Tomato Price: ಕುಸಿದ ಟೊಮೆಟೊ ಬೆಲೆ: ರಸ್ತೆ ಬದಿ ಸುರಿದ ರೈತರು

ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಒಂದು ತಿಂಗಳ ಹಿಂದೆ ಕೆಜಿಗೆ 200 ರೂ.ಗೆ ತಲುಪಿದ ನಂತರ ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದೆ. ಲಾಭ ನೋಡುವ ಆಸೆಯಿಂದ ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆದಿದ್ದ ರೈತ ಈಗ ಕಂಗಾಲಾಗಿದ್ದಾನೆ. ಮಾರುಕಟ್ಟೆಗೆ ತಂದ ಟೊಮೆಟೊಗೆ ಬೆಲೆ ಸಿಗದ ಕಾರಣ ರಸ್ತೆ ಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ.

ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ 8 ರಿಂದ 10 ರೂ.ಗೆ ತರಕಾರಿ ಮಾರಾಟವಾಗುತ್ತಿದೆ. ಚಳ್ಳಕೆರೆ ಮಾರುಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಟೊಮೆಟೊ ಕೆಜಿಗೆ 2 ರೂ.ಗೆ ಕುಸಿದಿದೆ.

Tomato Price : Karnataka Farmers Discard Tomatoes Along Roadsides Amid Falling Prices

ತಿಂಗಳ ಹಿಂದೆ 2,000 ರಿಂದ 2,500 ರೂ.ಗೆ ಮಾರಾಟವಾಗುತ್ತಿದ್ದ 15 ಕೆಜಿ ಟೊಮೇಟೊ ಕ್ರೇಟ್ ಈಗ 20-30 ರೂ.ಗೆ ಸಿಗುತ್ತಿಲ್ಲ, ಇದು ರೈತರನ್ನು ತೀವ್ರವಾಗಿ ಬಾಧಿಸುತ್ತಿದೆ. ಈ ಬೆಲೆಯಲ್ಲಿ ಟೊಮೆಟೊ ಮಾರಿದರೆ ಮಾರುಕಟ್ಟೆಗೆ ತರುವ ಬಾಡಿಗೆ ಸಹ ಸಿಗುವುದಿಲ್ಲ.

ತಿಂಗಳ ಹಿಂದೆ ಟೊಮೆಟೊ ಕಾಯಲು ಹಲವರು ಇರುತ್ತಿದ್ದರು ಆದರೆ ಈಗ ಟೊಮೆಟೊ ಕೇಳುವವರೆ ಇಲ್ಲ ಎನ್ನುವಂತಾಗಿದೆ. ಕೀಳುವ ಕೂಲಿ ಕೂಡ ಸಿಗದ ಕಾರಣ ಹಲವು ರೈತರು ಟೊಮೆಟೊ ಕಟಾವು ಮಾಡದೇ ಹೊಲದಲ್ಲೇ ಕೊಳೆಯಲು ಬಿಟ್ಟಿದ್ದಾರೆ.

ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಭಾರಿ ನಷ್ಟ

ಟೊಮೆಟೊ ಬೆಳೆಯಲು ಎಕರೆಗೆ ಕಡಿಮೆ ಎಂದರೂ 50-80 ಸಾವಿರ ರೂಪಾಯಿ ಖರ್ಚು ಬರುತ್ತದೆ. ಹೆಚ್ಚಿನ ಪ್ರಮಾಣದ ಕೀಟನಾಶಕ, ಗೊಬ್ಬರ, ಕೂಲಿ ಎಂದು ಸಾಕಷ್ಟು ಖರ್ಚು ಮಾಡಿ ಟೊಮೆಟೊ ಬೆಳೆದರೆ ಈಗ ಲಾಭ ಇರಲಿ ಮಾಡಿದ ಖರ್ಚು ಕೂಡ ಕೈಬಿಡಲಿದೆ. ಇಷ್ಟೆಲ್ಲಾ ಖರ್ಚು ಮಾಡಿ ಮಾರುಕಟ್ಟೆಗೆ ಟೊಮಟೊ ತಂದರೆ, 15 ಕೆಜಿ ಕ್ರೇಟ್‌ಗೆ 30 ರೂಪಾಯಿ ಎಂದಾಗ ನಿರಾಸೆಗೊಂಡ ರೈತರು ಟೊಮೆಟೋವನ್ನು ರಸ್ತೆಗೆ ಎಸೆದು ಹೋಗಿದ್ದಾರೆ.

