Karnataka Election: ಮರೆಯದೇ ಮತ ಹಾಕುವಂತೆ ಕರೆಯೋಲೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಶ್ರಮಿಸುತ್ತಿದೆ.

ಮತದಾರರನ್ನು ಮತದಾನ ಮಾಡಲು ಸೆಳೆಯಲು ವಿವಿಧ ರೀತಿಯಲ್ಲಿ ಜಾಹೀರಾತುಗಳನ್ನು ನೀಡುತ್ತದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ 2018ರಲ್ಲಿ ಮತದಾರರಿಗೆ ಜಾಗೃತಿ ಮೂಡಿಸಿದ್ದ ವಿಡಿಯೋವನ್ನು ಈ ಬಾರಿ ಹಂಚಿಕೊಂಡಿದೆ.

The Election Commission Of India Invites Voters To Cast Their Votes

ಈಗ ಮದುವೆಯ ಆಹ್ವಾನ ಪತ್ರಿಕೆಯ ಮಾದರಿಯಲ್ಲಿ ಮತದಾರರನ್ನು ಮತದಾನ ಮಾಡಲು ಬರುವಂತೆ ಕೋರುವ ಕಾರ್ಡ್ ಮಾದರಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಚುನಾವಣಾ ಆಯೋಗವೇ ಅಧಿಕೃತವಾಗಿ ವಿನ್ಯಾಸ ಮಾಡಿರುವುದಾ ಎನ್ನುವ ಬಗ್ಗೆ ಮಾಹಿತಿ ಇಲ್ಲವಾದರೂ, ಮತದಾರರನ್ನು ಸೆಳೆಯಲು ಉತ್ತಮ ಪ್ರಯತ್ನವನ್ನಂತೂ ಮಾಡಲಾಗಿದೆ.

ಮೇ 10ರಂದು ಎಲ್ಲಾ ಮತದಾರರು ಮತ ಚಲಾವಣೆ ಮಾಡುವ ಮೂಲಕ ಚುನಾವಣೋತ್ಸವವನ್ನು ಯಶಸ್ವಿಯಾಗಿ ನೆರವೇರಿಸುವಂತೆ ಮನವಿ ಮಾಡಲಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ, ಸ್ವ ಇಚ್ಛೆಯಿಂದ ನಿರ್ಭೀತರಾಗಿ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಕರ್ನಾಟಕದ ಭವಿಷ್ಯವನ್ನು ರೂಪಿಸಬೇಕು ಎಂದು ಕೋರುತ್ತೇವೆ ಎಂದು ಕೋರಲಾಗಿದೆ.

ಚುನಾವಣೆ ಯಶಸ್ವಿಗೊಳಿಸಲು ಸಿದ್ಧತೆ

ಈ ಬಾರಿ ಚುನಾವಣೆಯನ್ನು ಯಶಸ್ವಿಯಾಗಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಹಿಳೆಯರಿಗಾಗಿಯೇ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಿದ್ದಾರೆ. ಚುನಾವಣೆಯನ್ನು ಯಶಸ್ವಿಗೊಳಿಸಲು ಹಲವು ಹೋಟೆಲ್‌ಗಳು ಕೂಡ ಕೈ ಜೋಡಿಸಿವೆ, ಮತದಾನ ಮಾಡುವವರಿಗೆ ಉಚಿತ ತಿಂಡಿ, ಕಾಫಿ, ಅಥವಾ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+