Shakti Scheme: ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಆಧಾರ್ ಕಾರ್ಡ್ ಇಲ್ಲದೆ ಉಚಿತ ಪ್ರಯಾಣ ಮಾಡಬಹುದು.!
Shakti Scheme: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ಪೈಕಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವರು ಇಷ್ಟು ದಿನ ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡಬೇಕಿತ್ತು. ಆದರೆ ಇದೀಗ ಈ ಪ್ರಕ್ರಿಯೆಯನ್ನು ಸುಲಭ ಮಾಡಲಾಗಿದೆ.
ಮಹಿಳೆಯರು ಶಕ್ತಿ ಯೋಜನೆಯಡಿ ಸಾರಿಗೆ (KSRTC, NWKSRTC, KKRTC, BMTC) ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬೇಕೆಂದರೆ ಅವರು ಕಂಡಕ್ಟರ್‌ಗೆ ಆಧಾರ್ ಕಾರ್ಡ್ ಅನ್ನು ತೋರಿಸಲೇಬೇಕಿತ್ತು. ಆದರೆ ಇದೀಗ ಆಧಾರ್ ಕಾರ್ಡ್ ಇಲ್ಲದೆ ಉಚಿತವಾಗಿ ಪ್ರಯಾಣ ಮಾಡುವಂತೆ ಅವಕಾಶ ಕಲ್ಪಿಸಲಾಗಿದೆ. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇದು ಡಿಜಿಟಲ್ ಯುಗ ಆಗಿರುವುದರಿಂದ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇಂತಹ ಒಂದು ವಿಧಾನವನ್ನು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಅನುಕೂಲ ಆಗುವ ದೃಷ್ಟಿಯಿಂದ ಜಾರಿ ಮಾಡಲಾಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರು ಆಧಾರ್ ಕಾರ್ಡ್ ಇಲ್ಲದೆ, ಪ್ರಯಾಣ ಮಾಡಲು ಸುಲಭ ಮಾರ್ಗವನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಿದ್ದು, ಇದರಿಂದ ಮಹಿಳೆಯರಿಗೆ ಆಧಾರ್ ಕಾರ್ಡ್ ಇಟ್ಟುಕೊಂಡು ಪ್ರಯಾಣ ಮಾಡುವ ಹೊರೆ ತಪ್ಪಿದಂತಾಗಲಿದೆ.
ಸಾರಿಗೆ ಬಸ್ (KSRTC, NWKSRTC, KKRTC, BMTC) ಬಸ್‌ಗಳಲ್ಲಿ ಪ್ರಯಾಣ ಮಾಡುವ ರಾಜ್ಯದ ಮಹಿಳೆಯರು ಇನ್ಮೇಲೆ ಸ್ಮಾರ್ಟ್ ಕಾರ್ಡ್ ತೆಗೆದುಕೊಂಡು ಹೋದರೆ ಸಾಕು ಆಧಾರ್ ಕಾರ್ಡ್ ಅಗತ್ಯವಿರುವುದಿಲ್ಲ. ಶೀಘ್ರದಲ್ಲೇ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ಉಚಿತವಾಗಿ ಸಿಗಲಿದೆ. ಈಗಾಗಲೇ ಹಣಕಾಸು ಇಲಾಖೆಗೆ ಕಡತಕ್ಕೆ ಹೋಗಿದ್ದು, ಅನುಮತಿ ಒಂದೇ ಬಾಕಿಯಿದೆ. ಅಲ್ಲದೆ, ಟೆಂಡರ್ ಸಹ ಕರೆಯಲು ಸಾರಿಗೆ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಲಯ ಗ್ರಾಮ ಒನ್, ಬೆಂಗಳೂರು ಒನ್ ಅಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಶೀಘ್ರದಲ್ಲೇ ಈ ಸ್ಮಾರ್ಟ್ ಕಾರ್ಡ್ ದೊರೆಯಲಿದೆ. ಸರ್ಕಾರದಿಂದ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ವಿತರಣೆ ಇರಲ್ಲ. ಸ್ಮಾರ್ಟ್ ಕಾರ್ಡ್ ಪಡೆಯುವ ವೇಳೆ ನಕಲಿ ಆಧಾರ್ ಕಾರ್ಡ್ ನೀಡಿದರೆ, ನಿಮ್ಮ ಅರ್ಜಿಯನ್ನೇ ರದ್ದುಗೊಳಿಸುವ ಸಾಧ್ಯತೆಯಿರುತ್ತದೆ. ಯಾಕೆಂದರೆ ಈಗಾಗಲೇ ನಕಲಿ ಆಧಾರ್ ಕಾರ್ಡ್ ತೋರಿಸಿ ತಗ್ಲಾಕೊಂಡಿರುವ ಘಟನೆಗಳು ನಡೆದಿವೆ ಆದ್ದರಿಂದ.
ಪ್ರಿಂಟ್ ಆದ ಮಾಹಿತಿಯುಳ್ಳ ದಾಖಲೆಯೇ ಸ್ಮಾರ್ಟ್ ಕಾರ್ಡ್ ಆಗಿರಲಿದೆ. ಮಾಸಿಕ ಪಾಸಿನಂತೆಯೇ ಪ್ರತ್ಯೇಕ ಪಾಸ್ ವಿತರಣೆ ಇರುವುದಿಲ್ಲ. ಅರ್ಜಿ ಸಲ್ಲಿಸಿದ ತಕ್ಷಣವೇ ನೀಡಲಾಗುವ ಪ್ರಿಂಟ್ಔಟ್ನ್ನು ಸ್ಮಾರ್ಟ್ ಕಾರ್ಡ್ ಎಂದು ಪರಿಗಣೆ ಮಾಡಲಾಗುತ್ತದೆ. ಸೇವಾಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ನ್ನು ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗತ್ತದೆ.
ಸೇವಾ ಕೇಂದ್ರದಲ್ಲಿಯೇ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಮಾಡಲಾಗುತ್ತದೆ. ರಾಜ್ಯದ ನಿವಾಸಿಗೆ ಮಾತ್ರ ಈ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿ ಕೇವಲ ಕರ್ನಾಟಕದ ಒಳಗಿನ ವಿಳಾಸ ಇರಬೇಕಾಗುತ್ತದೆ. ಒಂದು ವೇಳೆ ವಿಳಾಸ ತಿರುಚಿದರೆ, ಅರ್ಜಿ ರದ್ದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ದೋಷವಿಲ್ಲದ ಆಧಾರ್ ಕಾರ್ಡ್ ಕೊಡಬೇಕಾಗುತ್ತದೆ.
ಈಗಾಗಲೇ ರಾಜ್ಯಾದ್ಯಂತ ಶಕ್ತಿ ಯೋಜನೆಯಡಿಯಲ್ಲಿ ತುಂಬಾ ಜನ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಲೇ ಇದ್ದಾರೆ. ಇದೀಗ ಮಹಿಳೆಯರಿಗೆ ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸರ್ಕಾರ ಮುಂದಾಗಿದೆ.












Click it and Unblock the Notifications