ಟೊಮೆಟೊಗೆ ಬೆಲೆ ಇಲ್ಲದ ಕಾರಣ ಪ್ರತಿಭಟನೆ ಮಾಡುವ ಉದ್ದೇಶದಿಂದ ರಸ್ತೆಗೆ ಸುರಿದಿರುವುದಾಗಿ ರೈತರು ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. "ಚಿತ್ರದುರ್ಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದು, ರೈತರಿಗೆ ಟೊಮೆಟೊ ಮೌಲ್ಯವರ್ಧನೆ ಸಿಗುತ್ತದೆ. ಒಂದು ಕ್ರೇಟ್ ಟೊಮೇಟೊ ಕೀಳಲು 100 ರೂಪಾಯಿ ವೆಚ್ಚವಾಗುತ್ತದೆ, ಕೇವಲ 30 ರೂಪಾಯಿಗೆ ಮಾರುವುದು ಹೇಗೆ" ಎಂದು ಪ್ರಶ್ನಿಸಿದರು.

ಪೂರೈಕೆ ಹೆಚ್ಚಳ

ಚಳ್ಳಕೆರೆಯ ಚಿಕ್ಕಮ್ಮನಹಳ್ಳಿ ಮಾರುಕಟ್ಟೆಯಲ್ಲಿ ಬುಧವಾರ ಪ್ರತಿ ಕ್ರೇಟ್ 15 ಕೆಜಿ ಟೊಮೆಟೊವನ್ನು 20 ರಿಂದ 160 ರೂ.ಗೆ ಮಾರಾಟ ಮಾಡಲಾಗಿದೆ ಎಂದು ಟೊಮೆಟೊ ಮಾರುಕಟ್ಟೆಯ ವ್ಯಾಪಾರಿ ವೆಂಕಟೇಶ್ ಟಿಎನ್‌ಐಇಗೆ ತಿಳಿಸಿದರು. ಕಳೆದ 10 ದಿನಗಳಿಂದ ಇದೇ ಪರಿಸ್ಥಿತಿ ಇದ್ದು, ಟೊಮೆಟೊ ಕೀಳಲು ತಗಲುವ ವೆಚ್ಚವೂ ರೈತರಿಗೆ ಸಿಗುತ್ತಿಲ್ಲ ಹೀಗಾಗಿ ಮಾರುಕಟ್ಟೆಯ ಮುಂದೆಯೇ ಬಿಸಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿಂದ ಮೊದಲು ಪ್ರತಿದಿನ 40 ಸಾವಿರ ಕ್ರೇಟ್ ಟೊಮೆಟೊ ಮಾರಾಟ ಮಾಡಲಾಗುತ್ತಿತ್ತು, ಈಗ 5-6 ಸಾವಿರ ಕ್ರೇಟ್ ಮಾತ್ರ ಮಾರಾಟವಾಗುತ್ತಿವೆ. ಎಲ್ಲಾ ಕಡೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಪೂರೈಕೆಯಾಗುತ್ತಿರುವ ಕಾರಣ, ಬೇರೆ ಮಾರುಕಟ್ಟೆಗಳಿಗೆ ಕಳುಹಿಸುವುದು ಲಾಭದಾಯಕವಲ್ಲ ಎಂದು ಹೇಳಿದ್ದಾರೆ.

ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಟೊಮ್ಯಾಟೊ ರಾಷ್ಟ್ರೀಯ ಮಾರುಕಟ್ಟೆಗೆ ಬರಲು ಪ್ರಾರಂಭಿಸಿದ ನಂತರ ಬೆಲೆಯಲ್ಲಿ ಮತ್ತಷ್ಟು ಕುಸಿತವಾಗಲಿದೆ. ಹವಾಮಾನ ವೈಪರೀತ್ಯದಿಂದ ಅಧಿಕ ಉತ್ಪಾದನೆಯಾಗುತ್ತಿದ್ದು, ಹೆಚ್ಚಿನ ಇಳುವರಿ ಬರುತ್ತಿದ್ದು, ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+