ಕರ್ನಾಟಕದಲ್ಲಿ ಈ ಎರಡು ಭಾಷೆ ಸಾಕು: ಸೋಷಿಯಲ್ ಮೀಡಿಯಾ ಹೊಸ ಟ್ರೆಂಡ್!
ಕನ್ನಡ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಮಹತ್ವದ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡಿಗರು ಭಾಷಾ ಅಭಿಯಾನವನ್ನು ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನು ಜಾರಿ ಮಾಡಬೇಕು ಇದರಿಂದ ಕನ್ನಡಿಗರಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಏನಿದು ದ್ವಿಭಾಷಾ ನೀತಿ ಇದರಿಂದ ಕನ್ನಡಿಗರಿಗೆ ಯಾವ ರೀತಿಯ ಲಾಭವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಭಾಷಾ ವಿವಾದವು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಹಿಂದಿ ಹೇರಿಕೆಯನ್ನು ಕನ್ನಡಿಗರು ವಿರೋಧಿಸಿದ್ದಾರೆ. ಇದರ ನಡುವೆ ಕರ್ನಾಟಕದಲ್ಲಿ ಶಾಲಾ - ಕಾಲೇಜು ಹಂತದಲ್ಲಿ ಹಿಂದಿ ಹೇರಿಕೆ ಅಥವಾ ಹಿಂದಿ ಕಲಿಸುವುದನ್ನು ಬಿಡಬೇಕು ಅಂತ ಅಭಿಯಾನ ಶುರುವಾಗಿದೆ. ಹೌದು ಹಿಂದಿಯನ್ನು ಮೂರನೇ ಭಾಷೆಯಾಗಿ ಕರ್ನಾಟಕದ ಶಾಲೆಗಳಲ್ಲಿ ಕಲಿಸಲಾಗುತ್ತಿದೆ.

ಇದರಿಂದ ರಾಜ್ಯದಲ್ಲಿ ಹಿಂದಿ ಕಲಿಕೆ ಅನಿವಾರ್ಯವಾಗಿದೆ. ತ್ರಿಭಾಷಾ ಸೂತ್ರವನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಹಿಂದಿ ಕಡ್ಡಾಯವಾದಂತೆ ಆಗಿದ್ದು. ಕನ್ನಡಿಗರು ಮೂರು ಭಾಷೆಗಳನ್ನು ಕಲಿಯುವಂತೆ ಆಗಿದೆ. ಆದರೆ, ತಮಿಳುನಾಡು ಸರ್ಕಾರವು ಇಲ್ಲಿಯ ವರೆಗೆ ತ್ರಿಭಾಷ ಸೂತ್ರವನ್ನು ಅಳವಡಿಸಿಕೊಂಡಿಲ್ಲ. ಇಲ್ಲಿ ಕೇವಲ ತಮಿಳು ಹಾಗೂ ಇಂಗ್ಲಿಷ್ ಭಾಷೆಯನ್ನು ಮಾತ್ರ ಮಕ್ಕಳಿಗೆ ಕಲಿಸಲಾಗುತ್ತಿದೆ.
ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಉತ್ತರ ಭಾರತದ ಕೆಲವು ಪ್ರಮುಖ ರಾಜ್ಯಗಳಲ್ಲೂ ಕೇವಲ ದ್ವಿಭಾಷ ನೀತಿ ಮಾತ್ರ ಜಾರಿಯಲ್ಲಿದೆ. ಹಿಂದಿ ಹಾಗೂ ಇಂಗ್ಲಿಷ್ ಅನ್ನು ಮಾತ್ರ ಅಲ್ಲಿಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಮಾತ್ರ ತ್ರಿಭಾಷಾ ನೀತಿ ಜಾರಿಯಲ್ಲಿದ್ದು ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಏನಿದು ದ್ವಿಭಾಷಾ ನೀತಿ: ರಾಜ್ಯದಲ್ಲಿ ಇದೀಗ ಕನ್ನಡ, ಇಂಗ್ಲಿಷ್ & ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ. ಇದರ ಬದಲಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿಸಿದರೆ ಸಾಕು ಇದರಿಂದ ಕನ್ನಡಿಗರ ಮೇಲೆ ಅನವಶ್ಯಕ ಹೊರೆ ಕಡಿಮೆ ಆಗಲಿದೆ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಹಿಂದಿ ಕಲಿಸುವುದನ್ನು ಕೈಬಿಡಬೇಕು. ಇದರ ಬದಲಾಗಿ ಕೇವಲ ಕನ್ನಡ ಮತ್ತು ಇಂಗ್ಲಿಷ್ ಸಾಕು ಅಂತ ಹೇಳಲಾಗುತ್ತಿದೆ.
#ದ್ವಿಭಾಷಾ_ನೀತಿ
#ಎರಡು_ನುಡಿ_ಪಾಲಿಸಿ
#ನಮ್ಮನಾಡು_ನಮ್ಮಆಳ್ವಿಕೆ
#KannadaNadu ಎನ್ನುವ ಟ್ಯಾಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ನಮ್ಮ ನಾಡು ನಮ್ಮ ಆಳ್ವಿಕೆ ತಂಡದಿಂದ ಈ ಅಭಿಯಾನ ಶುರುವಾಗಿದ್ದು, ಹಲವು ಕನ್ನಡಿಗರು ಈ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಇದು ಭಾರೀ ಟ್ರೆಂಡ್ ಸೃಷ್ಟಿ ಮಾಡಿದೆ. ನೆಲದ ಭಾಷೆಗೆ ಗೌರವ ನೀಡಬೇಕು ಹಾಗೂ ದ್ವಿಭಾಷಾ ನೀತಿ ಸಾಕು ಅಂತ ಹೇಳಲಾಗುತ್ತಿದೆ.
#TwoLanguagePolicy for Karnataka is a must going forward!
— ಭರತ್ | Bharath (@bkkk6K) May 26, 2025
Let’s protect our identity, ensure dignity for our people, and push back against linguistic overreach.
Sign the petition below:https://t.co/x5VgYlYA6B#ದ್ವಿಭಾಷಾ_ನೀತಿ#ಎರಡು_ನುಡಿ_ಪಾಲಿಸಿ#ನಮ್ಮನಾಡು_ನಮ್ಮಆಳ್ವಿಕೆ#KannadaNadu pic.twitter.com/pidGVFrInm
ಇಂಗ್ಲಿಷ್ ಯಾಕೆ ?
ಇನ್ನು ಕನ್ನಡಿಗರ ದ್ವಿಭಾಷಾ ನೀತಿಯ ವಿಚಾರದ ಚರ್ಚೆಯಲ್ಲೂ ನಾರ್ಥಿಗಳು ಮೂಗು ತೂರಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾಕು ಎನ್ನುತ್ತೀರಲ್ಲಾ ಹಾಗಾದರೆ ನಿಮಗೆ ಇಂಗ್ಲಿಷ್ ಯಾಕೆ ಬೇಕು. ಯಾವುದೋ ವಿದೇಶದ ಭಾಷೆಯನ್ನು ಕಲಿಯುವುದಕ್ಕೆ ನಿಮಗೆ ಆಸಕ್ತಿ ಇದೆ. ಆದರೆ, ಭಾರತದ್ದೇ ಒಂದು ಭಾಷೆಯನ್ನು ಕಲಿಯುವುದಕ್ಕೆ ನಿಮಗೆ ಸಾಧ್ಯವಿಲ್ಲವೇ. ಇಂಗ್ಲಿಷ್ ಕಲಿಯಬಹುದಾದರೆ, ಹಿಂದಿ ಯಾಕೆ ಬೇಡ ಅಂತ ಅಸಂಬದ್ಧವಾಗಿ ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications