ಶಿಕ್ಷಕರಿಗೆ ಚುನಾವಣೆ BLO ಕಾರ್ಯ ಬೇಡ; ಚುನಾವಣಾ ಆಯೋಗಕ್ಕೆ ಪತ್ರ

ಬೆಂಗಳೂರು, ಜುಲೈ 28; ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್ಒ) ಹಾಗೂ ಬೋಧನೇತರ ಕಾರ್ಯಗಳಿಗೆ ನಿಯೋಜನೆ ಮಾಡದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆಯಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ವಿಶೇಷ ಆಯುಕ್ತರು (ಚುನಾವಣೆ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಸರ್ಕಾರದ ಆದೇಶ ದಿನಾಂಕ 26/9/2001, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಲ್ಮನವಿ (ಸಿವಿಲ್) 6/12/2007, ಸರ್ಕಾರದ ಆದೇಶ ದಿನಾಂಕ 21/7/2008 ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 22/7/2011 ಉಲ್ಲೇಖ ಮಾಡಿದ್ದಾರೆ.

Teacher Use As Booth Level Officer Letter To Election Commission

ಶಾಲಾ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಯಾ ತರಗತಿಗಳಲ್ಲಿ ನಿಗದಿಗೊಳಿಸಲಾಗಿರುವ ಪಠ್ಯವನ್ನು ಪೂರ್ಣಗೊಳಿಸಲು ಬೇಕಾದ ಅವಧಿಯನ್ನು ಮತ್ತು ಶಾಲಾ ರಜಾದಿನಗಳನ್ನು ಅಂದರೆ ಬೇಸಿಗೆ ದಸರಾ/ ಕ್ರಿಸ್ ಮಸ್ ಈ ಸಾರ್ವತ್ರಿಕ ರಜಾದಿನಗಳಲ್ಲಿ ಗಣನೆಗೆ ತೆಗೆದು ಕೊಂಡು ಶಾಲಾ ಕೆಲಸದ ದಿನಗಳನ್ನು ಕನಿಷ್ಟ 244 ದಿನಗಳೆಂದು ನಿಗದಿ ಪಡಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಯಾವ-ಯಾವ ಕಾರ್ಯಗಳು; ಆದರೆ ಶಾಲಾ ಶಿಕ್ಷಕರುಗಳನ್ನು ಜನಗಣತಿ ಚುನಾವಣಾ ಕಾರ್ಯ, ಮಕ್ಕಳಗಣತಿ ಇವುಗಳಲ್ಲಿ ತೊಡಗಿಸಿಕೊಳ್ಳುವುದರ ಪರಿಣಾಮವಾಗಿ ಕನಿಷ್ಟ 244 ಶಾಲಾ ಕರ್ತವ್ಯದದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಂಕನ ಕಾರ್ಯಕ್ಕಾಗಿ/ ಪಠ್ಯೇತರ ಚಟುವಟಿಕೆಗಳ/ ಪಠ್ಯ ಚಟುವಟಿಕೆಗಳ/ ಸ್ಪರ್ಧೆಗಳ ನಿರ್ವಹಣಾಕಾರ್ಯ/ ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣಾ ಕಾರ್ಯಕ್ಕಾಗಿ ಮತ್ತು ಶಾಲಾ ಸೃಷ್ಟಿಯ ರಜೆಗಳು ಒಟ್ಟಾರ 64 ದಿನಗಳು ಶಿಕ್ಷಕರುಗಳ ಸೇವೆಯನ್ನು ಮೇಲ್ಕಂಡ ಕಾರ್ಯಕ್ಕೆ ತೂಡಗಿಸಿ ಕೂಳ್ಳುತ್ತಿರುವುದರಿಂದ ವಿದ್ಯಾರ್ಥಿಗಳ ಬೋಧನಾ-ಕಲಿಕಾ ಪ್ರಕ್ರಿಯಗೆ ಕೇವಲ 180 ದಿನಗಳು ಉಳಿಯುತ್ತದೆ.

ಕನಿಷ್ಯ 180 ದಿನಗಳನ್ನು ಬೋಧನಾ ಕೆಲಸ ನಿರ್ವಹಿಸಲು ನಿಗದಿಪಡಿಸಿದ್ದರೂ ಸಹ ವಾಸ್ತವಿಕವಾಗಿ ಶಿಕ್ಷಕರುಗಳು ಅಷ್ಟು ದಿನಗಳು ಬೋಧನಾ ಕಾರ್ಯಕ್ಕೆ ಲಭ್ಯವಾಗುತ್ತಿಲ್ಲ, ಇದರಿಂದ ಬೋಧನಾ ಕೆಲಸವು ಕುಂಠಿತವಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಪ್ರಾಥಮಿಕ ಶಾಲೆಯ 5 ತರಗತಿ, 8ನೇ ತರಗತಿ ಮತ್ತು ಪ್ರೌಢಶಾಲೆಯ 10ನೇ ತರಗತಿಗೆ ರಾಜ್ಯ ಮಟ್ಟದಲ್ಲಿ ಪರೀಕ್ಷೆಗಳು ನಡೆಯುವುದರಿಂದ, ಶಿಕ್ಷಕರುಗಳು ಬೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಟ್ಟು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಾಗಿ ಸ್ಪಂದಿಸಿ ಹಾಗೂ ಉತ್ತಮ ಫಲಿತಾಂಶ ತರುವ ದೃಷ್ಟಿಯಿಂದ ಸರ್ಕಾರವು ಹಲವು ಆದೇಶಗಳ ಮೂಲಕ ಶಿಕ್ಷಕರಗಳನ್ನು ಬೋಧಕೇತರ ಕೆಲಸಗಳಿಗೆ ನಿಯೋಜಿಸುವುದು ನಿಷೇಧಿಸಿರುತ್ತದೆ.

ಶಿಕ್ಷಕರುಗಳನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳಿಗೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟ ಉಂಟಾಗಿ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಾಗಿರುತ್ತದೆ. ಈ ವಿಚಾರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಛ ನ್ಯಾಯಾಲಯಗಳು ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸಬಾರದೆಂದು ಆದೇಶಗಳನ್ನು ನೀಡಿರುತ್ತವೆ.

ಆದ್ದರಿಂದ ಶಿಕ್ಷಕರನ್ನು ಮತದಾರರ ಪಟ್ಟಿ/ ಬೋದಕೇತರ ಕೆಲಸಕ್ಕೆ ನಿಯೋಜನೆ ಮಾಡಬಾರದೆಂದು ಸರ್ಕಾರದ ಸುತ್ತೋಲೆಗಳಲ್ಲಿ ತಿಳಿಸಿರುತ್ತದೆ. ಈ ಕಾರಣದಿಂದ ಮತದಾರರ ಪಟ್ಟಿಗಳ ಪರಿಷ್ಕರಣೆ ಕಾರ್ಯಗಳಿಗೆ ನಿಯೋಜಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳಲ್ಲಿ ಶಿಕ್ಷಕರುಗಳನ್ನು ಶಿಕ್ಷಣೇತರ ಕಾರ್ಯಗಳಿಗೆ ನಿಯೋಜಿಸುವುದರಿಂದ ನ್ಯಾಯಾಲಯ ಹಾಗೂ ಸರ್ಕಾರದ ಆದೇಶಗಳ ಉಲ್ಲಂಘನೆ ಆಗುತ್ತದೆ.

ಆದ್ದರಿಂದ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ಚುನಾವಣಾ ರೋಲ್ ಪರಿಷ್ಕರಿಸುವ ಸಲುವಾಗಿ ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಬಾರದೆಂದು ಕೋರಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+