Bangladeshi immigrants: ಕರ್ನಾಟಕದಲ್ಲಿ ಇಷ್ಟು ಲಕ್ಷ ಬಾಂಗ್ಲದೇಶಿ ಅಕ್ರಮ ವಲಸಿಗರು: ಪ್ರಮೋದ್ ಮುತಾಲಿಕ್
ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಾವಿರಾರು ಜನ ಬಾಂಗ್ಲಾದೇಶಿ ವಲಸಿಗರು ಬಂದು ಸೇರುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳ ನಡುವೆಯೇ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ. ಈ ಮೂಲಕ ಕರ್ನಾಟಕವೊಂದರಲ್ಲೇ ಇಷ್ಟು ಲಕ್ಷ ಜನ ಬಾಂಗ್ಲದೇಶಿ ವಲಸಿಗರು ಇದ್ದಾರೆ. ಇವರು ಕರ್ನಾಟಕದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಾಗೂ ಬಾಂಗ್ಲದೇಶದಲ್ಲಿ ರಾಜಕೀಯ ವ್ಯವಸ್ಥೆ ಡೋಲಾಯಮಾನವಾದ ನಂತರ ಬಾಂಗ್ಲದೇಶದಿಂದ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಳವಾಗಿದೆ. ಬಾಂಗ್ಲದೇಶದಲ್ಲಿ ವಿದ್ಯರ್ಥಿಗಳ ಪ್ರತಿಭಟನೆ ನಡೆದು, ತೀವ್ರ ಸ್ವರೂಪ ಪಡೆದುಕೊಂಡ ಸಂದರ್ಭದಲ್ಲೇ ಸಾವಿರಾರು ಜನ ಬಾಂಗ್ಲದೇಶಿಗರು ಭಾರತಕ್ಕೆ ಬಂದಿರುವ ಅನುಮಾನ ವ್ಯಕ್ತವಾಗಿತ್ತು. ಭಾರತ ಮತ್ತು ಬಾಂಗ್ಲದೇಶದ ಗಡಿಭಾಗದ ರಾಜ್ಯಗಳಾದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲದೇಶಿ ವಲಸಿಗರು ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿತ್ತು.

ಪ್ರಮೋದ್ ಮುತಾಲಿಕ್ ಹೇಳಿದ್ದೇನು ?
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸೋಮವಾರ, ಅಕ್ರಮ ಬಾಂಗ್ಲಾದೇಶಿ ವಲಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಈಗಾಗಲೇ ಕರ್ನಾಟಕಕ್ಕೆ ಬಾಂಗ್ಲದೇಶದಿಂದ ಅಕ್ರಮವಾಗಿ ಬರೋಬ್ಬರಿ 12 ಲಕ್ಷ ವಲಸಿಗರು ಬಂದಿದ್ದಾರೆ. ಈ ಪ್ರಮಾಣದಲ್ಲಿ ಕರ್ನಾಟಕಕ್ಕೆ ಅಕ್ರಮವಾಗಿ ಬಾಂಗ್ಲದೇಶಿ ವಲಸಿಗರು ಬರುತ್ತಿರುವುದು ಆತಂಕಕಾರಿ. ಈ ರೀತಿ ಅಕ್ರಮವಾಗಿ ಕರ್ನಾಟಕಕ್ಕೆ ಬರುತ್ತಿರುವ ವಲಸಿಗರು ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಹಾಗೂ ವಿವಿಧ ಸರ್ಕಾರಿ ದಾಖಲೆಗಳನ್ನು ಮಾಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಮೂಲಕ ತಾವು ಭಾರತೀಯರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಭಾರತೀಯರು ಎಂದು ಗುರುತಿಸಿಕೊಳ್ಳಲು ಬೇಕಾದ ಎಲ್ಲಾ ರೀತಿಯ ದಾಖಲೆಗಳನ್ನು ಇಲ್ಲೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಗೃಹ ಸಚಿವರಿಗೆ ವರದಿ ನೀಡುತ್ತೇವೆ
ಈ ರೀತಿ ಅಕ್ರಮವಾಗಿ ಬಾಂಗ್ಲದೇಶಿ ವಲಸಿಗರು ಕರ್ನಾಟಕಕ್ಕೆ ಬರುತ್ತಿರುವುದು ಹಾಗೂ ದಾಖಲೆಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು. ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ಅಲ್ಲದೇ ಈ ರೀತಿ ಅಕ್ರಮವಾಗಿ ಬರುತ್ತಿರುವವರನ್ನು ಗುರುತಿಸಿ, ವಾಪಸ್ ಬಾಂಗ್ಲದೇಶಕ್ಕೆ ಕಳುಹಿಸಬೇಕು. ಒಂದೊಮ್ಮೆ ಆ ರೀತಿ ಮಾಡದೆ ಇದ್ದರೆ, ನಾವೇ ಮುಂದಿನ ಕೆಲಸ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಈ ಅಕ್ರಮದ ಬಗ್ಗೆ ಬಾಯಿ ಬಿಟ್ಟು ಮಾತನಾಡುವಂತೆ ಬಿಜೆಪಿ ನಾಯಕರಿಗೆ ಆಗ್ರಹಿಸಲಾಗುವುದು. ಈ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿ ಬೆಂಗಳೂರಿನ ಕರ್ನಾಟಕ ಬಿಜೆಪಿ ಕಚೇರಿಯ ಮುಂದೆಯೂ ಪ್ರತಿಭಟನೆ ಮಾಡಲಿದ್ದೇವೆ. ಬಾಂಗ್ಲದೇಶದಲ್ಲಿ ನಮ್ಮ ಹಿಂದೂಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲಿ ಬಾಂಗ್ಲದೇಶದ ಮುಸ್ಲಿಮರು ಅಕ್ರಮವಾಗಿ ಬಂದು ನೆಲೆಸುತ್ತಿದ್ದಾರೆ. ಅಲ್ಲಿ ನಮ್ಮ ಹಿಂದೂಗಳಿಗೆ ಉದ್ಯೋಗ ತೊರೆಯುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಇಲ್ಲಿ ಬಾಂಗ್ಲದೇಶಿಗರು ಉದ್ಯೋಗದ ಹೆಸರಿನಲ್ಲಿ ಅಕ್ರಮವಾಗಿ ಬಂದು ನೆಲೆಸುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಅಸ್ಸಾಂನ ದಾಖಲೆಗಳ ಮೂಲಕ ಕರ್ನಾಟಕಕ್ಕೆ ?
ಬಾಂಗ್ಲದೇಶದಿಂದ ದೇಶದ ವಿವಿಧ ರಾಜ್ಯಗಳಿಗೆ ವಲಸೆ ಬರುತ್ತಿರುವ ಬಾಂಗ್ಲದೇಶಿ ವಲಸಿಗರು ಅಸ್ಸಾಂನ ದಾಖಲೆಗಳನ್ನು ಬಳಸುತ್ತಿದ್ದಾರೆ. ಅವರ ಬಳಿ ಆಧಾರ್ ಕಾರ್ಡ್ ಹಾಗೂ ಅಸ್ಸಾಂ ದೇಶಕ್ಕೆ ಸಂಬಂಧಿಸಿದ ದಾಖಲೆಗಳು ಇವೆ ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅನುಮಾನ, ಆರೋಪ ಕೇಳಿಬಂದಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಫೈರ್ ಬ್ರ್ಯಾಂಡ್ ಎಂದು ಖ್ಯಾತಿ ಗಳಿಸಿರುವ ಬಸನಗೌಡ ಪಾಟೀಲ ಯತ್ನಾಳ ಸಹ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರವಾ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications