ನಿಮಗಿದು ಗೊತ್ತೇ? ಭಾರತದ ಬಹುತೇಕ ರಾಜ್ಯಗಳಿಗೆ ನಮ್ಮ ಕೋಲಾರದಿಂದಲೇ ಪೂರೈಕೆಯಾಗುತ್ತಿದೆ ಟೊಮೆಟೊ- ಮಾಹಿತಿ, ವಿವರ

ಬೆಂಗಳೂರು, ಜುಲೈ 13: ದೇಶದಾದ್ಯಂತ ಟೊಮೆಟೊ ಬೆಲೆ ಮುಗಿಲು ಮುಟ್ಟಿದೆ. ಬಡವರು ಹಾಗೂ ಮಾಧ್ಯಮ ವರ್ಗದವರು ಟೊಮೆಟೊ ಬಳಸುವುದನ್ನೇ ನಿಲ್ಲಿಸುವ ಸ್ಥಿತಿ ಬಂದೊದಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ ತಿಂಗಳು ಟೊಮೆಟೊ ಬೆಲೆ ಕೆಜಿಗೆ ₹300 ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆ ವರದಿ ಮಾಡಿರುವ ಈ ಸುದ್ದಿಯನ್ನು ಓದಿ.

ಇಂತಹ ಸಂದರ್ಭದಲ್ಲಿ ಕರ್ನಾಟಕದ ಕೋಲಾರವು ಭಾರತದ ಬಹುತೇಕ ರಾಜ್ಯಗಳಿಗೆ ಟೊಮೆಟೊವನ್ನು ಪೂರೈಸುತ್ತಿದೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಯ ಮೂರು ಋತುಗಳಲ್ಲಿ ವಾರ್ಷಿಕ 10 ಲಕ್ಷ ಟನ್‌ಗಳಷ್ಟು ಟೊಮೆಟೊ ಇಳುವರಿಯನ್ನು ಕೋಲಾರದಲ್ಲಿ ಬೆಳೆಯಲಾಗುತ್ತದೆ. ಸುಮಾರು 20,000 ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಟೊಮೆಟೊವನ್ನು ನಾಟಿ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯು ದೇಶದಲ್ಲಿ ಟೊಮೆಟೊ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ.

Tomatoes are being supplied to most of the states of India from our Kolar- Do you about this?

ಕೋಲಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪ್ರತಿ ದಿನ ಜಿಲ್ಲೆಯಾದ್ಯಂತ ನಾಲ್ಕು ಸಾವಿರ ಟನ್ ಟೊಮೆಟೊ ಬರುತ್ತದೆ. ಕೋಲಾರದ ಟೊಮೆಟೊಗಳು ಉತ್ತರ ಭಾರತದ ಬಹುತೇಕ ರಾಜ್ಯಗಳ ಅಗತ್ಯಗಳನ್ನು ಪೂರೈಸುತ್ತವೆ. ಜೊತೆಗೆ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳದ ಕೆಲವು ಪ್ರದೇಶಗಳಿಗೆ ಕೋಲಾರದಿಂದಲೇ ಟೊಮೆಟೊಗಳು ರವಾನೆಯಾಗುತ್ತವೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ( ಇದನ್ನು ಪಿಕ್‌ ಸಿಸನ್‌ ಎನ್ನಲಾಗುತ್ತದೆ ) ಉತ್ತರ ಭಾರತದ ಅನೇಕ ವ್ಯಾಪಾರಿಗಳು ಕೋಲಾರದಲ್ಲಿ ಶಿಬಿರಗಳನ್ನು ಹೂಡುತ್ತಾರೆ. ದೇಶಾದ್ಯಂತದ ಹಲವಾರು ವ್ಯಾಪಾರಿಗಳು ಹೋಟೆಲ್‌ಗಳಲ್ಲಿ ಬಂದು ಉಳಿದುಕೊಳ್ಳುತ್ತಾರೆ. ಕೆಲವರು ಸಣ್ಣ ಮನೆಗಳನ್ನು ಸಹ ಬಾಡಿಗೆಗೆ ಪಡೆಯುತ್ತಾರೆ. ಈ ಟೊಮೆಟೊ ವ್ಯವಹಾರಕ್ಕಾಗಿಯೇ ಕಳೆದ ಕೆಲವು ವರ್ಷಗಳಿಂದ ಉತ್ತರ ಭಾರತದ ಕೆಲ ವ್ಯಾಪಾರಿಗಳು ಕೋಲಾರದಲ್ಲಿ ವಾಸವಾಗಿದ್ದಾರೆ.

ಕೋಲ್ಕತ್ತಾದ ಟೊಮೆಟೊ ವ್ಯಾಪಾರಿ ಎಸ್‌ಸಿ ಬಾಬು, ಪಿಕ್‌ ಸಿಸನ್‌ ಅವಧಿಯಲ್ಲಿ ಕೋಲಾರಕ್ಕೆ ಭೇಟಿ ನೀಡಿ ಟೊಮೆಟೊ ಖರೀಧಿಸುತ್ತಿದ್ದರು. ರೈತರು ವರ್ಷವಿಡೀ ಟೊಮೆಟೊಗಳನ್ನು ಬೆಳೆಯಲು ಪ್ರಾರಂಭಿಸಿದ ನಂತರ 12 ವರ್ಷಗಳ ಹಿಂದೆ ಕೋಲಾರದಲ್ಲಿ ವಾಸಿಸಲು ಪ್ರಾರಂಭಿಸಿದರು.

