Toll Fee Hike: ಕರ್ನಾಟಕದ ಎಲ್ಲಾ ಟೋಲ್‌ಗಳ ಶುಲ್ಕ ಏ. 1ರಿಂದ ಏರಿಕೆ

ಬೆಂಗಳೂರು, ಮಾರ್ಚ್‌ 26: ಕರ್ನಾಟಕದಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಬಳಕೆ ಮಾಡುವ ವಾಹನ ಸವಾರರು ಏಪ್ರಿಲ್ 1ರಿಂದ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಿದೆ. 323 ರಾಜ್ಯ ಹೆದ್ದಾರಿಗಳು ಸೇರಿದಂತೆ ದೇಶದಲ್ಲಿ 1,181 ಟೋಲ್ ಪ್ಲಾಜಾಗಳಿವೆ. ಕರ್ನಾಟಕದಲ್ಲಿ ಒಟ್ಟು 66 ಟೋಲ್ ಬೂತ್‌ಗಳಿದ್ದು, ಕಳೆದ 5 ವರ್ಷದಲ್ಲಿ 13,702 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹವಾಗಿದೆ.

ಶೀಘ್ರದಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊಸ ಟೋಲ್ ನೀತಿಯನ್ನು ಪ್ರಕಟಿಸಲಿದೆ. ಆದ್ದರಿಂದ ದೇಶಾದ್ಯಂತ ಎಲ್ಲಾ ಟೋಲ್‌ಗಳ ಶುಲ್ಕಗಳು ಏಪ್ರಿಲ್‌ 1ರಿಂದ ಏರಿಕೆಯಾಗಲಿವೆ. ಹೊಸ ನೀತಿಯಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿಗಳು ದೊರೆಯಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Toll Fee Set To Increase By 3 To 5 Per Cent From April 1

ಎಷ್ಟು ಟೋಲ್ ಶುಲ್ಕ ಏರಿಕೆ?; ಕರ್ನಾಟಕದಲ್ಲಿ ಒಟ್ಟು 66 ಟೋಲ್ ಬೂತ್‌ಗಳಿವೆ ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಎಲ್ಲಾ ಟೋಲ್‌ಗಳ ಶುಲ್ಕಗಳು ಶೇ 3 ರಿಂದ 5ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಯಾವ ಟೋಲ್‌ನಲ್ಲಿ ಎಷ್ಟು ಶುಲ್ಕ ಏರಿಕೆ ಎಂದು ಅಧಿಸೂಚನೆ ಪ್ರಕಟವಾದ ಬಳಿಕ ತಿಳಿಯಲಿದೆ.

ರಾಜ್ಯದಲ್ಲಿ ಈಗಾಗಲೇ ಟೋಲ್ ಶುಲ್ಕಗಳು ಹೆಚ್ಚಿವೆ ಇನ್ನೂ ಶೇ 3 ರಿಂದ 5ರಷ್ಟು ಏರಿಕೆ ಮಾಡಿದರೆ ವಾಹನ ಸವಾರರಿಗೆ ಟೋಲ್ ಶುಲ್ಕ ಹೊರೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.

ಹೊಸ ಟೋಲ್ ನೀತಿಯ ಅನ್ವಯ ದೇಶಾದ್ಯಂತ ಟೋಲ್ ಶುಲ್ಕ ಹೆಚ್ಚಳ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ 1,181 ಟೋಲ್ ಪ್ಲಾಜಾಗಳಿದ್ದು, 2023-24ರಲ್ಲಿ 42,196 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ವಾಹನಗಳಿಗೆ ಮಾಸಿಕ, ವರ್ಷದ ಪಾಸು ನೀಡುವುದು ಸೇರಿದಂತೆ ಹೊಸ ನೀತಿಯನ್ನು ಒಳಗೊಂಡ ಟೋಲ್‌ ನೀತಿಯನ್ನು ಪ್ರಕಟಿಸಲಾಗುತ್ತದೆ. ಇದರ ಅನ್ವಯ ದೇಶಾದ್ಯಂತ ಟೋಲ್‌ ಶುಲ್ಕಗಳು ಏರಿಕೆಯಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿಯೂ ಟೋಲ್ ಶುಲ್ಕ ಹೆಚ್ಚಳವಾಗಲಿದೆ.

ಮೈಸೂರು-ಬೆಂಗಳೂರು, ಬೆಂಗಳೂರು-ಹೈದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಪುಣೆ, ಬೆಂಗಳೂರು ಏರ್‌ಪೋರ್ಟ್‌ ರಸ್ತೆಯ ಟೋಲ್‌ ಸೇರಿದಂತೆ ಕರ್ನಾಟಕದ ಎಲ್ಲಾ ಟೋಲ್‌ಗಳಲ್ಲಿ ಏಪ್ರಿಲ್ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

Take a Poll

ರಾಷ್ಟ್ರೀಯ ಹೆದ್ದಾರಿಗಳ ಎಲ್ಲಾ ಟೋಲ್ ಪ್ಲಾಜಾಗಳು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹಣೆ) ನಿಯಮಗಳು, 2008 ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಸ್ಥಾಪನೆಯಾಗಿವೆ. ಈಗ ಈ ನಿಯಮದಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ರಾಷ್ಟ್ರೀಯ ಶುಲ್ಕ ನಿಯಮಗಳ ಪ್ರಕಾರ ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳ ಪ್ರಕಾರ ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಬಳಕೆದಾರ ಶುಲ್ಕದಲ್ಲಿ ರಿಯಾಯಿತಿ ಮಾಸಿಕ ಪಾಸ್‌ಗಳ ರೂಪದಲ್ಲಿ ಲಭ್ಯವಿದೆ. ಈಗ ಕೇಂದ್ರ ಸರ್ಕಾರ ವಾರ್ಷಿಕ ಪಾಸುಗಳನ್ನು ಪರಿಚಯಿಸಲು ಮುಂದಾಗಿದೆ.

ಹೆಚ್ಚುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಖಾಸಗಿ ವಾಹನಗಳಿಗೆ ವಾರ್ಷಿಕ ಮತ್ತು ಜೀವಮಾನದ ಟೋಲ್ ಪಾಸ್‌ಗಳನ್ನು ನೀಡಲು ನಿರ್ಧರಿಸಿದೆ. ಈ ಪಾಸುಗಳು ಈಗಿರುವ ಮಾದರಿಯಲ್ಲಿ ಫಾಸ್ಟ್‌ಟ್ಯಾಗ್‌ನೊಂದಿಗೆ ಸಂಯೋಜನೆಗೊಂಡಿರುತ್ತದೆ. ಪಾಸು ಪಡೆದ ವಾಹನದ ಮಾಲೀಕರು ಯಾವುದೇ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡುವುದು ಬೇಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+