• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ 3 ರೂಪದರ್ಶಿಯರು ಮಿಸೆಸ್ ಗ್ಲೋಬಲ್ ಯೂನಿವರ್ಸ್‌ಗೆ ಆಯ್ಕೆ

|

ಬೆಂಗಳೂರು, ಜೂನ್ 24: ಕರ್ನಾಟಕದ ಮೂವರು ರೂಪದರ್ಶಿಗಳು ಮಿಸೆಸ್ ಗ್ಲೋಬಲ್ ಯುನಿವರ್ಸ್, ಮಿಸೆಸ್ ವರ್ಲ್ಡ್‌ವೈಡ್, ಮಿಸೆಸ್ ಕರ್ವಿ ವರ್ಲ್ಡ್‌ವೈಡ್‌ಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಮುಂಬೈನ ಎಸ್ಕೆ ರೇಸಾರ್ಟ್‌ನಲ್ಲಿ ನಡೆದ ಮಿಸೆಸ್ ಇಂಡಿಯಾ -ಐ ಆಮ್ ಪವರ್‌ಫುಲ್-2019 ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿದ 21 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಮಿಸಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕದ 10 ಸುಂದರಿಯರು ಮಿಸಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕದ 10 ಸುಂದರಿಯರು

ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಆಗಿ ಗೀತಾಂಜಲಿ ರಘು ಮಿಸೆಸ್ ಇಂಡಿಯಾ ಏಷ್ಯಾ ಪೆಸಿಫಿಕ್ ಆಗಿ ಗಾಯತ್ರಿ ಮೊಹಂತಿ ಮತ್ತು ಮಿಸೆಸ್ ಇಂಡಿಯಾ ಯುನಿವರ್ಸ್ ಕರ್ವಿ ಆಗಿ ಮಧುರಾ ಆಚಾರ ರಾಷ್ಟ್ರ ಮಟ್ಟದ ಕೀರಿಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮಿಸೆಸ್ ಗ್ಲೋಬಲ್ ಯುನಿವರ್ಸ್, ಮಿಸೆಸ್ ವರ್ಲ್ಡ್‌ವೈಡ್ ಮತ್ತು ಮಿಸೆಸ್ ಕರ್ವಿ ಯುನಿವರ್ಸ್ ಕಿರೀಟಕ್ಕೆ ಕೊನೆ ಹಂತದ ಸ್ಪರ್ಧೆ ನವೆಂಬರ್‌ನಲ್ಲಿ ಸಿಂಗಾಪುರ ಮತ್ತು ಬಾಲಿಯಲ್ಲಿ ನಡೆಯುಲಿದೆ.

ಜಗತ್ತಿನ ವಿವಿಧ ದೇಶಗಳಿಂದ ಆಯ್ಕೆಯಾದ ರೂಪದರ್ಶಿಯರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ನವೆಂಬರ್ ನಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಗೀತಾಂಜಲಿ ರಘು, ಗಾಯತ್ರಿ ಮೊಹಂತಿ ಮತ್ತು ಮಧುರಾ ಆಚಾರ ಭಾರತವನ್ನು ಪ್ರತಿನಿಧಿಸಲಿದ್ದಾರೆ.

English summary
Three models from Karnataka selected for prestigious mrs global universe contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X