ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನವೆಂಬರ್ 10ರಂದು ಟಿಪ್ಪು ಜಯಂತಿ ಏಕೆ?'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 12 : 'ಟಿಪ್ಪು ಜಯಂತಿಯನ್ನು ನವೆಂಬರ್ 20ರ ಬದಲು 10ರಂದು ಏಕೆ ಆಚರಣೆ ಮಾಡಲಾಯಿತು? ಎಂದು ಕರ್ನಾಟಕ ಸರ್ಕಾರ ವಿವರಣೆ ನೀಡಬೇಕು' ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ಒನ್ ಇಂಡಿಯಾ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, 'ನವೆಂಬರ್ 10ರ ದಿನಾಂಕವನ್ನು ಏಕೆ ಆಯ್ಕೆ ಮಾಡಲಾಯಿತು? ಎಂದು ಸರ್ಕಾರ ಉತ್ತರ ನೀಡಬೇಕು. ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸಲು ದಿನಾಂಕ ಆಯ್ಕೆ ಮಾಡಿರುವುದರಿಂದ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ' ಎಂದರು. [ಪ್ರತಾಪ್ ಸಿಂಹಗೆ ಕೊಲೆ ಬೆದರಿಕೆ]

tippu sultan

ದೂರು ದಾಖಲಿಸಲಾಗಿದೆ : ತಮಗೆ ಬಂದಿರುವ ಜೀವ ಬೆದರಿಕೆ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ ಅವರು, 'ಈ ಕುರಿತು ಲಿಖಿತವಾದ ದೂರು ನೀಡಿದ್ದೇನೆ. ಈ ಬಗ್ಗೆ ಸೂಕ್ತವಾದ ತನಿಖೆಯಾಗುತ್ತದೆ' ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. [ಟಿಪ್ಪು ದಿನಾಚರಣೆ ವಿರೋಧಿಸಿ ಕೊಡಗು ಬಂದ್]

'ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಯೋಧ ಎಂದು ಭಾರತ ಸರ್ಕಾರ ಘೋಷಣೆ ಮಾಡಿದೆ. ಈ ಬಗ್ಗೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಣೆ ಮಾಡಲು ನಾನು ಪ್ರಯತ್ನ ನಡೆಸುತ್ತಿದ್ದೇನೆ. ಟಿಪ್ಪುವಿನ ಸ್ವತಂತ್ರ ಪರಿಕಲ್ಪನೆ ಬೇರೆಯಾಗಿತ್ತು. ಈ ಕುರಿತು ದಾಖಲೆ ಸಂಗ್ರಹಣೆ ಮಾಡುತ್ತಿದ್ದೇನೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಆಶ್ಚರ್ಯವಾಗುತ್ತದೆ : ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಯೋಧ ಎಂದು ಹೇಳಿದಾಗ ನನಗೆ ಆಶ್ಚರ್ಯವಾಗುತ್ತದೆ ಎಂದು ಹೇಳಿರುವ ಪ್ರತಾಪ್ ಸಿಂಹ ಅವರು, ನನ್ನ ಪುಸ್ತಕದಲ್ಲಿ ಟಿಪ್ಪುವಿನ ನಿಜವಾದ ಮುಖವನ್ನು ಅನಾವರಣಗೊಳಿಸಿದ್ದೇನೆ. ಟಿಪ್ಪುವಿನ ಸ್ವಾತಂತ್ರ್ಯದ ಪರಿಕಲ್ಪನೆಯೇ ಬೇರೆಯಾಗಿತ್ತು ಎಂದು ತಿಳಿಸಿದ್ದಾರೆ.

English summary
Karnataka government to explain why Tippu Sultan’s birthday was celebrated on November 10th when the actual date was November 20th, Member of Parliament from Mysore, Pratap Simha says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X