Tomato Price: ನೇಪಾಳ ಟೊಮೆಟೊ ಉತ್ತರ ಪ್ರದೇಶಕ್ಕೆ, ಪಾತಾಳಕ್ಕೆ ರೇಟ್!

ನವದೆಹಲಿ: ಟೊಮೆಟೊ ಬೆಳೆದ ರೈತರಿಗೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಅದರಲ್ಲೂ ಈ ಬಾರಿ ಉತ್ತಮ ಬೆಲೆ ಬಂತು ಅನ್ನುವಾಗಲೇ, ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ನೇಪಾಳ ದೇಶದಿಂದ ಭಾರತಕ್ಕೆ ಟೊಮೆಟೊ ತರಿಸಲಾಗಿದ್ದು ಟೊಮೆಟೊ ಬೆಲೆ ಮತ್ತಷ್ಟು ಕುಸಿಯುವ ಭೀತಿ ಆವರಿಸಿದೆ.

ಹೌದು, ಈಗ ನೇಪಾಳದಿಂದ ಸುಮಾರು 5 ಟನ್ ಟೊಮೆಟೊ ಅಮದು ಮಾಡಿಕೊಳ್ಳಲಾಗಿದೆ. ಹೀಗೆ ನೇಪಾಳದಿಂದ ತರಿಸಿಕೊಂಡಿರುವ ಟೊಮೆಟೊ ಉತ್ತರ ಪ್ರದೇಶದಲ್ಲಿ ಮಾರಲಾಗುವುದು ಎಂದು ತಿಳಿದು ಬಂದಿದೆ. ಪ್ರತಿ ಕೆ.ಜಿ. ಟೊಮೆಟೊಗೆ 50 ರೂ. ದರದಂತೆ, ನಾಳೆಯಿಂದ ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆಯಂತೆ. ಈ ಕುರಿತು ರಾಷ್ಟ್ರೀಯ ಸಹಕಾರ ಗ್ರಾಹಕ ಮಹಾಮಂಡಳ ಅಂದರೆ ಎನ್‌ಸಿಸಿಎಫ್ ಮಾಹಿತಿ ನೀಡಿದೆ. ಅತ್ತ ಈ ಬೆಳವಣಿಗೆ ಗ್ರಾಹಕರಿಗೆ ಖುಷಿ ಕೊಟ್ಟಿದ್ದರೆ, ಇತ್ತ ರೈತರಿಗೆ ಆತಂಕ ತರಿಸಿದೆ.

Tomato import to India started from Nepal

ನೆರೆ ದೇಶದಿಂದ ಬರಲಿದೆ ಟೊಮೆಟೊ

ದೇಶದಲ್ಲಿ ಟೊಮೆಟೊ ಬೆಲೆ ಭಾರಿ ಏರಿಕೆ ಕಂಡಿತ್ತು. ಅದರಲ್ಲೂ ಉತ್ತರ ಭಾರತದಲ್ಲಿ ಈ ಬೆಲೆ ಏರಿಕೆ ಸಾಕಷ್ಟು ಸದ್ದು ಮಾಡಿತ್ತು. ಈಗ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುತ್ತಿದ್ದು ನೇಪಾಳದಿಂದ ಒಟ್ಟು 10 ಟನ್ ಟೊಮೆಟೊ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಫೈಕಿ 3-4 ಟನ್‌ ಟೊಮೆಟೊ ನಿನ್ನೆ ಉತ್ತರ ಪ್ರದೇಶದಲ್ಲಿ ವಿತರಿಸಲಾಗಿದೆ. ಇದೀಗ ಮತ್ತೆ 5 ಟನ್‌ನಷ್ಟು ಟೊಮೆಟೊ ಅಮದು ಮಾಡಿಕೊಳ್ಳಲಾಗುತ್ತಿದೆ. ನಾಳೆ ಈ ಹೊಸ ಟೊಮೆಟೊದ ಮಾರಾಟ ಪ್ರಕ್ರಿಯೆ ಶುರುವಾಗಲಿದೆ ಎಂದು ಎನ್‌ಸಿಸಿಎಫ್‌ ತಿಳಿಸಿದೆ.

