ಅಂಬೇಡ್ಕರ್‌ಗೆ ಅವಮಾನ: ಮತ್ತೊಂದು ವಿವಾದದಲ್ಲಿ ರೋಹಿತ್ ಚಕ್ರತೀರ್ಥ
ಬೆಂಗಳೂರು, ಜೂನ್1: ಕರ್ನಾಟಕ ಪಠ್ಯಪುಸ್ತಕ ಮರು ಪರಿಷ್ಕರಣೆಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇಲೆ ಒಂದೊಂದೇ ವಿವಾದಗಳು ಸುತ್ತಿಕೊಳ್ಳುತ್ತಿವೆ. ಕುವೆಂಪುರವರಿಗೆ ಅವಮಾನ, ನಾಡಗೀತೆಯನ್ನು ತಿರುಚಿದ ವಿವಾದ, ಪಠ್ಯದಲ್ಲಿ ಕೆಲವು ಲೇಖಕರ ಪಠ್ಯವನ್ನು ಕೈಬಿಟ್ಟಿದ್ದು. ಬಸವಣ್ಣರವರಿಗೆ ಅವಮಾನ ಸೇರಿದಂತೆ ಹಲವಾರು ವಿವಾದಗಳು ಸುತ್ತಿಕೊಳ್ಳುತ್ತವೆ. ಈಗ ರೋಹಿತ್ ಚಕ್ರತೀರ್ಥರಿಗೆ ಮತ್ತೊಂದು ವಿವಾದ ಸುತ್ತಿಕೊಂಡಿದೆ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್‌ಗೆ ಅವಮಾನಿಸಿದ್ದರು ಎಂದು ಟ್ವಿಟ್ಟರ್ ಹರಿದಾಡುತ್ತಿದೆ.
ಪಠ್ಯಪುಸ್ತಕ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ರೋಹಿತ್ ಚಕ್ರತೀರ್ಥ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ತಿರುಚಿದ ನಾಡಗೀತೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನಾಡಗೀತೆ ಮತ್ತು ಕುವೆಂಪುರವರಿಗೆ ಅವಮಾನವನ್ನು ಮಾಡಲಾಗಿತ್ತು. ಇದಾದ ಬಳಿಕ ಪುಸ್ತಕ ಪರಿಷ್ಕರಣೆಯಲ್ಲಿಯೂ ಹಲವು ವಿವಾದ ತಲೆ ಎತ್ತಿವೆ. ಇದರ ನಡುವೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವವರಿಗೆ ಅವಮಾನವನ್ನು ಮಾಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿವೆ.
ರೋಹಿತ್ ಚಕ್ರತೀರ್ಥ ಅಂಬೇಡ್ಕರ್ ಬಗ್ಗೆ ಟ್ವೀಟಿಸಿದ್ದೇನು..?
""ಅಂಬೇಡ್ಕರ್ ಜಗತ್ತಿನ ಅತಿದೊಡ್ಡ ಜಲತಂತ್ರಜ್ಞರು, ವಾಯು ತಂತ್ರಜ್ಞರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೇಟ್ ತಂತ್ರಜ್ಞರು ಆಗಿದ್ದರು. ಪ್ರಪಂಚದ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಕಂಡು ಹಿಡಿದವರು ಇವರೇ, ಜೈಭೀಮ್'' ಎಂದು ವ್ಯಂಗ್ಯವಾಗಿ ಅಂಬೇಡ್ಕರ್ ಬಗ್ಗೆ ರೋಹಿತ್ ಚಕ್ರತೀರ್ಥ ಮಾಡಿದ್ದ ಟ್ವೀಟ್ ಸ್ರೀನ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ ಎಂಬ ವಿಚಾರ ವ್ಯಾಪಕ ಆಕ್ರೋಕ್ಕೂ ಕಾರಣವಾಗುತ್ತಿದೆ.

ರೋಹಿತ್ ಚಕ್ರತೀರ್ಥರವವರು ಅಂಬೇಡ್ಕರ್ ಬಗ್ಗೆ ಹಾಕಲಾಗಿದ್ದ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ. ಆದರೆ ರೋಹಿತ್ ಚಕ್ರತೀರ್ಥ ಮಾಡಿದ್ದರು ಎನ್ನವ ಟ್ವೀಟ್ ಮಾತ್ರ ಎಲ್ಲೆಡೆ ವೈರಲ್ ಆಗುತ್ತಿದ್ದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್‌ರವರಿಗೆ ಅವಮಾನ ಮಾಡಲಾಗಿದೆ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ರೋಹಿತ್ ಚಕ್ರತೀರ್ಥ ಮಾನಸಿಕ ರೋಗಿ..!
""ರೋಹಿತ್ ಚಕ್ರತೀರ್ಥ ಮಾನಸಿಕ ರೋಗಿಯಾಗಿದ್ದಾನೆ. ಭಾರತಕ್ಕೆ ಸಂವಿಧಾನವನ್ನು ಕೊಟ್ಟಂತಹ ಅಂಬೇಡ್ಕರ್ ಅವರನ್ನು ಅವಮಾನ ಮಾಡಲಾಗಿದೆ. ಪಠ್ಯಪುಸ್ತಕ ಸಮಿತಿಯಲ್ಲಿ ಇಂಥಹ ಅಧ್ಯಕ್ಷನಿದ್ದಾಗ ಮಕ್ಕಳಿಗೆ ಯಾವ ರೀತಿಯ ಸಂದೇಶ ಸಿಗಲಿದೆ. ನಾಡಗೀತೆಗೂ ಅವಮಾನವನ್ನು ಮಾಡಿರುವ ರೋಹಿತ್ ಚರ್ಕತೀರ್ಥ ವಿರುದ್ದ ಯಾವ ರೀತಿಯ ಹೋರಾಟವನ್ನು ಮಾಡಬೇಕು,'' ಎಂದು ದಲಿತ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಚನ್ನಕೇಶವ ತಿಳಿಸಿದ್ದಾರೆ.












Click it and Unblock the Notifications