19 ರಾಜ್ಯ ಹೆದ್ದಾರಿಗಳಲ್ಲಿ ನೂತನ ಟೋಲ್: ರಾಜ್ಯ ಸರ್ಕಾರ ಅಂಕಿತ

ನೂತನವಾಗಿ ವಿಸ್ತರಿಸಲ್ಪಟ್ಟ ಹೆದ್ದಾರಿಗಳ ರಸ್ತೆಗಳಿಗೆ ಟೋಲ್ ಸಂಗ್ರಹಿಸಲು ಮಾರ್ಚ್ 18ರಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬೆಂಗಳೂರು, ಮಾರ್ಚ್ 19: ವಿಸ್ತರಿಸಲ್ಪಟ್ಟಿರುವ ಹತ್ತೊಂಭತ್ತು ರಾಜ್ಯ ಹೆದ್ದಾರಿಗಳ ಸುಮಾರು 1,530 ಕಿ.ಮೀ. ವ್ಯಾಪ್ತಿಯ ರಸ್ತೆಗಳ ಬಳಕೆಗೆ ನೂತನವಾಗಿ ಶುಲ್ಕ ಸಂಗ್ರಹಿಸುವ ನಿರ್ಧಾರಕ್ಕೆ ರಾಜ್ಯ ಸ ಚಿವ ಸಂಪುಟ ಮಾರ್ಚ್ 18ರಂದು ಒಪ್ಪಿಗೆ ನೀಡಿದೆ.

ಹೆದ್ದಾರಿಗಳ ಈ ವಿಸ್ತರಣೆಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪೊರೇಷನ್ ನಿರ್ಮಿಸಿದೆ. ಈ ವಿಸ್ತರಿಸಲ್ಪಟ್ಟ ರಸ್ತೆಗಳಲ್ಲಿ ಶೀಘ್ರವೇ ಟೋಲ್ ಪ್ಲಾಜ್ ಶುಲ್ಕ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲು ಸಚಿವ ಸಂಪುಟ ಅಸ್ತು ಎಂದಿದೆ.

Toll collection for 19 State Highway stretches gets Cabinet nod

ವಿಸ್ತರಣೆಗೊಂಡಿರುವ ಹಾಗೂ ಟೋಲ್ ನಿಗದಿಗೊಳಿಸಲಾಗುವ ರಸ್ತೆಗಳ ಪಟ್ಟಿ ಹೀಗಿದೆ...

- ಮುದಗಲ್ ನಿಂದ ಗಂಗಾವತಿ (74 ಕಿ.ಮೀ)

- ಪಡುಬಿದ್ರಿಯಿಂದ ಕಾರ್ಕಳ (28 ಕಿಮೀ)

- ಹಾವೇರಿಯಿಂದ ಹಾನಗಲ್ (33 ಕಿಮೀ)

- ಧಾರವಾಡದಿಂದ ಸವದತ್ತಿ (36 ಕಿಮೀ)

- ಹೊಸಕೋಟೆಯಿಂದ ಚಿಂತಾಮಣಿ (80 ಕಿಮೀ)

- ತಿಂತಿಣಿಯಿಂದ ಕಲ್ಮಲ (74 ಕಿಮೀ)

- ದಾಬಸ್ ಪೇಟೆಯಿಂದ ಕಂಬೂರಿ (ಆಂಧ್ರಪ್ರದೇಶ) (91 ಕಿಮೀ)

- ನವಲಗುಂದದಿಂದ ಮುಂಡರಗಿ (80 ಕಿಮೀ)

- ಗುಬ್ಬಿಯಿಂದ ಯಡಿಯೂರು (49 ಕಿಮೀ)

- ಯಡಿಯೂರಿನಿಂದ ಮಂಡ್ಯ (60 ಕಿಮೀ)

-ದಾವಣಗೆರೆಯಿಂದ ಬೀರೂರು (149 ಕಿಮೀ)

- ಸವದತ್ತಿಯಿಂದ ಪಟ್ಟದಕಲ್ಲು (130 ಕಿಮೀ)

- ಹಾನಗಲ್ ನಿಂದ ತಡಸ (144 ಕಿಮೀ)

- ಶಿಕಾರಿಪುರದಿಂದ ಹಾನಗಲ್ (128 ಕಿಮೀ)

- ಮಳವಳ್ಳಿಯಿಂದ ಕೊರಟಗೆರೆ (150 ಕಿಮೀ)

- ಮುಧೋಳದಿಂದ ನಿಪ್ಪಾಣಿ (108 ಕಿಮೀ)

- ಸಿಂಧನೂರಿನಿಂದ ಕುಷ್ಟಗಿ (75 ಕಿಮೀ)

- ಹುಬ್ಬಳ್ಳಿಯಿಂದ ಲಕ್ಷ್ಮೇಶ್ಮರ (43 ಕಿಮೀ)

- ಬಳ್ಳಾರಿಯಿಂದ ಮೋಕಾ (26 ಕಿಮೀ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+