಾ ಸಚಿವ ನಾರಾಯಣಗೌಡ ಅವರಿಗೆ ಪತ್ರ ಬರೆದಿದ್ದಾರೆ.

Recommended Video

      ಚಿಕ್ಕಮಗಳೂರಿನಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ | Oneindia Kannada

      ಇಡೀ ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ನಾನಾಕಡೆಯಲ್ಲಿ ವಲಸಿಗ ಕಾರ್ಮಿಕರು, ಬೇರೆ ರಾಜ್ಯಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಂದರ್ಭದಲ್ಲಿ ಅವರಿಗೆ ನೆರವು ನೀಡಿದ್ದಲ್ಲದೆ, ಲಾಕ್‌ಡೌನ್‌ ಬಳಿಕ ತ್ರಿಪುರಾ ರಾಜ್ಯಕ್ಕೆ ಮರಳಲು ವಲಸಿಗರಿಗೆ ಸಚಿವ ನಾರಾಯಣಗೌಡ ಸಹಾಯಹಸ್ತ ಚಾಚಿದ್ದರು.

      ವಲಸಿಗರ ನೆರವಿಗೆ ಧಾವಿಸಿದ್ದಕ್ಕೆ ತ್ರಿಪುರಾದ ಉಪಮುಖ್ಯಮಂತ್ರಿ ಜಿಶ್ನು ದೇವ ವರ್ಮ ಮತ್ತು ಅರಣ್ಯ ಇಲಾಖೆ ಸಚಿವ ಮೇವರ್ ಕುಮಾರ್ ಜಮಾತಿಯಾ ಅವರು ಕರ್ನಾಟಕದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಅವರಿಗೆ ಪತ್ರ ಮುಖೇನ ಧನ್ಯವಾದ ತಿಳಿಸಿದ್ದಾರೆ.

      Tripura DCM Jishnu wrote to Narayana Gowda who helped Tripura people during lockdown

      ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್ಡೌನ್ ಜಾರಿಗೆ ತರಲಾಗಿತ್ತು. ಅದರಿಂದಾಗಿ ವಲಸೆ ಕಾರ್ಮಿಕರು ತೀವ್ರವಾದ ಸಂಕಷ್ಟಕ್ಕೆ ಈಡಾಗಿದ್ದರು. ವಸತಿ ಸೇರಿದಂತೆ ಆಹಾರಕ್ಕು ಅವರಿಗೆ ತತ್ವಾರ ಉಂಟಾಗಿತ್ತು. ಆಗ ತ್ರಿಪುರಾ ರಾಜ್ಯದ ಕಾರ್ಮಿಕರೂ ಸೇರಿದಂತೆ ಅಲ್ಲಿನ ಜನರು ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪರದಾಡಿದ್ದರು.

      Tripura DCM Jishnu wrote to Narayana Gowda who helped Tripura people during lockdown

      ತ್ರಿಪುರಾ ರಾಜ್ಯದ ಜನರಿಗೆ ಊಟ, ವಸತಿ ವ್ಯವಸ್ಥೆಯನ್ನು ಸಚಿವ ನಾರಾಯಣಗೌಡ ಅವರ ಸಲಹೆಯಂತೆ ಮಾಡಲಾಗಿತ್ತು. ಲಾಕ್ಡೌನ್ ಸಡಿಲವಾದ ನಂತರ ತ್ರಿಪುರಾಕ್ಕೆ ತೆರಳಲು ಸೌಲಭ್ಯ ಒದಗಿಸಲಾಗಿತ್ತು. ಅದೇ ಹಿನ್ನೆಲೆಯಲ್ಲಿ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+