ಕೋಲಾರ ಮಾರುಕಟ್ಟೆಯಲ್ಲಿ ಬೆಲೆ ಕುಸಿತ

ಅತ್ತ ಬೇರೆ ದೇಶದಿಂದ ಟೊಮೆಟೊ ಬರುತ್ತಿದ್ದರೆ ಇನ್ನೊಂದ್ಕಡೆ ಕರ್ನಾಟಕದ ಟೊಮೆಟೊ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಳೆದ ಕೆಲ ತಿಂಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದೆ. 14 ಕೆಜಿ ತೂಕದ ಬಾಕ್ಸ್‌ಗೆ ಈ ಬಾರಿ ಸರಾಸರಿ 700 ರೂಪಾಯಿ ದರ ಸಿಕ್ಕಿದ್ದು ರೈತರು ಆತಂಕದಲ್ಲಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ 14 ಕೆಜಿ ತೂಕದ ಬಾಕ್ಸ್‌ಗೆ 2500 ರೂಪಾಯಿ ಬೆಲೆ ಬಂದಿತ್ತು. ಕಳೆದ ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ ಮೊದಲಿಗೆ ₹1700ಕ್ಕೆ ಕುಸಿದಿತ್ತು. ಬಳಿಕ ಬೆಲೆ 1550ಕ್ಕೆ ಕುಸಿತ ಕಂಡಿತ್ತು. 1200 ರೂಪಾಯಿಗೆ ಬಿದ್ದ ಬೆಲೆ 800 ರೂಪಾಯಿಗೆ ಬಂದು ನಿಂತಿತ್ತು. ಆದ್ರೆ ಕೆಲವು ದಿನಗಳಿಂದ ನಿರಂತರವಾಗಿ 1000 ರೂಪಾಯಿ ಆಸುಪಾಸಿನಲ್ಲೇ ರೇಟ್ ಇತ್ತು. ಈಗ ಮತ್ತೆ ಕುಸಿತ ಕಂಡಿದೆ.

Tomato import to India started from Nepal

ಕರ್ನಾಟಕದ ಟೊಮೆಟೊಗೆ ಡಿಮ್ಯಾಂಡ್

ದೇಶದ ವಿವಿಧೆಡೆ ಕರ್ನಾಟಕ & ದಕ್ಷಿಣ ಭಾರತದ ಟೊಮೆಟೊಗೆ ಭಾರಿ ಬೇಡಿಕೆ ಇದ್ದು, ಬೆಲೆಯ ಕುಸಿತ ಸಂಕಷ್ಟ ತಂದಿದೆ. ಲಕ್ಷಾಂತರ ರೂಪಾಯಿ ಸುರಿದು ಟೊಮೆಟೊ ಬೆಳೆದಿರುವ ರೈತರಿಗೆ ಮತ್ತೆ ಟೊಮೆಟೊ ಕೈಹಿಡಿವ ನಿರೀಕ್ಷೆ ಇತ್ತು. ಆದರೆ ಬೆಲೆ ಕುಸಿತ ಭಯ ಮೂಡಿಸಿದೆ. ಕೆಲವು ತಿಂಗಳು ಟೊಮೆಟೊಗೆ ಚಿನ್ನದ ದರ ಇತ್ತು. ಅದರಲ್ಲೂ ಉತ್ತರ ಭಾರತದಲ್ಲಿ ಟೊಮೆಟೊ ಆಮದಿಗೆ ಭಾರಿ ಬೇಡಿಕೆ ಬಂದಿತ್ತು. ಹೀಗಾಗಿ ಸಾಕಷ್ಟು ಪ್ರಮಾಣದ ಟೊಮೆಟೊ ರಫ್ತಾಗಿ, ರೈತರು ಒಳ್ಳೇ ಲಾಭ ಗಳಿಸಿದ್ರು. ಈಗ ನೋಡಿದ್ರೆ ಟೊಮೆಟೊ ರೇಟ್ ಪಾತಾಳದತ್ತ ಮುಖ ಮಾಡುತ್ತಿದೆ.

Tomato import to India started from Nepal

ಹೀಗೆ ಬೆಲೆ ಕುಸಿತದ ನಡುವೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೊರ ದೇಶಗಳಿಂದಲು ಟೊಮೆಟೊ ಆಮದು ಶುರುವಾದರೆ ಸ್ಥಳೀಯ ರೈತರಿಗೆ ಇದರಿಂದ ಸಂಕಷ್ಟ ಎಂಬ ಭಯ ಆವರಿಸಿದೆ. ಹೀಗಾಗಿ ಟೊಮೆಟೊ ಬೆಲೆ ನಿರ್ದಿಷ್ಟವಾಗಿ ಇರಲಿ ಅನ್ನೋದು ರೈತರ ಆಗ್ರಹ. ಆದರೆ ರೈತರ ಆಗ್ರಹಕ್ಕೆ ಬೆಲೆ ಸಿಗುತ್ತಾ? ಇಲ್ಲ ಟೊಮೆಟೊ ಬೆಲೆ ಮತ್ತೆ ಕುಸಿದು ಪಾತಾಳ ಸೇರುತ್ತಾ? ಬೆಲೆ ಇಲ್ಲದೆ ರೈತರು ಮತ್ತೊಮ್ಮೆ ಪರದಾಡುವ ಪರಿಸ್ಥಿತಿ ಬರುತ್ತಾ? ಗೊತ್ತಿಲ್ಲ, ಎಲ್ಲದಕ್ಕೂ ಉತ್ತರ ಪಡೆಯಲು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+