ಚಿಕ್ಕಬಳ್ಳಾಪುರದಲ್ಲಿ ಪವರ್‌ ಸ್ಟಾರ್ ಪವನ್ ಕಲ್ಯಾಣ್

ಚಿಕ್ಕಬಳ್ಳಾಪುರ, ಜನವರಿ 29: ತೆಲುಗಿನ ಸ್ಟಾರ್ ನಟ ಪವರ್‌ ಸ್ಟಾರ್ ಪವನ್ ಕಲ್ಯಾಣ್ ಅವರು ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು.

ನಗರದ ಸಮಾಜ ಸೇವಕ ಕೆ.ವಿ.ನವೀನ್ ಕಿರಣ್ ಅವರ ಭೇಟಿಗೆಂದು ಆಗಮಿಸಿದ್ದ ಪವನ್ ಕಲ್ಯಾಣ್ ಅವರನ್ನು ನೋಡಲು ಕೆವಿ ಕ್ಯಾಂಪಸ್‌ನಲ್ಲಿ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಸಿನಿ ಪ್ರೇಮಿಗಳು ಹೆಚ್ಚಿಗಿದ್ದು, ಹಾಗಾಗಿ ಪವನ್ ಅವರನ್ನು ನೋಡಲು ಹಳ್ಳಿಗಳಿಂದಲೂ ಜನ ಬಂದಿದ್ದರು.

ಪವನ್ ಕಲ್ಯಾಣ್ ಅವರ ಮೇಲೆ ಹೂ ಎರಚಿ, ಶಿಳ್ಳೆ, ಚಪ್ಪಾಳೆ, ಜಯಘೋಷಣೆಗಳನ್ನು ಹಾಕಿ ಅಭಿಮಾನಿಗಳು ಸಂತಸ ಪಟ್ಟರು. ಸೆಲ್ಫಿ, ವಿಡಿಯೋಗಳನ್ನು ತೆಗೆದುಕೊಂಡು ಖುಷಿ ಪಟ್ಟರು. ಆದರೆ ನೂಕುನುಗ್ಗಲು ಹೆಚ್ಚಾದಾಗ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

Telugu movie star actor Pawan kalyan came to Chikkaballapura

ಕೆ.ವಿ.ನವೀನ್‌ಕುಮಾರ್‌ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯಾಗಿದ್ದು ಅವರ ಪ್ರಚಾರ ಹೆಚ್ಚಿಸಿಕೊಳ್ಳಲೆಂದು ಪವನ್‌ ಕಲ್ಯಾಣ್ ಅವರನ್ನು ಕರೆಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಅವರು ಈ ಮುಂಚೆ ಲೋಕಸಭಾ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಬಿಜೆಪಿ ಪರ ಪ್ರಚಾರಕ್ಕೆಂದು ಆಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+