'ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ'
ಬೆಳಗಾವಿ, ಸೆಪ್ಟೆಂಬರ್ 08: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗಲೇ ಸಿಎಂ ಸ್ಥಾನಕ್ಕಾಗಿ ಕೈ ನಾಯಕರು ತೀವ್ರ ಪೈಪೋಟಿಯನ್ನ ನಡೆಸಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಅಭಿಮಾನ ಆರಂಭಿಸಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೋಳಿ ಅವರ ಅಭಿಮಾನಿಗಳಿಂದ ಅಭಿಯಾನ ಶುರುವಾಗಿದ್ದು, ಸೋಶಿಯಲ್ ಮೀಡಿಯಾದ ಮಾತ್ರ ಅಲ್ಲ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂದು ಪತ್ರಿಕೆಗೆ ಜಾಹೀರಾತುಗಳನ್ನ ನೀಡಿದ್ದಾರೆ.

ಕರ್ನಾಟಕದ ಪ್ರಮುಖ ದಿನಪತ್ರಿಕೆಯೊಂದಕ್ಕೆ ಅಭಿಮಾನಿಯೊಬ್ಬರು ಜಾಹೀರಾತು ನೀಡಲಾಗಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಜಾಹೀರಾತಿನಲ್ಲಿ ಬಿಜೆಪಿ ನಾಯಕರ ಪೋಟೋ ಪ್ರಕಟವಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ, ರಮೇಶ್ ಜಾರಕಿಹೊಳಿ ಪೋಟೋ ಜೊತೆ ಸತೀಶ ಜಾರಕಿಹೊಳಿ ಪೋಟೋ ಪ್ರಕಟವಾಗಿದೆ.
ರಜನೀಶ್ ಆಚಾರ್ಯ ಪೌಂಡೇಸನ್ ವತಿಯಿಂದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ ಎಂದು ಜಾಹೀರಾತು ನೀಡಲಾಗಿದೆ. ಈ ಬ್ಯಾನರ್ ನಲ್ಲಿ ಬೆಳಗಾವಿ ಜಿಲ್ಲೆಗೆ ಮೊದಲ ಸಿಎಂ ಸ್ಥಾನ ಸಿಗಲಿ ಎಂದು ಶುಭ ಹಾರೈಸಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲೂ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನ ಆರಂಭವಾಗಿದೆ.
ಪೋಸ್ಟರ್ ನಲ್ಲಿ ಏನಿದೆ?
ಪಕ್ಷದ ವರಿಷ್ಠರು ಸಿದ್ದರಾಮಯ್ಯ ರವರ ಒಪ್ಪಿಗೆ ಪಡೆದು ಅವರ ಬದಲಿಗೆ ಶ್ರೀ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಬೇಕು ಎಂದು ಜನಾಭಿಪ್ರಾಯವಾಗಿದೆ ಎಕೆಂದರೆ ಮೂವರು ಶಾಸಕರು, ಎಂಎಲ್‌ಸಿ ಹಾಗೂ ಸಂಸದರನ್ನು ಹೊಂದಿರುವ ಸತೀಶ್ ಜಾರಕಿಹೊಳಿ ಕುಟುಂಬದೊಂದಿಗೆ ಸಿದ್ದರಾಮಯ್ಯರವರು ನಿಕಟ ಸಂಪರ್ಕ ಹೊಂದಿದ್ದಾರೆ.
ಈ ಬಾರಿ ಅವರಿಗೆ ಅವಕಾಶ ನೀಡಲು ಪಕ್ಷವೂ ಗಂಭೀರ ಚಿಂತನೆ ನಡೆಸುತ್ತಿದೆ, ಶ್ರೀ ಸಿದ್ದರಾಮಯ್ಯರವರ ನಂತರ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿ ಸತೀಶ್ ಜಾರಕಿಹೊಳಿ ಅವರ ಜನಪ್ರಿಯತೆ ಹಾಗೂ ಎಸ್ಸಿ & ಎಸ್ ಟಿ ಸಮುದಾಯದ 15 ಶಾಸಕರು ಸೇರಿದಂತೆ 45 ಕ್ಕೂ ಹೆಚ್ಚು ಶಾಸಕರ ಬೆಂಬಲವು ಸತೀಶ್ ಜಾರಕಿಹೊಳಿ ಅವರ ಪರವಾಗಿದೆ. ಹಾಗಾಗಿ ಈ ಬಾರಿ ಸತೀಶ್ ಜಾರಕಿಹೊಳಿ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಹಿಂದುಳಿದ ವರ್ಗಗಳ ಒಮ್ಮತ ಅಭಿಪ್ರಾಯವಾಗಿದೆ.












Click it and Unblock the Notifications