ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುದ್ದಹನುಮೇಗೌಡ ಅಭ್ಯರ್ಥಿ, ಕಾಂಗ್ರೆಸ್‌ಗೆ ವೋಟ್ ಹಾಕಿ : ಕೆ ಎನ್‌ ರಾಜಣ್ಣ

ತುಮಕೂರು, ಫೆಬ್ರವರಿ 01: ಇವತ್ತಿನ ತೀರ್ಮಾನದಲ್ಲಿ ಮೇಲ್ನೋಟಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗುವ ಅವಕಾಶ ಇದೆ. ಹಾಗಾಗಿ, ಈಗಲೇ ಹೇಳ್ತಾ ಇದ್ದೀನಿ, ಮತ್ತೆ ನಾನೇನು ಹೇಳಿಲ್ಲ ಅಂತ ಹೇಳಬಾರದು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಜನರಲ್ಲಿ ಮನವಿ ಮಾಡಿದರು.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗುಟ್ಟೇ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಜಣ್ಣ, ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಪುನರುಚ್ಚರಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಕೂಡ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದರು.

There is A Chance That Muddahanumegowda Will Become The Candidate Of The Congress Party Said KN Rajanna

ಇನ್ನು, ನಾನು ನೇರವಾಗಿ ಲೋಕಸಭೆ ಚುನಾವಣೆಗೆ ಮತ ಕೇಳಲು ಬರುತ್ತೇನೆ. ಕಾಂಗ್ರೆಸ್‌ಗೆ ವೋಟು ಹಾಕಬೇಕು. ಈಗಲೇ ಹೇಳ್ತಾ ಇದ್ದೇನೆ ಆಮೇಲೆ ನಾನು ಹೇಳಿಲ್ಲ ಅಂತಾ ಬೇರೆ ತೀರ್ಮಾನ ಮಾಡಬಾರದು. ಇವತ್ತಿನ ದಿನಮಾನದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಹೈಕಮಾಂಡ್ ಕೂಡ ಸೂಕ್ಷ್ಮವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡ ಬಿಟ್ಟು ಬೇರೆ ಯಾರಿಗೇ ಟಿಕೆಟ್ ಸಿಗಲಿ, 100ಕ್ಕೆ 99ರಷ್ಟು ಭಾಗ ಕಾಂಗ್ರೆಸ್‌ಗೆ ವೋಟ್ ಹಾಕಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟೆಲ್ಲಾ ಕಾರ್ಯಕ್ರಮಗಳನ್ನ ಕೊಟ್ಟಿದ್ದಾರೆ ಅವರಿಗೆ ಗೌರವ ಕೊಡಬೇಕು. ಅನ್ನ ಅಂತಾ ಯಾರು ಕೂಡ ಯೋಚನೆಯನ್ನೇ ಮಾಡದ ರೀತಿಯಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ರೂಪಿಸಿದ್ದಾರೆ. ಅಂತಹ ಪುಣ್ಯದ ಕೆಲಸ ಯಾರೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಕೆಲಸವನ್ನು ಮಾಡಿದ್ದಾರೆ‌. ಹಾಗಾಗಿ, ಅವರು ಹೇಳಿದ ಹಾಗೆ ವೋಟ್ ಹಾಕಬೇಕು ಎಂದು ಸಾರ್ವಜನಿಕರಲ್ಲಿ ರಾಜಣ್ಣ ಜನರಲ್ಲಿ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+