ರಾಜ್ಯದಲ್ಲಿ ಟ್ರಾಫಿಕ್ ದಂಡ ಮೊತ್ತ ಕಡಿತ: ಯಾವುದಕ್ಕೆ ಎಷ್ಟು?
ಬೆಂಗಳೂರು, ಸೆಪ್ಟೆಂಬರ್ 14: ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಿದ ದುಬಾರಿ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆಯಂತೆ ದಂಡಮೊತ್ತವನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 1ರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪರಿಷ್ಕರಿಸಿ ನಿಯಮ ಜಾರಿಗೊಳಿಸಿತ್ತು.
8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?
ದಂಡ ಪ್ರಮಾಣವನ್ನು ತಕ್ಷಣವೇ ಇಳಿಸಲು ನಿರ್ಧರಿಸಿದ್ದು ಸೆ.4ಕ್ಕೂ ಹಿಂದೆ ಇದ್ದ ನಿಯಮವನ್ನೇ ಮುಂದುವರೆಸಿದೆ.ಎರಡು ದಿನಗಳ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದಂಡದ ಪ್ರಮಾಣ ಹೊರೆಯನ್ನು ಕಡಿಮೆ ಮಾಡಲೇಬೇಕು, ಇದಕ್ಕಾಗಿ ಗುಜರಾತ್ ಮಾದರಿಯ ಪರಿಷ್ಕರಣೆಗೆ ಆದೇಶ ಪ್ರತಿಗಳನ್ನು ತರಿಸಿ ಅಧ್ಯಯನ ನಡೆಸಿ ಎಂದು ಸಲಹೆ ನೀಡಿದ್ದರು.

ಈ ರಿಯಾಯಿತಿ ತಾತ್ಕಾಲಿಕವಷ್ಟೇ
ಈ ರಿಯಾಯ್ತಿ ತಾತ್ಕಾಲಿಕವಾಗಿದ್ದು ದಂಡ ಪ್ರಮಾಣವನ್ನು ಪರಿಷ್ಕರಿಸುವವರಿಗೆ ಜಾರಿಯಲ್ಲಿ ಇರಲಿದೆ. ಸಾರ್ವಜನಿಕರಿಗೆ ಹೆಚ್ಚು ಹೊರೆಯಾಗದಂತೆ ಆದರೆ ನಿಯಮ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸುವ ರೀತಿಯಲ್ಲಿ ಪರಿಷ್ಕರಿಸಲಾಗುವುದು ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ

ಬಿಜೆಪಿ ಸರ್ಕಾರಗಳದ್ದೂ ವಿರೋಧವಿದೆ
-ಉತ್ತರಖಂಡದ ಬಿಜೆಪಿ ಸರ್ಕಾರ ಬುಧವಾರವೇ ದಂಡದ ಮೊತ್ತವನ್ನು ಕಡಿತಗೊಳಿಸಿದೆ
-ಗುಜರಾತ್‌ನಲ್ಲಿ ಈಗಾಗಲೇ ದಂಡದ ಮೊತ್ತವನ್ನು ಕಡಿಮೆ ಮಾಡಲಾಗಿದೆ
-ಎನ್‌ಡಿಎ ಆಡಳಿತವಿರುವ ಬಿಹಾರವು ದಂಡದ ಮೊತ್ತವನ್ನು ಇಳಿಕೆ ಮಾಡಲು ನಿರ್ಧರಿಸಿದೆ
-ಭಾರಿ ಮೊತ್ತದ ದಂಡವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ದಂಡದ ಮೊತ್ತವನ್ನು ಕಡಿಮೆ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರವೂ ಕೇಳಿದೆ.
-ಕರ್ನಾಟಕದಲ್ಲಿ ಕೂಡ ಬಿಎಸ್ ಯಡಿಯೂರಪ್ಪ ದಂಡ ಮೊತ್ತವನ್ನು ಕಡಿಮೆ ಮಾಡಲಾಗಿದೆ
ಹುಷಾರ್! ಚಪ್ಪಲಿ ಹಾಕಿಕೊಂಡು ಬೈಕ್ ಓಡಿಸಿದರೂ ಬೀಳುತ್ತೆ ದಂಡ

ಭಾರಿ ದಂಡ ಮೊತ್ತವನ್ನು ಏಕಾಏಕಿ ಇಳಿಸಲು ಸಾಧ್ಯವೇ?
ಕೇಂದ್ರ ಸರ್ಕಾರ ವಿಧಿಸಿರುವ ದಂಡದ ಮೊತ್ತವನ್ನು ರಾಜ್ಯ ಸರ್ಕಾರಗಳು ಏಕಾಏಕಿ ಕಡಿತಗೊಳಿಸಲು ಸಾಧ್ಯವೇ ಎನ್ನುವ ಗೊಂದಲ ವ್ಯಕ್ತವಾಗಿದೆ. ರಾಜ್ಯಗಳಲ್ಲಿ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ದಂಡವನ್ನು ಇಳಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ವಿಪಕ್ಷ ಸರ್ಕಾರಗಳ ಕಿಡಿ
ಈ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ, ಕೇರಳದ ಎಡರಂಗ ಸರ್ಕಾರ, ತೆಲಂಗಾಣದ ಟಿಆರ್‌ಎಸ್ ಸರ್ಕಾರ ಮತ್ತು ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರಗಳು ಘೋಷಿಸಿವೆ.
ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

ದಂಡದ ಮೊತ್ತವೆಷ್ಟು?
-ಅತಿವೇಗದ ಚಾಲನೆ-1,000(ಮಾಲೀಕರಿಗೆ 500ರೂ ಪ್ರತ್ಯೇಕ)
-ಚಾಲನೆ ವೇಳೆ ಮೊಬೈಲ್ ಬಳಕೆ-1 ಸಾವಿರ ರೂ, ಎರಡನೇ ಬಾರಿ 2 ಸಾವಿರ ರೂ
-ವಿಮೆ ಇಲ್ಲದೆ ವಾಹನ ಚಾಲನೆ-1 ಸಾವಿರ ರೂ
-ಅಪಾಯಕಾರಿ ನಿಲುಗಡೆ, ನೋಪಾರ್ಕಿಂಗ್- 1 ಸಾವಿರ ರೂ
-ಹೆಲ್ಮೆಟ್ ರಹಿತ ಚಾಲನೆ-100 ರೂ
-ಕುಡಿದು ಚಾಲನೆ-2 ಸಾವಿರ ರೂ ಸೆ.4ಕ್ಕಿಂತ ಮೊದಲು ಇದ್ದ ದಂಡದ ಪ್ರಮಾಣ ಇದಾಗಿದೆ ತಾತ್ಕಾಲಿಕವಾಗಿ ಇದೇ ದಂಡ ಮುಂದುವರೆಯಲಿದೆ.