ಬೊಂಬಾಟ್ ಆಗಿದೆ ‘ಟಕ್ಕರ್ ಮಾಸ್ & ಥ್ರಿಲ್ಲಿಂಗ್ ಟ್ರೇಲರ್

ಅಂಗೈಯಲ್ಲಿ ಪ್ರಪಂಚ ತೋರಿಸೋ ಮೊಬೈಲ್ ಎಷ್ಟು ಸೇಫ್..? ಸೇಫ್ ಅಲ್ಲ..? ಅನ್ನೋದು ತೀವ್ರವಾಗಿ ಯಾರ ತಲೆಗೂ ಹೋಗಿಲ್ಲ. ಅದ್ರಿಂದೇನಾಗುತ್ತೆ ಅನ್ನೋರಿಗೆ ಉತ್ತರ ಕೊಡೋದಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾವೊಂದು ರೆಡಿಯಾಗಿದೆ. ಇದು ಕೊಡೋ ಟಕ್ಕರ್‌ಗೆ ಎಲ್ಲರೂ ಒಮ್ಮೆ ಜಾಗೃತರಾಗಲೇಬೇಕು. ಎಸ್, ನಾವ್ ಮಾತನಾಡ್ತಿರೋದು ಬಿಡುಗಡೆಗೆ ಸಿದ್ದವಾಗಿರೋ 'ಟಕ್ಕರ್' ಸಿನಿಮಾ ಬಗ್ಗೆ. ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸ್ತಿರೋ ಚೊಚ್ಚಲ ಸಿನಿಮಾದ ಬಗ್ಗೆ.

ಮೇ 6ರಂದು ಚಿತ್ರಮಂದಿರಕ್ಕೆ ಕಾಲಿಡ್ತಿರೋ 'ಟಕ್ಕರ್' ಚಿತ್ರ ಮಾಸ್ & ಥ್ರಿಲ್ಲಿಂಗ್ ಟ್ರೇಲರ್ ಇಂದು ಬಿಡುಗಡೆ ಮಾಡಿದೆ. ಟ್ರೇಲರ್ ಮೊದಲ ನೋಟಕ್ಕೆ ಅಟೆಂಕ್ಷನ್ ಕದಿಯುತ್ತೆ. ಮತ್ತೊಮ್ಮೆ ಕಣ್ಣಾಡಿಸುವಂತೆ ಮಾಡುತ್ತೆ. ಚಿತ್ರದಲ್ಲಿ ಸೈಬರ್ ಕ್ರೈಂ ಬಗ್ಗೆ ಹೇಳಲಾಗಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾದ್ರು ಇದು ಮಾಮೂಲಿ ಸೈಬರ್ ಕ್ರೈಂ ಸ್ಟೋರಿ ಅಲ್ಲ ಅನ್ನೋದು ಗೊತ್ತಾಗುತ್ತೆ.

Takkar Kannada Film Trailer Bombat and thrilling

ಮನೋಜ್ ಮಾಸ್ ಅವತಾರ, ಭಜರಂಗಿ ಲೋಕಿ ನೆಗೆಟಿವ್ ರೋಲ್, ಹೆಣ್ಣು ಮಕ್ಕಳ ಪರಿಸ್ಥಿತಿ ಎಲ್ಲವೂ ಟ್ರೇಲರ್‌ನಲ್ಲಿ ಗಮನ ಸೆಳೆದಿದ್ದು ಟ್ರೇಲರ್ ಆಕರ್ಷಕವಾಗಿ ಮೂಡಿ ಬಂದಿದೆ. ಇನ್ನೇನಿದ್ರು ಸಿನಿಮಾ ಕಣ್ತುಂಬಿಕೊಳ್ಳೊದೊಂದೇ ಬಾಕಿ.

ರಘು ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸೈಬರ್ ಕ್ರೈಂ ಕಥಾಹಂದರ ಒಳಗೊಂಡಿದೆ. ಸಸ್ಪೆನ್ಸ್ ,ಆಕ್ಷನ್ ಥ್ರಿಲ್ಲರ್ ನಲ್ಲಿ ಸಿನಿಮಾ ಕಟ್ಟಿಕೊಟ್ಟಿದ್ದು, ಮಾಸ್ ಅಂಡ್ ಕ್ಲಾಸ್ ಆಡಿಯನ್ಸ್‌ಗೆ ಇಷ್ಟವಾಗುವಂತೆ ಚಿತ್ರ ಕಥೆ ಹೆಣೆದಿದ್ದಾರೆ. ಎಸ್ ಎಲ್ ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Takkar Kannada Film Trailer Bombat and thrilling

ಕದ್ರಿ ಮಣಿಕಾಂತ್ ಸಂಗೀತ, ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಸಾಧುಕೋಕಿಲ, ಭಜರಂಗಿ ಲೋಕಿ, ಶ್ರೀಧರ್, ಜೈಜಗದೀಶ್, ಸುಮಿತ್ರ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಮೇ 6ಕ್ಕೆ ಚಿತ್ರ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+