ಟೊಯೊಟಾ 'ರುಮಿಯಾನ್' ಬುಕ್ಕಿಂಗ್ ಆರಂಭ: ಬೆಲೆ ಎಷ್ಟು, ಫೀಚರ್ ಏನೇನು?
ಬೆಂಗಳೂರು, ಆಗಸ್ಟ್ 28: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಹೊಚ್ಚಹೊಸ ಟೊಯೊಟಾ ರುಮಿಯಾನ್ ಬುಕ್ಕಿಂಗ್ ಅನ್ನು ಪ್ರಾರಂಭಿಕ ಬೆಲೆ ರೂ.10,29,000/- ಗಳಿಂದ ಆರಂಭಿಸಿದೆ. 11,000 ರೂ.ಗಳ ಟೋಕನ್ ಮೊತ್ತದೊಂದಿಗೆ ಬುಕಿಂಗ್ ಪ್ರಾರಂಭವಾಗಲಿದೆ.
ಆರು ಶ್ರೇಣಿಗಳಲ್ಲಿ ಲಭ್ಯವಿರುವ ಈ ಹೊಸ ಕಾಂಪ್ಯಾಕ್ಟ್ ಬಿ-ಎಂಪಿವಿ ಸಿರೀಸಿನ ಕಾರು, ಸರಿ ಸಾಟಿಯಿಲ್ಲದ ಸ್ಥಳ ಮತ್ತು ಆರಾಮ, ಅತ್ಯುತ್ತಮ ಇಂಧನ ದಕ್ಷತೆ, ಸ್ಟೈಲಿಶ್ ಮತ್ತು ಪ್ರೀಮಿಯಂ ಬಾಹ್ಯ ವಿನ್ಯಾಸದೊಂದಿಗೆ ಹೊಸ ಮಾನದಂಡಗಳನ್ನು ಹೊಂದಿದೆ ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ರುಮಿಯಾನ್ ಕಾರು, ಆಕರ್ಷಕ ಎಕ್ಸ್ ಶೋರೂಂ ಬೆಲೆಗಳಲ್ಲಿ ರೂ.10,29,000 ರಿಂದ ರೂ.13,68,000 ವರೆಗೆ ಲಭ್ಯವಿದ್ದು, ಸೆಪ್ಟೆಂಬರ್ 8 ರಿಂದ ಇದರ ಡೆಲಿವರಿ ವಿತರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ಶ್ರೇಣಿಗೆ ತಕ್ಕಂತೆ ಎಕ್ಸ್ ಶೋರೂಂ ಬೆಲೆ ವಿವರಗಳು ಈ ಕೆಳಗಿನಂತಿವೆ:
| Sl. No. | Grade Name | Price in INR |
| 1 | S MT (Petrol) | 10,29,000 |
| 2 | S AT (Petrol) | 11,89,000 |
| 3 | G MT (Petrol) | 11,45,000 |
| 4 | V MT (Petrol) | 12,18,000 |
| 5 | V AT (Petrol) | 13,68,000 |
| 6 | S MT (CNG) | 11,24,000 |
Harley Davidson x440: ಹಾರ್ಲೆ ಡೇವಿಡ್ಸನ್ ಬೈಕ್ ಬುಕ್ಕಿಂಗ್ ಆರಂಭ, ಇಷ್ಟು ಕಮ್ಮಿ ಬೆಲೆಗಾ!
ಇದರ ಜೊತೆಗೆ ವಾಲ್ಯೂ ಆಡೆಡ್ ಸರ್ವೀಸ್ ನಲ್ಲಿ, ಟೊಯೊಟಾ ಹೊಸದಾಗಿ ಪರಿಚಯಿಸಿದ 5 ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್, ವಾರಂಟಿ - 3 ವರ್ಷಗಳು / 1,00,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ ಸೇರಿವೆ. ಇದನ್ನು ನಾಮಿನಲ್ ಬೆಲೆಯಲ್ಲಿ 5 ವರ್ಷಗಳು / 2,20,000 ಕಿ.ಮೀ.ಗೆ ವಿಸ್ತರಿಸಬಹುದಾಗಿದೆ.
