ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ; ನೋಡಬೇಕೋ? ಬೇಡವೋ?

ಬೆಂಗಳೂರು, ಡಿಸೆಂಬರ್ 25: ಡಿಸೆಂಬರ್ 26 ರಂದು ನಮ್ಮ ಸೌರವ್ಯೂಹ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಬಹಳ ಅಪರೂಪಕ್ಕೆ ಎಂಬಂತೆ ಕಾಣುವ ಕಂಕಣ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಈ ಅಪರೂಪದ ಗ್ರಹಣವನ್ನು ನೋಡಬೇಕೋ? ಬೇಡವೋ? ಎಂಬ ಗೊಂದಲಗಳು ಹಲವರಲ್ಲಿ ಮನೆ ಮಾಡಿವೆ.

ಇದೊಂದು ಕಂಕಣ ಸೂರ್ಯಗ್ರಹಣವಾಗಿದ್ದು, ಕರ್ನಾಟಕದ ಮಟ್ಟಿಗೆ ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ. ಈ ಸೂರ್ಯಗ್ರಹಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳಲಿದೆ.

ನೋಡಬೇಕೋ ಬೇಡವೋ?

ನೋಡಬೇಕೋ ಬೇಡವೋ?

ಖಂಡಿತವಾಗಿಯೂ ಈ ಕಂಕಣ ಸೂರ್ಯಗ್ರಹಣವನ್ನು ನೋಡದೇ ಇರುವುದು ಒಳ್ಳೆಯದು. ಏಕೆಂದರೆ, ಇದು ಸೂರ್ಯಗ್ರಹಣವಾಗಿರುವುದರಿಂದ ಬರಿಗಣ್ಣಿನಿಂದ ನೊಡಿದರೆ ಕಣ್ಣಿನ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಎಲ್ಲರಿಗೂ ಟೆಲಿಸ್ಕೂಪ್‌ನಿಂದ ನೋಡಲು ಆಗುದಿಲ್ಲವಾದ್ದರಿಂದ ನೋಡದೇ ಇರುವುದು ಒಳಿತು ಎಂಬುದು ತಜ್ಞರ ಅಭಿಪ್ರಾಯ.

ಹೇಗೆ ನೋಡುವುದು?

ಹೇಗೆ ನೋಡುವುದು?

ವೈಜ್ಞಾನಿಕವಾಗಿ ಗ್ರಹಣಗಳನ್ನು ನೋಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಗ್ರಹಣವನ್ನು ನೋಡಬಹುದು ಎಂದರೆ ಸಾಕಷ್ಟು ಜನ ಬರಿಗಣ್ಣಿನಿಂದಲೇ ನೋಡಲು ಪ್ರಯತ್ನಿಸುವುದುಂಟು. ಸೂರ್ಯಗ್ರಹಣ ಸಮಯದಲ್ಲಿ ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳಾತಿತ ಕಿರಣಗಳು ಹತ್ತು ಪಟ್ಟು ಪರಿಣಾಮಕಾರಿಯಾಗಿರುವುದಿಂದ ಬರಿಗಣ್ಣಿನಲ್ಲಿ ನೋಡಲು ಆಗುವುದಿಲ್ಲ. ಅಷ್ಟಕ್ಕೂ ಈ ಗ್ರಹಣವನ್ನು ನೋಡಲೇಬೇಕು ಎನ್ನುವವರು ಟೆಲಿಸ್ಕೋಪ್‌ನಲ್ಲಿ ನೋಡಬಹುದು. ಬೆಂಗಳೂರಿನ ನೆಹರು ತಾರಾಲಯದಲ್ಲಿ ನಾಳಿನ ಸೂರ್ಯಗ್ರಹಣ ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಗ್ರಹಣ ಸಮಯ ಯಾವುದು?

ಗ್ರಹಣ ಸಮಯ ಯಾವುದು?

ಬೆಳಿಗ್ಗೆ 8.6 ಕ್ಕೆ ಪ್ರಾರಂಭವಾಗುವ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 11.11 ಕ್ಕೆ ಮುಕ್ತಾಯವಾಗಲಿದೆ. ಬೆಳಿಗ್ಗೆ 9 ರ ಸುಮಾರು ಇದರ ಪೂರ್ಣ ದರ್ಶನವಾಗಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇ 90 ರಷ್ಟು ಕಂಡರೆ, ಉಳಿದ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

2010 ರಲ್ಲಿ ಕಂಡಿತ್ತು

2010 ರಲ್ಲಿ ಕಂಡಿತ್ತು

ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ವರ್ಷಾಂತ್ಯಕ್ಕೆ ಕಾಣಿಸುತ್ತಿರುವುದು ಕಂಕಣ ಸೂರ್ಯಗ್ರಹಣ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. 2010 ರಲ್ಲಿ ಭಾರತದಲ್ಲಿ ಈ ಹಿಂದೆ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+