Times now Exit Poll Result 2024: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

ಬೆಂಗಳೂರು, ಜೂನ್‌ 01: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು(ಶನಿವಾರ) ಪ್ರಕಟವಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನವನ್ನ ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ದೇಶದಲ್ಲಿ ಒಟ್ಟು 7 ಹಂತದಲ್ಲಿ ಲೋಕಸಭೆ ಚುನಾವಣೆ 2024 ನಡೆದಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19, ಏಪ್ರಿಲ್ 26ರಂದು 2ನೇ ಹಂತ, ಮೇ 7ರಂದು 3ನೇ ಹಂತ, ಮೇ 13ರಂದು 4ನೇ ಹಂತ, ಮೇ 20ರಂದು 5ನೇ ಹಂತ, ಮೇ 25ರಂದು 6ನೇ ಹಂತ ಮತ್ತು (ಇಂದು)ಜೂನ್ 1ರಂದು 7ನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ 102, 2ನೇ ಹಂತದಲ್ಲಿ 88, 3ನೇ ಹಂತದಲ್ಲಿ 94, 4ನೇ ಹಂತದಲ್ಲಿ 96, 5ನೇ ಹಂತದಲ್ಲಿ 49, 6ನೇ ಹಂತದಲ್ಲಿ 58 ಮತ್ತು 7ನೇ ಹಂತದಲ್ಲಿ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

Times now Lok sabha Exit poll result 2024 for Karnataka

ಶನಿವಾರ ಸಂಜೆ ವಿವಿಧ ವಾಹಿನಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 07 ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಟೈಮ್ಸ್ ನೌ ಮತ್ತು ವಿಎಂಆರ್ ಹಾಗೂ ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಬಿಜೆಪಿ 20+ ಸ್ಥಾನಗಳಲ್ಲಿ ಕರ್ನಾಟಕದಲ್ಲಿ ಜಯಗಳಿಸಲಿದೆ ಎಂದು ತಿಳಿಸಿತ್ತು. ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ರೆ, ಜೆಡಿಎಸ್‌ 3 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಇತ್ತ ಆಡಳಿತರೂಢ ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

ಟೈಮ್ಸ್‌ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ 21-22 ಕ್ಷೇತ್ರಗಳನ್ನ ಗೆಲ್ಲಲಿದ್ದು, ಜೆಡಿಎಸ್‌ 1 ರಿಂದ 2 ಪಸ್ಥಾನಗಳನ್ನ ಡೆಯಲಿದೆ ಎಂದು ತಿಳಿಸಿದೆ. ಇನ್ನೂ ಆಡಳಿತರೂಢ ಕಾಂಗ್ರೆಸ್‌ 4-6 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ ಬರೋಬ್ಬರಿ 20 ಕ್ಷೇತ್ರಗಳನ್ನ ಗೆಲ್ಲುವ ವಿಶ್ವಾಸವನ್ನಿಟ್ಟುಕೊಂಡಿದ್ದು, ಟೈಮ್ಸ್‌ ನೌ ಸಮೀಕ್ಷೆ ಪ್ರಚಾರ ಕೇವಲ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ನಾಯಕರು 23 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+