ರಾಜ್ಯದಲ್ಲಿಂದು 93 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆ

ಬೆಂಗಳೂರು, ಮೇ 25: ಕರ್ನಾಟಕದಲ್ಲಿ ಸಂಜೆ ವೇಳೆಗೆ ಹೊಸದಾಗಿ 24 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿಂದು ಒಟ್ಟು 93 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

Recommended Video

      ಸಿಗರೇಟ್ ಸೇದೋದಕ್ಕಿಂತ ಟಿವಿ ನೋಡುವುದು ಹೆಚ್ಚು ಡೇಂಜರಸ್ | Oneindia Kannada

      ಇಂದು ವರದಿಯಾದ ಹೊಸ ಪ್ರಕರಣಗಳ ಪೈಕಿ 3 ಮಂದಿಗೆ ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದವರು ಹಾಗೂ 73 ಜನ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

      ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2182ಕ್ಕೆ ಜಿಗಿದಿದೆ. ಇದುವರೆಗೂ ಕೊರೊನಾ ಸೋಂಕು ಕಾಣಿಸಿಕೊಂಡ 44 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಅನ್ಯಕಾರಣದಿಂದ ಸಾವನ್ನಪ್ಪಿದ್ದಾರೆ. 42 ಮಂದಿ ಕೊರೊನಾ ಕಾರಣದಿಂದ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

       Total 93 coronavirus Cases Reported in Karnataka on May 25th

      ಇಂದಿನ ವರದಿಯಲ್ಲಿ ಉಡುಪಿಯಲ್ಲಿ 16 ಕೇಸ್, ಯಾದಗಿರಿಯಲ್ಲಿ 15 ಮಂದಿ, ಕಲಬುರಗಿಯಲ್ಲಿ 14 ಜನರಿಗೆ ಸೋಂಕು ತಗುಲಿದೆ.

      ಜಿಲ್ಲೆವಾರು ಅಂಕಿ ಅಂಶಗಳನ್ನು ನೋಡುವುದಾದರೆ ಬೆಂಗಳೂರಿನಲ್ಲಿ ಒಟ್ಟು 274 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಮಂಡ್ಯದಲ್ಲಿ 254 ಜನರಿಗೆ ಕೊವಿಡ್ ತಗುಲಿದೆ. ಕಲಬುರಗಿಯಲ್ಲಿ 157 ಮಂದಿಗೆ ಮಹಾಮಾರಿ ವಕ್ಕರಿಸಿದೆ.

      ಬೆಳಗಾವಿಯಲ್ಲಿ 128 ಜನರಿಗೆ, ಚಿಕ್ಕಬಳ್ಳಾಪುರದಲ್ಲಿ 126 ಜನರಿಗೆ, ಯಾದಗಿರಿಯಲ್ಲಿ 126 ಮಂದಿ, ದಾವಣೆಗೆರೆಯಲ್ಲಿ 125 ಮಂದಿ ಹಾಗೂ ಉಡುಪಿಯಲ್ಲಿ 108 ಜನರಿಗೆ ಸೋಂಕು ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+