ಗ್ರಾಹಕರು ಆಲ್ ನ್ಯೂ ಟೊಯೊಟಾ ರುಮಿಯಾನ್ ಅನ್ನು ತಮ್ಮ ಹತ್ತಿರದ ಡೀಲರ್ ಔಟ್ ಲೆಟ್ ನಲ್ಲಿ 11,000 ರೂ.ಗಳ ಟೋಕನ್ ಮೊತ್ತದಲ್ಲಿ ಬುಕ್ ಮಾಡಿಕೊಳ್ಳಬಹುದು. ಅಥವಾ http://www.toyotabharat.com ಆನ್ ಲೈನ್ ನಲ್ಲಿ ಬುಕ್ ಮಾಡಬಹುದು. ಎಲ್ಲಾ ಟೊಯೊಟಾ ಉತ್ಪನ್ನಗಳನ್ನು ಕೇವಲ ಒಂದು ಕ್ಲಿಕ್ ನಲ್ಲಿ ವರ್ಚುವಲ್ ಮೂಲಕ ನೋಡಬಹುದಾಗಿದೆ.
ಬುಕ್ಕಿಂಗ್ ಆರಂಭದ ಘೋಷಣೆ ಮಾಡಿದ ಟಿಕೆಎಂನ ಮಾರಾಟ ಮತ್ತು ಕಾರ್ಯತಂತ್ರದ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, "ಟೊಯೊಟಾ ರುಮಿಯಾನ್ ಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ತುಂಬಾ ವಿನಮ್ರರಾಗಿದ್ದೇವೆ. 10,29,000 ರೂ.ಗಳಿಂದ ಪ್ರಾರಂಭವಾಗುವ ಈ ಬಹುನಿರೀಕ್ಷಿತ ಆಲ್ ನ್ಯೂ ಟೊಯೊಟಾ ರುಮಿಯಾನ್ ನ ಬುಕಿಂಗ್ ಪ್ರಾರಂಭ ಮತ್ತು ಬೆಲೆಗಳನ್ನು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಆಲ್ ನ್ಯೂ ಟೊಯೊಟಾ ರುಮಿಯಾನ್ ಬುಕ್ ಮಾಡುವ ಗ್ರಾಹಕರಿಗೆ ವಾಹನಗಳ ವಿತರಣೆಯು ಸೆಪ್ಟೆಂಬರ್ 8, 2023 ರಿಂದ ಪ್ರಾರಂಭವಾಗಲಿದೆ" ಎಂದು ಹೇಳಿದ್ದಾರೆ.
ಫೀಚರ್: ಟೊಯೊಟಾ ಎಂಪಿವಿ ಸಿಗ್ನೇಚರ್ ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್ ನೊಂದಿಗೆ ಫ್ರಂಟ್ ಬಂಪರ್, ಬ್ಯಾಕ್ ಡೋರ್ ಕ್ರೋಮ್ ವಿನ್ಯಾಸದೊಂದಿಗೆ ಎಲ್ಇಡಿ ಟೈಲ್ ಲ್ಯಾಂಪ್ ಗಳು ಮತ್ತು ಶೈಲಿ ಮತ್ತು ಅತ್ಯಾಧುನಿಕತೆಯನ್ನು ಹೊರಸೂಸುವ ಎರಡು ಟೋನ್ ಅಲಾಯ್ ವೀಲ್ಸ್ ನಂತಹ ದೃಢವಾದ ಗುಣಲಕ್ಷಣಗಳೊಂದಿಗೆ ರಫ್ ಲುಕ್ ಗಾಗಿ ಈ ಹೊಸ ಬಿ-ಎಂಪಿವಿ ಸ್ಟೈಲಿಶ್ ಮತ್ತು ಪ್ರೀಮಿಯಂ ಬಾಹ್ಯ ವಿನ್ಯಾಸವನ್ನು ಹೊಂದಿದೆ.
ಐಷಾರಾಮಿ ಒಳಾಂಗಣವು ವುಡ್ ಫಿನಿಶ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಟ್ರಿಮ್ ಗಳೊಂದಿಗೆ ಪ್ರೀಮಿಯಂ ಡ್ಯುಯಲ್-ಟೋನ್, ಪ್ರೀಮಿಯಂ ಡ್ಯುಯಲ್-ಟೋನ್ ಇಂಟೀರಿಯರ್ ಮತ್ತು ಅನುಕೂಲಕರ ಸೌಲಭ್ಯಗಳನ್ನು ನೀಡುತ್ತದೆ.












Click it and Unblock the Notifications