ಮದ್ಯ ಪ್ರಿಯರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ?

Recommended Video

      ಮದ್ಯ ಪ್ರಿಯರಿಗೆ ಇನ್ಮುಂದೆ ತಡ ರಾತ್ರಿವರೆಗೂ ಪಾರ್ಟಿ ಅವಕಾಶ | BAR | TIME | ONEINDIA KANNADA

      ಬೆಂಗಳೂರು, ಜನವರಿ 09 : ಕೋಟಿ-ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹೊಂದಿರುವ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. 2019ನೇ ಸಾಲಿನಲ್ಲಿ ಇಲಾಖೆ 16,187.95 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ.

      ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುವುದು ಅಬಕಾರಿ ಇಲಾಖೆ. ವರ್ಷದಿಂದ ವರ್ಷಕ್ಕೆ ಇಲಾಖೆಯ ತೆರಿಗೆ ಸಂಗ್ರಹದ ಗುರಿ ಹೆಚ್ಚುತ್ತಲೇ ಇದೆ. 2020ನೇ ಸಾಲಿನಲ್ಲಿ 20,950 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.

      ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ಹೊಸ ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಮದ್ಯ ಮಾರಾಟ ಮಾಡುವ ಸಮಯವನ್ನು ವಿಸ್ತರಣೆ ಮಾಡುವಂತೆ ಸಲಹೆ ಕೊಡಲಾಗಿದೆ. ಮದ್ಯ ಮಾರಾಟದ ಲಾಬಿಯೂ ಇದರ ಹಿಂದೆ ಅಡಗಿದೆಯೇ?.

      2018ಕ್ಕೆ ಹೋಲಿಕೆ ಮಾಡಿದರೆ ಅಬಕಾರಿ ಇಲಾಖೆ ಲಾಭವನ್ನೇ ಗಳಿಸಿದೆ. ಬೆಳವಣಿಗೆ ದರ ಶೇ. 7.76 ರಷ್ಟಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ನೀಡಿದ ಗುರಿಯನ್ನು ಸಾಧಿಸಲಾಗಿದೆ. 2020ಕ್ಕೆ ಇನ್ನೂ ಹೆಚ್ಚಿನ ಲಾಭಗಳಿಸುವ ಗುರಿ ಇದೆ.

      ಮದ್ಯ ಮಾರಾಟದ ಅವಧಿ ವಿಸ್ತರಣೆ

      ಮದ್ಯ ಮಾರಾಟದ ಅವಧಿ ವಿಸ್ತರಣೆ

      ಮದ್ಯ ಮಾರಾಟದ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಣೆ ಮಾಡುವಂತೆ ಸಲಹೆ ಕೊಡಲಾಗಿದೆ. ಅಬಕಾರಿ ಇಲಾಖೆ ಈ ಸಲಹೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು. ಬೆಂಗಳೂರು ನಗರದಲ್ಲಿ ಮಾತ್ರ ವಿಸ್ತರಣೆ ಮಾಡುವಂತೆಯೂ ತಿಳಿಸಲಾಗಿದ್ದು, ಇದರ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

      12.30.ರ ತನಕ ಮದ್ಯ ಮಾರಾಟ

      12.30.ರ ತನಕ ಮದ್ಯ ಮಾರಾಟ

      ಬೆಂಗಳೂರು ನಗರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಾತ್ರಿ 12.30ರ ತನಕ ಮದ್ಯ ಮಾರಾಟಕ್ಕೆ ಅವಕಾಶವಿದೆ. ಉಳಿದ ದಿನಗಳಲ್ಲಿಯೂ ಸಮಯವನ್ನು ವಿಸ್ತರಣೆ ಮಾಡಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂಬುದು ಸಲಹೆಯಾಗಿದೆ.

      ವಾರ್ಷಿಕ ಗುರಿ ಸಾಧನೆ ಮಾಡಿದೆ

      ವಾರ್ಷಿಕ ಗುರಿ ಸಾಧನೆ ಮಾಡಿದೆ

      ಅಬಕಾರಿ ಇಲಾಖೆಗೆ ಈ ವರ್ಷ 20,950 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿಯನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿದ್ದಾರೆ. ಇಲ್ಲಿಯ ತನಕ 16,187.95 ಕೋಟಿ ರೂ. ರಾಜಸ್ವ ಸಂಗ್ರಹ ಆಗಿದ್ದು, ಶೇ. 77.23 ರಷ್ಟು ಗುರಿ ಸಾಧನೆ ಆಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಬೆಳವಣಿಗೆ ದರ ಶೇ. 7.76 ರಷ್ಟು ಹೆಚ್ಚಾಗಿದೆ.

      ಇನ್ನೂ ಹಲವು ಕ್ರಮಗಳು

      ಇನ್ನೂ ಹಲವು ಕ್ರಮಗಳು

      ಅಬಕಾರಿ ಇಲಾಖೆ ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಹೆಚ್ಚಿನ ಲಾಭಗಳಿಸಿದೆ. ದರ ಹೆಚ್ಚಳ, ಅಕ್ರಮ ಮಾರಾಟ ತಡೆ, ಆನ್‌ಲೈನ್ ಮೂಲಕ ಲೈಸೆನ್ಸ್ ನವೀಕರಣ ಮುಂತಾದ ಕ್ರಮಗಳನ್ನು ಆದಾಯ ಹೆಚ್ಚಳಕ್ಕಾಗಿ ಇಲಾಖೆ ಕೈಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+