ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಗ್ಯಾಸ್ ಸ್ಟೌವ್ ವಿತರಣೆ

ಬೆಂಗಳೂರು, ಜನವರಿ. 10 : ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿಪಿಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಗ್ಯಾಸ್ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲು ಮುಂದಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಈ ಕುರಿತು ಮಾತನಾಡಿ,'ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಒಂದು ಸಿಲಿಂಡರ್ ಸೌಲಭ್ಯವುಳ್ಳ ಅಡುಗೆ ಅನಿಲ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಉತ್ತಮ ಗುಣಮಟ್ಟದ ಸ್ಟೌವ್ ಮತ್ತು ರೆಗ್ಯುಲೇಟರ್ ನೀಡಲಿದೆ' ಎಂದರು.[ಎಪಿಎಲ್ ಪಡಿತರ ಚೀಟಿಗಾಗಿ ಇಂದಿನಿಂದಲೇ(ಜ.9)]

The State government will give free LPG stoves and regulators for BPL families

ಕರ್ನಾಟಕದಲ್ಲಿ ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯಲು ಸುಮಾರು 3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಒಬ್ಬರಿಗೆ ಒಂದು ಸಾವಿರ ರು ವೆಚ್ಚ ವಾಗಲಿದ್ದು. ಅದನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದರು.

ಶೀಘ್ರದಲ್ಲಿಯೇ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಉಚಿತವಾಗಿ ಸ್ಟೌವ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+