Tamannaah Bhatia: "ಮೈಸೂರು ಸ್ಯಾಂಡಲ್ ಸೋಪ್: ಕನ್ನಡ ಚಿತ್ರರಂಗದ ನಟ್ಟು - ಬೋಲ್ಟು ಟೈಟ್ ಧಮ್ಕಿಯೇ"
Tamannaah Bhatia: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡದ ನಟ - ನಟಿಯರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಗಂಭೀರವಾದ ಆರೋಪ ಸರ್ಕಾರದ ಮೇಲೆ ಕೇಳಿ ಬಂದಿದೆ. ಇದರೊಂದಿಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಗುರಿಯಾಗಿಸಿಕೊಂಡು ನೀಡಿದ್ದ ನಟ್ಟು ಬೋಲ್ಟ್ ಟೈಟ್ ವಿಚಾರವು ಇದೀಗ ಭಾರೀ ಚರ್ಚೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೆಲವರ ನಟ್ಟು ಬೋಲ್ಟ್ ಹೇಗೆ ಟೈಟ್ ಮಾಡುವುದು ಎಂದು ನನಗೆ ತಿಳಿದಿದೆ ಎಂದು ಈಚೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದರು. ಅಲ್ಲದೇ ಕಳೆದ ವಾರವಷ್ಟೇ ಇನ್ನೂ ಚಿತ್ರರಂಗದಲ್ಲಿ ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ ಎಂದಿದ್ದರು.
ಇದರ ಬೆನ್ನಲ್ಲೇ ಕರ್ನಾಟಕದ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯನ್ನಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದು ಹಾಗೂ 6.20 ಕೋಟಿ ರೂಪಾಯಿ ನೀಡಲು ಮುಂದಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು, ಪ್ರಶ್ನಿಸಿದ್ದು. ಇದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ, ನಟ್ಟು - ಬೋಲ್ಟು ಧಮ್ಕಿಗೆ ಹೆದರದಿದ್ದಕ್ಕಾಗಿ ಕನ್ನಡ ಚಿತ್ರರಂಗಕ್ಕೆ ಈ ರೀತಿ ಮಾಡಲಾಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದ ಪ್ರಮುಖ ಇಲಾಖೆ/ಮಂಡಳಿಗಳೆಲ್ಲ ನಷ್ಟ ಅನುಭವಿಸುತ್ತಿರುವ ಸಮಯದಲ್ಲಿ, ಲಾಭದಲ್ಲಿರುವ ರಾಜ್ಯದ ಹೆಮ್ಮೆಯ ಸಂಸ್ಥೆಯಾದ ಮೈಸೂರು ಸ್ಯಾಂಡಲ್ ಸೋಪ್ / ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಯ ಮೇಲೆ ಸರ್ಕಾರದ ವಕ್ರ ದೃಷ್ಟಿ ಬಿದ್ದಿದೆ ಎಂದಿದ್ದಾರೆ.
ಕೆ.ಎಂ.ಎಫ್. ಹಾಗೂ ಇತರೆ ಸಂಸ್ಥೆಗಳಿಗೆ ಅಪ್ಪು-ಶಿವಣ್ಣ ಅವರಂತಹ ಮೇರು ನಟರನ್ನೇ ರಾಯಭಾರಿಗಳನ್ನಾಗಿ ಮಾಡಿದ್ದು ನಮೆಲ್ಲರ ಹೆಮ್ಮೆ. ಈ ರಾಯಭಾರಿಗಳೆಲ್ಲರೂ ಸರ್ಕಾರದ ಸಂಸ್ಥೆಗಳಿಗಾಗಿ ಉಚಿತವಾಗಿ ಪ್ರಾಯೋಜಿಕತೆಯನ್ನು ನೀಡಿದ್ದು ಕನ್ನಡಿಗರ ಹೃದಯ ವಿಶಾಲತೆಯನ್ನು ತೋರಿಸುತ್ತದೆ.
ಆದರೆ, ಇದೀಗ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಗೆ ರಾಯಭಾರಿಯನ್ನಾಗಿ ಪರಭಾಷಿಕ ನಟಿಯೋರ್ವರನ್ನು 6.5 ಕೋಟಿ ಮೊತ್ತಕ್ಕೆ ನೇಮಕ ಮಾಡಿರುವುದು ಖಂಡನೀಯ. ಕರ್ನಾಟಕದಲ್ಲಿ ರಾಯಭಾರಿಗಳಾಗುವ ಅರ್ಹತೆ ಹೊಂದಿರುವ ಮತ್ಯಾರು ಕನ್ನಡದ ನಟ-ನಟಿಯರು ಸಿಗಲಿಲ್ಲವೇ? ಅಥವಾ ಡಿ.ಕೆ ಶಿವಕುಮಾರ್ ಅವರ ನಟ್ಟು - ಬೋಲ್ಟು ಧಮ್ಕಿಗೆ ಹೆದರದಿದ್ದಕ್ಕಾಗಿ ಶಿಕ್ಷೆಯೋ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications