ವಿದ್ಯುತ್ ರೇಟ್ ಇಳಿಕೆ ಮಾಡಿದ ಕಾಂಗ್ರೆಸ್: ಬಾ.. ಬಾ.. ಬಾ ನಾ ರೆಡಿ ಅಂತಾ ಬಿಜೆಪಿಗೆ ಸವಾಲು!
ರಾಜ್ಯದಲ್ಲಿ ವಿದ್ಯುತ್ ಬೆಲೆ ಭಾರಿ ಇಳಿಕೆ ಕಂಡಿದೆ, ಈ ಮೂಲಕ ಕಾಂಗ್ರೆಸ್ ಸರ್ಕಾರವು ಈಗ ಕನ್ನಡಿಗರಿಗೆ ದೊಡ್ಡ ಗಿಫ್ಟ್ ಕೊಟ್ಟಿದೆ. ಆದರೆ ಇದನ್ನು ಚುನಾವಣೆಯ ಗಿಮಿಕ್ಸ್ ಅಂತಿದ್ದಾರೆ ಬಿಜೆಪಿ ನಾಯಕರು. ಹೀಗೆ ಲೋಕಸಭೆ ಚುನಾವಣೆಗೆ ಮೊದಲು ವಿದ್ಯುತ್ ದರ ಏರಿಕೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಈಗ ಬಿಜೆಪಿ ಬಗ್ಗೆ ಕೆಣಕುವಂತೆ ಕಾಂಗ್ರೆಸ್ ಮಾತನಾಡಿದೆ!
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ದೊಡ್ಡ ಪಾತ್ರವನ್ನೇ ವಹಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯುದ್ಧವೂ ನಡೆಯುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿಯೂ ಅಸ್ತ್ರ ಮಾಡ್ಕೊಂಡು ಪ್ರತಿನಿತ್ಯ ವಾಗ್ದಾಳಿ ನಡೆಸುತ್ತಿದೆ. ಈ ಸಮಯಕ್ಕೇ ಲೋಕಸಭೆ ಚುನಾವಣೆಯೂ ಬಂದಿದೆ, ಹೀಗಿದ್ದಾಗ ಕಾಂಗ್ರೆಸ್ ಸರ್ಕಾರ ಇದೀಗ ದಿಢೀರ್ ವಿದ್ಯುತ್ ದರವನ್ನೂ ಇಳಿಸಿದೆ. ಹೀಗಾಗಿ ಇದೇ ಅಸ್ತ್ರವನ್ನು ಬಿಜೆಪಿ ವಿರುದ್ಧ ಪ್ರಯೋಗ ಮಾಡುತ್ತಿದೆ ಕಾಂಗ್ರೆಸ್.

ಬಿಜೆಪಿ & ಕಾಂಗ್ರೆಸ್ ಫುಲ್ ಫೈಟಿಂಗ್!
ಇದೀಗ ಬಿಜೆಪಿ ವಿರುದ್ಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ವಿದ್ಯುತ್ ದರ ಇಳಿಕೆ ಮಾಡುವ ಮೂಲಕ #ಜನಪರಕಾಂಗ್ರೆಸ್ ಸರ್ಕಾರ ಜನರ ನೆರವಿಗೆ ನಿಂತಿದೆ.'
'• ಗೃಹಬಳಕೆಯ ವಿದ್ಯುತ್ ನಲ್ಲಿ ಪ್ರತಿ ಯೂನಿಟ್ ಗೆ ₹1.10 ಇಳಿಕೆ.
• ವಾಣಿಜ್ಯ ಬಳಕೆ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹1.25 ಇಳಿಕೆ.
• ಕೈಗಾರಿಕೆ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹50 ಪೈಸೆ ಇಳಿಕೆ
• ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹40 ಪೈಸೆ ಇಳಿಕೆ' ಎಂದು ಮಾಹಿತಿ ನೀಡಿದೆ ಕರ್ನಾಟಕ ಕಾಂಗ್ರೆಸ್.
ವಿದ್ಯುತ್ ದರ ಇಳಿಕೆ ಮಾಡುವ ಮೂಲಕ #ಜನಪರಕಾಂಗ್ರೆಸ್ ಸರ್ಕಾರ ಜನರ ನೆರವಿಗೆ ನಿಂತಿದೆ.
— Karnataka Congress (@INCKarnataka) February 29, 2024
• ಗೃಹಬಳಕೆಯ ವಿದ್ಯುತ್ ನಲ್ಲಿ ಪ್ರತಿ ಯೂನಿಟ್ ಗೆ ₹1.10 ಇಳಿಕೆ.
• ವಾಣಿಜ್ಯ ಬಳಕೆ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹1.25 ಇಳಿಕೆ.
• ಕೈಗಾರಿಕೆ ಬಳಕೆಯ ವಿದ್ಯುತ್ ನ ಪ್ರತಿ ಯೂನಿಟ್ ಗೆ ₹50 ಪೈಸೆ ಇಳಿಕೆ
• ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ…
ಹಾಗೇ ತನ್ನ ಇದೇ ಟ್ವೀಟ್ ಮೂಲಕ ಬಿಜೆಪಿಗೆ ಕೂಡ ತಿರುಗೇಟು ನೀಡಿರುವ ಕರ್ನಾಟಕದ ಕಾಂಗ್ರೆಸ್ ಘಟಕ, 'ಬಿಜೆಪಿ ಆಡಳಿತದ ಅವಧಿಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಸಮಯದಲ್ಲಿ ಇಳಿಕೆಯಾದ ಇತಿಹಾಸವೇ ಇಲ್ಲ ಎನ್ನುವುದು ವಿಶೇಷ! ಗೃಹಜ್ಯೋತಿ ಯೋಜನೆಯೊಂದಿಗೆ ಈ ವಿದ್ಯುತ್ ದರ ಇಳಿಕೆ ಲಾಭವನ್ನು ಹಲವರು ಪಡೆಯಲಿದ್ದಾರೆ, ಜನಪರ ಆಡಳಿತವು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ.' ಅಂತಾ ಹೇಳಿದೆ. ಈ ಮೂಲಕವಾಗಿ ಬಿಜೆಪಿ & ಕಾಂಗ್ರೆಸ್ ಫೈಟಿಂಗ್ ಜೋರಾಗಿದೆ.
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬೆಲೆಯನ್ನ ಇಳಿಕೆ ಮಾಡಿ, ಅಸ್ತ್ರವನ್ನು ಪ್ರಯೋಗ ಮಾಡಿದೆ. ಇದಕ್ಕೆ ಬಿಜೆಪಿ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಅಂತ ಕಾದು ನೋಡಬೇಕಿದೆ.












Click it and Unblock the Notifications