Tomatoes are being supplied to most of the states of India from our Kolar- Do you about this?

ಉತ್ತರ ಭಾರತೀಯರು ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊವನ್ನು ರುಚಿಯ ಕಾರಣಕ್ಕೆ ಇಷ್ಟಪಡುತ್ತಾರೆ ಎಂದು ಬಾಬು ಹೇಳಿದ್ದಾರೆ. ಬಾಬು ಅವರು ತಮ್ಮ ಅಧೀನದಲ್ಲಿರುವ ಕೆಲವು ಡೀಲರ್‌ಗಳಿಗೆ ಬೆಳೆಯನ್ನು ಪೂರೈಸುತ್ತಾರೆ. ಅವರು ಅವುಗಳನ್ನು ಉಪ-ಡೀಲರ್‌ಗಳಿಗೆ ಕಳುಹಿಸುತ್ತಾರೆ. ಈ ಉಪ-ಡೀಲರ್‌ಗಳು ಸಗಟು ಮಾರುಕಟ್ಟೆಗಳ ಬೇಡಿಕೆಗಳನ್ನು ಪೂರೈಸುತ್ತಾರೆ.

ಕೋಲ್ಕತ್ತಾಗೆ ಪ್ರತಿದಿನ ಎರಡರಿಂದ ಮೂರು ಟ್ರಕ್ ಲೋಡ್ ಟೊಮೆಟೊ ಕಳುಹಿಸುತ್ತೇನೆ ಎಂದು ಬಾಬು 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿಸಿದ್ದಾರೆ.

ಕೋಲ್ಕತ್ತಾದವರಾದ ವಿನೋದ್ ಭಾಯ್ ಅವರು 10 ವರ್ಷಗಳಿಂದ ಕೋಲಾರದಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಅಡಿಯಲ್ಲಿ ನಾಲ್ಕು ವ್ಯಾಪಾರಿಗಳನ್ನು ಹೊಂದಿದ್ದಾರೆ. ಅವರು ಪ್ರತಿದಿನ ಕೋಲ್ಕತ್ತಾಗೆ ಟೊಮೆಟೊಗಳನ್ನು ಕಳುಹಿಸುತ್ತಾರೆ. ವಿತರಕರು ಸಾಗಿಸಿದ ಟೊಮೆಟೊಗಳನ್ನು ಕೋಲ್ಕತ್ತಾದ ದೊಡ್ಡ ಹೋಟೆಲ್‌ಗಳು ಮತ್ತು ಇತರ ತಿನಿಸಿ ಅಂಗಡಿಗಳಿಗೆ ಸರಬರಾಜು ಮಾಡುತ್ತಾರೆ.

Tomatoes are being supplied to most of the states of India from our Kolar- Do you about this?

ಟೊಮೆಟೊ ಬೆಳೆ 7ರಿಂದ 8 ವಾರಗಳಲ್ಲಿ ಸಿದ್ಧವಾಗುತ್ತದೆ. ಕೊಯ್ಲು ಸುಮಾರು ಎರಡು ತಿಂಗಳವರೆಗೆ ಇರುತ್ತದೆ. ಉತ್ತಮ ಇಳುವರಿ ಬಂದರೆ ಹತ್ತರಿಂದ ಹನ್ನೆರಡು ವಾರದವರೆಗೂ ಕಟಾವು ಮಾಡಬಹುದು ಎನ್ನುತ್ತಾರೆ ರೈತ ಪ್ರತಿನಿಧಿಗಳು.

ಈ ಕುರಿತು ಮಾತನಾಡಿರುವ ಸಿಎಂಆರ್ ಟೊಮೆಟೊ ಮಂಡಿಯ ಸಿ.ಆರ್.ಶ್ರೀನಾಥ್, 'ಎಪಿಎಂಸಿಗೆ ನಿತ್ಯ ಸರಾಸರಿ 4 ಸಾವಿರ ಟನ್ ಟೊಮೆಟೊ ಬರುತ್ತಿದ್ದರೂ 15 ಸಾವಿರ ಟನ್‌ಗೆ ಬೇಡಿಕೆ ಇದೆ. ಕೋಲಾರದ ರೈತರು ವರ್ಷವಿಡೀ ಟೊಮೆಟೊ ಬೆಳೆಯುವುದನ್ನು ತಡವಾಗಿ ಪ್ರಾರಂಭಿಸಿದ್ದಾರೆ. ಈ ಬೆಳೆಯು ಬೆಳೆ ಮೂರು-ನಾಲ್ಕು ತಿಂಗಳಿಗೆ ಸೀಮಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕಾಶಿ ಮಾತನಾಡಿ, 'ಕೋಲಾರ ಎಪಿಎಂಸಿಗೆ ಆಗಮಿಸುತ್ತಿರುವ ಟೊಮೆಟೊ ದಾಸ್ತಾನು ಕುಸಿತವಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಏರಿಕೆಯಾಗುತ್ತಿದೆ. ಕೋಲಾರ ಜಿಲ್ಲೆಯಾದ್ಯಂತ ಹೆಚ್ಚಿನ ಬೆಳೆಗಳು ಕೊಯ್ಲಿಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+