ಬೀದರ್ ದಕ್ಷಿಣ ಶಾಸಕ ಅಶೋಕ್ ಖೇಣಿ ಮನೆಯಲ್ಲಿ ಅಗ್ನಿ ಅವಘಡ
ಬೀದರ್, ಜೂನ್ 16 : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಅವರ ಮನೆಯಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದೆ.
ಬೀದರ್ ನಗರದ ರಾಂಪುರೆ ಕಾಲೋನಿಯಲ್ಲಿರುವ ಶಾಸಕ ಅಶೋಕ್ ಖೇಣಿ ಅವರ ನಿವಾಸದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ಕುರ್ಚಿ, ಟೇಬಲ್, ಕಂಪ್ಯೂಟರ್ ಬೆಂಕಿಗಾಹುತಿಯಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬಾಗ್ನಿ ಅವಘಡ ವೇಳೆ ಅಶೋಕ್ ಖೇಣಿ ಅವರು ಮನೆಯಲ್ಲೇ ಇದ್ದರು.












Click it and Unblock the Notifications